ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುರಿತು ಏನನ್ನೂ ಮಾತನಾಡುವುದಿಲ್ಲ ಎಂದಿರುವ ವಸತಿ ಸಚಿವ ವಿ. ಸೋಮಣ್ಣ, ಮುಂದಿನ ಭವಿಷ್ಯದಲ್ಲಿ ಏನಾಗಬೇಕು ಎಂದುಕೊಂಡಿದ್ದಾರೆಯೋ ಅದರ ಕಡೆ ಗಮನ ನೀಡಿದರೆ ಎಲ್ಲ ಚೆನ್ನಾಗಿರುತ್ತದೆ ಎಂದು ಬಿ.ವೈ. ವಿಜಯೇಂದ್ರ ಕುರಿತು ಮಾತನಾಡಿದ್ದಾರೆ.
ಯಡಿಯೂರಪ್ಪ ಈ ರಾಜ್ಯದ ನಾಯಕ. 4 ಬಾರಿ ಸಿಎಂ ಆಗಿದ್ದಾರೆ. ನಿಜಲಿಂಗಪ್ಪ, ದೇವರಾಜ ಅರಸು, ಜೆ.ಎಚ್. ಪಟೇಲ್ ಇಲ್ಲ. ಅವರಷ್ಟೆ ಹೆಸರು ಯಡಿಯೂರಪ್ಪಗೆ ಇದೆ. ನಾನು ಯಡಿಯೂರಪ್ಪ ಬಗ್ಗೆ ಮಾತಾಡಿಲ್ಲ. ಸ್ವಲ್ಪ ದಿನ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನಾನು ಏನು ಮಾಡಬೇಕು ಅಂತ ಅವರು ಮಾತಾಡಬೇಕು.
ಮೋದಿ ವಿಶ್ವದ ನಾಯಕರು. ವಿಜಯೇಂದ್ರ ಮಾತಿಗೆ ನಾನು ಏನು ಹೇಳೊಲ್ಲ. ಯಡಿಯೂರಪ್ಪ ಬಗ್ಗೆ ನಾನು ಯಾವತ್ತು ಮಾತಾಡಿಲ್ಲ. ಯಡಿಯೂರಪ್ಪ ಎಲ್ಲರಿಗೂ ನಾಯಕರು. ಅವರನ್ನು ಮುಂದಿಟ್ಟುಕೊಂಡು ಪ್ರೀತಿ, ವಿಶ್ವಾಸದ ಬಗ್ಗೆ ಮಾತಾಡೋದು ಬೇಡ. ವಿಜಯೇಂದ್ರ ಇನ್ನೂ ಯುವಕ, ಬೆಳೆಯಬೇಕು. ಅವರ ಬೆಳವಣಿಗೆ ಬಗ್ಗೆ ಅವರು ಮಾತಾಡಲಿ. ನಾವೆಲ್ಲ ಕಷ್ಟ ಪಟ್ಟು ಬಂದವರು. ಯಡಿಯೂರಪ್ಪ ಅವರಿಗೆ ಯಡಿಯೂರಪ್ಪ ಸಾಟಿ. ಸೋಮಣ್ಣಗೆ ಸೋಮಣ್ಣ ಸಾಟಿ. ಚುನಾವಣೆ ಇದೆ. ಎಲ್ಲರು ಒಟ್ಟಾಗಿ ಕೆಲಸ ಮಾಡೋಣ. ನನಗೆ ಕೆಲಸ ಮಾಡೋದು ಒಂದೇ ಗೊತ್ತಿರೋದು.
