Site icon Vistara News

Union Budget 2024 Live: ಕಸ್ಟಮ್ಸ್‌ ತೆರಿಗೆ ಇಳಿಸಿದ ಕೇಂದ್ರ; ವೈದ್ಯಕೀಯ ಉಪಕರಣಗಳಿಗೆ ಕಸ್ಟಮ್ಸ್‌ ಸುಂಕದಿಂದ ವಿನಾಯಿತಿ

Union Budget 2024

Union Budget 2024 Live Updates In Vistara News Kannada

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ದಾಖಲೆಯ 7ನೇ ಬಾರಿಗೆ ಬಜೆಟ್‌ ಮಂಡನೆ (Union Budget 2024 Live) ಮಂಡಿಸುತ್ತದ್ದಾರೆ. ದೇಶದ ಜನರಿಗೆ ಬಜೆಟ್‌ ಕುರಿತು ನಿರೀಕ್ಷೆಗಳು ಹೆಚ್ಚಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡುವ ನಿರೀಕ್ಷೆ ಇದೆ. ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.

ಲೈವ್‌ ಇಲ್ಲಿ ವೀಕ್ಷಿಸಿ

ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ

Ramesh B

1 ಕೋಟಿ ಮನೆಗಳಿಗೆ ಉಚಿತ ಸೋಲಾರ್‌ ವಿದ್ಯುತ್‌

ಕೈಗಾರಿಕಾ ಕಾರ್ಮಿಕರಿಗೆ ಬಾಡಿಗೆ ಮನೆ ನಿರ್ಮಾಣ, ದೇಶದ ಆಯ್ದ 100 ನಗರಗಳ ಅಭಿವೃದ್ಧಿ, ಆಯ್ದ ನಗರಗಳಲ್ಲಿ 100 ಫುಡ್‌ ಸ್ಟ್ರೀಟ್‌ ನಿರ್ಮಾಣ, 1 ಕೋಟಿ ಮನೆಗಳಿಗೆ ಉಚಿತ ಸೋಲಾರ್‌ ವಿದ್ಯುತ್‌ ಸೌಕರ್ಯ ಘೋಷಿಸಲಾಗಿದೆ.

Ramesh B

ಪ್ರಮುಖ ಘೋಷಣೆ

– ಕೃಷಿ ಕೇತ್ರಕ್ಕೆ 1.52 ಲಕ್ಷ ಕೋಟಿ ರೂ. ಅನುದಾನ

– ಪಿಎಂ ಆವಾಸ್‌ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣ

– ಗ್ರಾಮೀಣಾಭಿವೃದ್ಧಿ 2.66 ಲಕ್ಷ ಕೋಟಿ ರೂ.

– ದೇಶದಲ್ಲಿ 12 ಇಂಡಸ್ಟ್ರೀಯಲ್‌ ಪಾರ್ಕ್‌ಗಳ ನಿರ್ಮಾಣ

– ಆಂಧ್ರ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.

– ರೈತರಿಗಾಗಿ 10 ಸಾವಿರ ಬಯೋ ಸಂಶೋಧನಾ ಕೇಂದ್ರ ಸ್ಥಾಪನೆ

B Somashekhar

ಬಜೆಟ್‌ ಪ್ರಮುಖಾಂಶಗಳು…

– ಗ್ರಾಮೀಣ ಅಭಿವೃದ್ಧಿಗೆ 2.26 ಲಕ್ಷ ಕೋಟಿ ರೂ. ಮೀಸಲು

– ಮುದ್ರಾ ಯೋಜನೆ ಸಾಲದ ಮೊತ್ತ 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ

– ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂ.

– ಉದ್ಯೋಗ ಮತ್ತು ಶಿಕ್ಷಣಕ್ಕೆ 1.48 ಲಕ್ಷ ಕೋಟಿ ರೂ.

Rakshitha

ಗ್ರಾಮೀಣಾಭಿವೃದ್ಧಿಗೆ ಅನುದಾನ

ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನ ಘೋಷಿಸಲಾಗಿದ್ದು, 2.66ಲಕ್ಷ ಕೋಟಿ ರೂ ಮೀಸಲಿಡಲಿದೆ.

Rakshitha

ಸಣ್ಣ ಕೈಗಾರಿಕೆಗೆ ಒತ್ತು

ಮುದ್ರಾ ಸಾಲ ಪ್ರಮಾಣ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಳ

Exit mobile version