ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದಾಖಲೆಯ 7ನೇ ಬಾರಿಗೆ ಬಜೆಟ್ ಮಂಡನೆ (Union Budget 2024 Live) ಮಂಡಿಸುತ್ತದ್ದಾರೆ. ದೇಶದ ಜನರಿಗೆ ಬಜೆಟ್ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
ಲೈವ್ ಇಲ್ಲಿ ವೀಕ್ಷಿಸಿ
ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ
ಷೇರು ಪೇಟೆಯಲ್ಲಿ ತಲ್ಲಣ
ಬಜೆಟ್ ಮಂಡನೆ ಬೆನ್ನಲ್ಲೇ ಷೇರು ಪೇಟೆಯಲ್ಲಿ ತಲ್ಲಣ. ಸೆನ್ಸೆಕ್ಸ್ 983 ಅಂಕ ಮತ್ತು ನಿಫ್ಟಿ 338 ಅಂಕ ಇಳಿಕೆ.
ತೆರಿಗೆ ಲೆಕ್ಕ
3 ಲಕ್ಷ ರೂ. ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 7-10 ಲಕ್ಷ ರೂ. ಶೇ. 5ರಷ್ಟು ತೆರಿಗೆ, 7-10 ಲಕ್ಷ ರೂ.ಗೆ ಶೇ. 10ರಷ್ಟು ತೆರಿಗೆ, 10-15 ಲಕ್ಷ ರೂ. ಆದಾಯಕ್ಕೆ ಶೇ. 15ರಷ್ಟು ತೆರಿಗೆ. 15 ಲಕ್ಷ ರೂ. ಮೇಲ್ಪಟ್ಟು ಶೇ. 30ರಷ್ಟು ತೆರಿಗೆ.
ತೆರಿಗೆ ಪಾವತಿ ವಿಧಾನ ಇನ್ನಷ್ಟು ಸರಳ
ಟಿಡಿಎಸ್ ತಡಾಗಿ ಪಾವತಿಸಿದರೆ ಇನ್ನು ಮುಂದೆ ದಂಡವಿಲ್ಲ. ತೆರಿಗೆ ಪಾವತಿ ವಿಧಾನ ಇನ್ನಷ್ಟು ಸರಳಗೊಳಿಸಿದ ಕೆಂದ್ರ. ಹೀಡಿಕೆದಾರರಿಗೆ ವಿಧಿಸುತ್ತಿದ್ದ ಏಂಜಲ್ ಟ್ಯಾಕ್ಸ್ ರದ್ದು.
ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ
ಜಿಎಸ್‌ಟಿಯು ಬಡವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ. ಜಿಎಸ್‌ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು ಇಳಿಸಲು ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ.
ವಾತ್ಸಲ್ಯ ಯೋಜನೆ
ವಾತ್ಸಲ್ಯ ಯೋಜನೆ ಘೋಷಿಸಿದ ಕೇಂದ್ರ. ಈ ಮೂಲಕ ಬಾಲಕಿಯರಿಗೆ ಅನುಕೂಲ. ಈ ಯೋಜನೆ ಮೂಲಕ ಬಾಲಕಿಯರ ಹೆಸರಿನಲ್ಲಿ ಖಾತೆ ತೆರೆದು ಅವರ ಹೆಸರಿನಲ್ಲಿ ಹಣ ಜಮೆ.