ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದಾಖಲೆಯ 7ನೇ ಬಾರಿಗೆ ಬಜೆಟ್ ಮಂಡನೆ (Union Budget 2024 Live) ಮಂಡಿಸುತ್ತದ್ದಾರೆ. ದೇಶದ ಜನರಿಗೆ ಬಜೆಟ್ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆ ಮಾಡುವ ನಿರೀಕ್ಷೆ ಇದೆ. ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
ಲೈವ್ ಇಲ್ಲಿ ವೀಕ್ಷಿಸಿ
ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ
ಬಡ್ಡಿರಹಿತ ಸಾಲ
ಕಾರ್ಮಿಕರ ಅನುಕೂಲಕ್ಕಾಗಿ ಇ-ಶ್ರಮ ಪೋರ್ಟ್ ಆರಂಭ, ಭೂ ಅಧಾರ್ ಮೂಲಕ ಭೂ ದಾಖಲೆ ಡಿಜಿಟಲೀಕರಣ, ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ.
ಕಾಶಿ ಮಾದರಿಯಲ್ಲಿ ಅಭಿವೃದ್ಧಿ
ಗಯಾ, ಬೋಧ್‌ಗಯಾ ಅಭಿವೃದ್ಧಿ. ಒಡಿಶಾ ದೇಗುಲಗಳಿಗೆ ಸಹಾಯಹಸ್ತ. ಪ್ರವಾಸಿ ಸ್ಥಳವಾಗಿ ನಳಂದಾ ವಿವಿಯ ಅಭಿವೃದ್ಧಿ. ಬೋಧ್‌ಗಯಾ, ವಿಷ್ಣುಪಾದ ದೇವಸ್ಥಾನ ಕಾಶಿ ಮಾದರಿಯಲ್ಲಿ ಅಭಿವೃದ್ಧಿ.
ಐತಿಹಾಸಿಕ ದೇಗುಲಗಳಿಗೆ ಆರ್ಥಿಕ ನೆರವು
ಅಸ್ಸಾಂ, ಬಿಹಾರದಲ್ಲಿ ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ರೂ. ಘೋಷಣೆ. ಜತೆಗೆ ಬಿಹಾರದ ಐತಿಹಾಸಿಕ ದೇಗುಲಗಳಿಗೆ ಆರ್ಥಿಕ ನೆರವು.
ಮೂಲ ಸೌಕರ್ಯ ಅಭಿವೃದ್ಧಿಗೆ ನೆರವು
ರಾಜ್ಯಗಳಿಗೆ ಕೇಂದ್ರದಿಂದ ದೀರ್ಘಾವಧಿಯ ಸಾಲ ಘೋಷಣೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಅನುದಾನ. ಈ ಮೂಲಕ ಮೂಲ ಸೌಕರ್ಯ ಅಭಿವೃದ್ಧಿಗೆ ನೆರವು. ಪ್ರವಾಹ ಶಾಶ್ವತ ನಿಯಂತ್ರಣಕ್ಕೂ ಅನುದಾನ ಘೋಷಣೆ.
ಮಹಿಳಾ ಸಬಲೀಕರಣಕ್ಕೆ ಒತ್ತು
ಮಹಿಳಾ ಸಬಲೀಕರಣಕ್ಕೆ ಕೇಂದ್ರ ಒತ್ತು ನೀಡಲಿದೆ. ಜತೆಗೆ ಪಿಎಂ ಸೂರ್ಯ ಘರ್ ಯೋಜನೆ ಮೂಲಕ 1 ಕೋಟಿ ಮನೆಗಳಿಗೆ ಉಚಿತ ಸೋಲಾರ್ ವಿದ್ಯುತ್ ಒದಗಿಸಲಾಗುವುದು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ 4ನೇ ಹಂತ ಜಾರಿಗೊಳಿಸಲಾಗುವುದು ಎಂದು ಸಚಿವೆ ಘೋಷಿಸಿದರು.