ವರಿಷ್ಠರು ಕೆಲಸ ಮಾಡಿ ಅಂತ ಹೇಳಿದ್ದಾರೆ ಕೆಲಸ ಮಾಡ್ತೀನಿ. ಪಾರ್ಟಿ ಏನು ಹೇಳುತ್ತೋ ಅದನ್ನ ಮಾಡ್ತೀನಿ. ನನಗೂ ಚಾಮರಾಜನಗರ, ಹಳೆ ಮೈಸೂರು ಭಾಗಕ್ಕೂ ಅವಿನಾಭಾವ ಸಂಬಂಧ. ನನ್ನಿಂದ ಮುಜುಗರ ಆಗೋದು ಬೇಡ. ಆದಿಚುಂಚನಗಿರಿ, ಸಿದ್ದಗಂಗಾ ಶ್ರೀ, ನನ್ನ ತಂದೆ ತಾಯಿ ಸಂಸ್ಕಾರ ಕೊಟ್ಟಿದ್ದಾರೆ. ನಾನು ಸ್ಟ್ರಾಟರ್ಜಿ ಮಾಸ್ಟರ್. ಬೈ ಎಲೆಕ್ಷನ್ ಗೆದ್ದು ತೋರಿಸಿದ್ದೇನೆ. ವರಿಷ್ಠರು ಏನ್ ಹೇಳ್ತಾರೋ ಅ ಕೆಲಸ ಮಾಡ್ತೀನಿ. ಈ ಎಲ್ಲಾ ವಿಚಾರಗಳನ್ನ ಇಲ್ಲೆ ಬಿಟ್ಟು ಬಿಡೋಣ ಎಂದರು.
ಅಮಿತ್ ಶಾ ಜತೆಗೆ ಭೇಟಿ ವಿಚಾರದಲ್ಲಿ ಪ್ರತಿಕ್ರಿಯಿಸಿ, ನಮಗೆ ಏನು ಏನು ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ. ನಾನು ಏನು, ನಂದು ಏನು ಕಾರ್ಯಕ್ರಮ ಮುಂದೆ ನಾನು ಏನು ಮಾಡಬೇಕೋ ಅದರ ಕಡೆ ಗಮನ ಕೊಡಬೇಕಿತ್ತು. ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡಂತಹ ಅಪ್ರತಿಮ ಪ್ರಧಾನಿ. ರಾಜ್ಯದಲ್ಲೂ ಕೂಡ ಯಡಿಯೂರಪ್ಪ ಅದೇ ರೀತಿ.
ಇದನ್ನೂ ಓದಿ: V. Somanna: ವಿಜಯೇಂದ್ರ ವಯಸ್ಸೆಷ್ಟು? ನನ್ನ ವಯಸ್ಸೆಷ್ಟು?: ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಚಿವ ವಿ. ಸೋಮಣ್ಣ
ವಿಜಯೇಂದ್ರ ಯಾರಿಗೆ ಎಚ್ಚರಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದ ಸೋಮಣ್ಣ, ಅವರು ಕೊಟ್ಟಿರುವ ಎಚ್ಚರಿಕೆ ನನ್ನ ತಲೆಯಲ್ಲೂ ಇಲ್ಲ. ಅವರಿಗೆ ನಾನು ಏನೂ ಹೇಳುವುದು ಇಲ್ಲ. ಯಡಿಯೂರಪ್ಪನವರ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಕತ್ತು ಎತ್ತಿ ಉಗುಳುರಿದ್ರೆ ಅದು ಅವರ ಮೇಲದ್ದೆ ಬಿದ್ದಂತೆ ಆಗುತ್ತದೆ. ಹಾಗಾಗಿ ಯಡಿಯೂರಪ್ಪನವರ ಬಗ್ಗೆ ಮಾತಾಡೋಷ್ಟು ಯಾರು ದೊಡ್ಡವರಲ್ಲ. ಯಡಿಯೂರಪ್ಪನವರ ಬಗ್ಗೆ ನಾವು ಯಾರೂ ಮಾತಾಡೋಕೆ ಆಗಲ್ಲ.
