Site icon Vistara News

UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

UPSC Result 2024:

ಹೊಸದಿಲ್ಲಿ: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (Union Public Service Commission – UPSC) ನಡೆಸಿದ ಈ ವರ್ಷದ ಪರೀಕ್ಷೆಯ ಫಲಿತಾಂಶಗಳನ್ನು (UPSC Result 2024) ಪ್ರಕಟಿಸಿದೆ. ಆದಿತ್ಯ ಶ್ರೀವಾಸ್ತವ (Aditya Srivastava) ಅವರು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅಗ್ರಸ್ಥಾನ (UPSC Result 2024 topper) ಗಳಿಸಿದ್ದಾರೆ.

ಅಗ್ರಸ್ಥಾನ ಗಳಿಸಿದವರ ಟಾಪ್‌ 10 ಪಟ್ಟಿಯಲ್ಲಿ ಅನಿಮೇಶ್ ಪ್ರಧಾನ್, ಡೋಣೂರು ಅನನ್ಯಾ ರೆಡ್ಡಿ, ಪಿಕೆ ಸಿದ್ಧಾರ್ಥ್ ರಾಮ್‌ಕುಮಾರ್ ಮತ್ತು ರುಹಾನಿ ಅವರು ಪಟ್ಟಿಯಲ್ಲಿ ಅಗ್ರ ಐದು ಅಭ್ಯರ್ಥಿಗಳಾಗಿದ್ದರೆ, ಸೃಷ್ಟಿ ದಾಬಾಸ್, ಅನ್ಮೋಲ್ ರಾಥೋಡ್, ಆಶಿಶ್ ಕುಮಾರ್, ನೌಶೀನ್ ಮತ್ತು ಆಸಿಹ್ವರಾಯಮ್ ಪ್ರಜಾಪತಿ ನಂತರದ ಸ್ಥಾನಗಳಲ್ಲಿದ್ದಾರೆ.

2023ರ ಸೆಪ್ಟೆಂಬರ್ 15, 16, 17, 23 ಮತ್ತು 24ರಂದು ನಡೆದ ಪರೀಕ್ಷೆಗಳಲ್ಲಿ ನಾಗರಿಕ ಸೇವೆಗಳ ಮುಖ್ಯ ಸಂದರ್ಶನ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸೇವಾ ಆಯೋಗವು 2024ರ ಮೊದಲ ಎರಡು ತಿಂಗಳುಗಳಲ್ಲಿ ಸಂದರ್ಶಿಸಿತು.

2023ರ ಸೆಪ್ಟೆಂಬರ್‌ನಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯ ಫಲಿತಾಂಶ ಮತ್ತು 2024ರ ಜನವರಿ- ಏಪ್ರಿಲ್‌ಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ ಒಟ್ಟು 1,016 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳಲ್ಲಿ ಗುಂಪು ʼಎʼ ಮತ್ತು ಗುಂಪು ʼಬಿʼ ಹುದ್ದೆಗಳಿಗೆ ಇವರು ನಿಯುಕ್ತರಾಗುತ್ತಾರೆ.

ಶಿಫಾರಸು ಮಾಡಿದ 355 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ತಾತ್ಕಾಲಿಕವಾಗಿ ಇಟ್ಟುಕೊಳ್ಳಲಾಗಿದೆ. UPSC ತನ್ನ ಕ್ಯಾಂಪಸ್‌ನಲ್ಲಿರುವ ಪರೀಕ್ಷಾ ಹಾಲ್‌ನ ಬಳಿ “ಸಂಪರ್ಕ ಕೌಂಟರ್” ಅನ್ನು ತೆರೆದಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು/ನೇಮಕಾತಿಗಳ ಕುರಿತು ಯಾವುದೇ ಮಾಹಿತಿ/ಸ್ಪಷ್ಟೀಕರಣವನ್ನು ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 23385271/23381125/23098543 ಮೂಲಕ ಪಡೆಯಬಹುದು.

ಫಲಿತಾಂಶ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗೆ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಪ್ರಕಟಿಸಲಾಗುತ್ತದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು UPSC ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.

ಫಲಿತಾಂಶವನ್ನು ಪರಿಶೀಲಿಸಲು ಹೀಗೆ ಮಾಡಿ:

1) ನಿಮ್ಮ ಬ್ರೌಸರ್‌ನಲ್ಲಿ upsc.gov.in ತೆರೆಯಿರಿ

2) What’s New ಸೆಕ್ಷನ್‌ನ ಅಡಿಯಲ್ಲಿ ‘UPSC Civil Services Examination 2023 Final Results’ ಎಂಬುದರ ಮೇಲೆ ಕ್ಲಿಕ್ ಮಾಡಿ.

3) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಹೆಸರನ್ನು ಪಿಡಿಎಫ್ ಮೂಲಕ ನೀಡಲಾಗಿರುವುದು ತೆರೆಯುತ್ತದೆ.

ಇದನ್ನೂ ಓದಿ: UPSC CSE 2024: ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ನಿಯಮದಲ್ಲಿದೆ ಕೆಲವು ಬದಲಾವಣೆ; ಇಲ್ಲಿದೆ ಮಾಹಿತಿ

Exit mobile version