ನನಗೂ ಚಾಮರಾಜನಗರಕ್ಕೂ ನನಗೂ ಹಳೆ ಮೈಸೂರು ಭಾಗಕ್ಕೂ 45 ವರ್ಷದ ಅವಿನಾಭಾವ ಸಂಬಂಧ. ನನ್ನಲ್ಲಿರುವ ಶಕ್ತಿ ನನಗೆ ಗೊತ್ತು, ನಿಮ್ಮಲ್ಲಿರುವ ಶಕ್ತಿ ನಿಮಗೆ ಗೊತ್ತು. ಪಾರ್ಟಿ ಹೇಳಿದ ಕೆಲಸವನ್ನು ನಾವು ಮಾಡಬೇಕಾಗುತ್ತದೆ. ನನ್ನಿಂದ ಯಾರಿಗೂ ಮುಜುಗರ ತರೋದಕ್ಕೆ ಇಷ್ಟ ಪಡಲ್ಲ. ನನಗೆ ಇಬ್ಬರು ಗುರುಗಳು, ಒಬ್ಬರು ಆದಿಚುಂಚನಗಿರಿ ಯವರು, ಮತ್ತೊಬ್ಬರು ಸಿದ್ದಗಂಗಾ ಶ್ರೀಗಳು. ನನಗೆ ಜಾಸ್ತಿ ಸಂಸ್ಕಾರ ಇದೆ.
ನಾನು ಒಬ್ಬ ಚುನಾವಣಾ ಸ್ಟಾಟರ್ಜಿ ಮಾಸ್ಟರ್. ಬೈ ಎಲೆಕ್ಸನ್ ನಾನು ಹೇಗೆ ಕೆಲಸ ಮಾಡ್ತೀನಿ ಅಂತಾ ಎಲ್ಲ ಪಾರ್ಟಿಯವರಿಗೂ ಗೊತ್ತು. ನಾನು ಏನೋ ಕೆಲಸ ತಗೊತ್ತೀನೋ ಅದನ್ನು ಹಿಂದೆಯಿಂದ ನೋಡೋದಿಲ್ಲ. ನಾನು ಒಂದು ಪಾರ್ಟಿಯಲ್ಲಿದ್ಸಾಗ ಅಲ್ಲಿ ಮುಜುಗರ ತರುವ ಕೆಲಸ ನಾನು ಮಾಡಿದವನಲ್ಲ. ನಾನು ಮೂರು ಪಾರ್ಟಿ ನೋಡಿದ್ಸೇನೆ. ಹೀಗಾಗಿ ಇದಕ್ಕೆಲ್ಲ ತಿಲಾಂಜಲಿ ಆಡೋಣ, ಒಳ್ಳೆಯ ಕೆಲಸ ಮಾಡೋಣ ಎಂದರು.
ಆದರೆ ಕೆಲವೊಂದು ಸಾರಿ ಆಗುವಂತಹ ಸನ್ನಿವೇಶಗಳಲ್ಲಿ ಸತ್ಯಸತ್ಯಾತೆಗಳನ್ನು ಹೇಳಬೇಕಾಗುತ್ತದೆ. ವಿಜಯೇಂದ್ರಗೆ ಯಡಿಯೂರಪ್ಪ ಒಬ್ಬರೇ ಅಲ್ಲ ನಾಯಕರು. ನಮಗೂ ಅವರು ನಾಯಕರು, ಅವರು ನಿಮಗೆ ತಂದೆ ಇರಬಹುದು, ಯಡಿಯೂರಪ್ಪ ಮೇಲೆ ನಿಮ್ಮ ಒಬ್ಬರಿಗೆ ಅಲ್ಲ ಗೌರವ ಇರೋದು. ರಾಜ್ಯದ ಆರೂವರೆ ಕೋಟಿ ಜನರಿಂದಲೂ ಗೌರವ ಇದೆ. ವಿಜಯೇಂದ್ರ ಒಬ್ಬ ಯುವಕ ಇದ್ದಾನೆ. ಅವರು ಮುಂದೆ ಏನು ಆಗಬೇಕೋ ಎಂಬ ಕನಸ್ಸಿನಲ್ಲಿ ಅವ್ರು ಹೆಜ್ಜೆ ಹಾಕಿದ್ರೆ ಹೈ ಕ್ಲಾಸ್ ಆಗುತ್ತದೆ ಎಂದರು.