Site icon Vistara News

V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ

V Somanna

ಬೆಂಗಳೂರು: ಹೆಜ್ಜಾಲದಿಂದ ಆರಂಭಿಸಿ ಕನಕಪುರ, ಸಾತನೂರು, ಹಲಗೂರು , ಕೊಳ್ಳೇಗಾಲ- ಚಾಮರಾಜನಗರದವರೆಗೆ ಬರಲಿರುವ 142 km ರೈಲು ಮಾರ್ಗದ (Railway Line) ಸರ್ವೇ ಕಾರ್ಯ (Survey) ಮತ್ತೆ ಕೈಗೆತ್ತಿಕೊಳ್ಳಲಾಗುವುದು. 2019ರಲ್ಲೇ ಸರ್ವೆ ಆಗಿ ಸ್ಥಗಿತ ಆಗಿತ್ತು, ಈಗ ಮತ್ತೆ ಸರ್ವೇ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ (Karnataka Govt) ಜಾಗ ಕೊಡಬೇಕಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ (Central minister) ವಿ. ಸೋಮಣ್ಣ (V Somanna) ಹೇಳಿದ್ದಾರೆ.

ರೈಲ್ವೆ ಯೋಜನೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ನೇತೃತ್ವದ ಸಭೆ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. 1996-97ರಲ್ಲಿ ಈ ಯೋಜನೆ ಪ್ರಪೋಸಲ್ ಇತ್ತು. ಈಗ ನನಗೆ ಅವಕಾಶ ಸಿಕ್ಕಿದೆ. 697 ಎಕರೆ ಜಮೀನು ಬೇಕಾಗಬಹುದು. ಇದರಲ್ಲಿ ಅರಣ್ಯ ಜಮೀನು ಬರುವುದಿಲ್ಲ. ರೈತರ ಜಮೀನಿನ ಮೇಲೆ ಹೋಗುತ್ತದೆ. ಇನ್ನು ಹದಿನೈದು ದಿನಗಳಲ್ಲಿ ಇದಕ್ಕಾಗಿ ಸರ್ವೇ ಕಾರ್ಯ ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ಸ್ಟೇಷನ್‌ಗಳನ್ನು ವಿಶ್ವದರ್ಜೆಗೆ ಏರಿಸಲು 2022-23ರಲ್ಲಿ ಮಂಜೂರಾತಿ ನೀಡಲಾಗಿದೆ. ಇದರ ಯೋಜನೆಯ ಮೊತ್ತ ಬೆಂಗಳೂರು ಕಂಟೋನ್ಮೆಂಟ್ 485 ಕೋಟಿ ರೂ. ಹಾಗೂ ಯಶವಂತಪುರ ಸ್ಟೇಷನ್ 387 ಕೋಟಿ ರೂ. ಈ ಎರಡೂ ನಿಲ್ದಾಣ ಪುನರಾಭಿವೃದ್ಧಿ ಕಾರ್ಯವೂ 2025ರಲ್ಲಿ ಪೂರೈಸಲಾಗುವುದು. 2018-19ರ ಯಶವಂತಪುರ – ಚನ್ನಸಂದ್ರ 25 km ಹಾಗೂ ಬೈಯಪ್ಪನಹಳ್ಳಿ – ಹೊಸೂರು 48 km ಡಬಲಿಂಗ್ ಯೋಜನೆಗಳನ್ನು ಕ್ರಮವಾಗಿ ರೂ 314 ಕೋಟಿ ಹಾಗೂ ರೂ 500 ಕೋಟಿ ಮೊತ್ತದಲ್ಲಿ ಮಂಜೂರು ಮಾಡಲಾಗಿದ್ದು, ಕಾಮಗಾರಿ ಮುಂದುವರೆದಿದೆ ಎಂದಿದ್ದಾರೆ ಸೋಮಣ್ಣ.

ಯಶವಂತಪುರ – ಚನ್ನಸಂದ್ರ ಯೋಜನೆಯಲ್ಲಿ ಈಗಾಗಲೇ ಯಶವಂತಪುರ ಹೆಬ್ಬಾಳ 10.3 km ಗಳನ್ನೂ ಪೂರ್ಣಗೊಳಿಸಲಾಗಿದೆ. ಮೇ 2025ರಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. 1997-98 ರಲ್ಲಿ ಮಂಜೂರಾದ, ನೆನೆನಗುದಿಗೆ ಬಿದ್ದಿದ್ದ ಮಹತ್ವದ ಬೆಂಗಳೂರು – ವೈಟ್‌ಫೀಲ್ಡ್ 38 km ಕ್ವಾಡ್ರುಪ್ಲಿಂಗ್ ಯೋಜನೆಗಳನ್ನು ಈಗ ಕೈಗೆತ್ತಿಗೊಂಡು ಕಾಮಗಾರಿಗೆ ವೇಗ ನೀಡಲಾಗಿದ್ದು, ಬೆಂಗಳೂರು ದಂಡು – ಬೈಯಪ್ಪನಹಳ್ಳಿ ನಡುವೆ 13 ಕಾಮಗಾರಿ ನಡೆಯುತ್ತಿದೆ. ಇದರ ಯೋಜನೆ ಮೊತ್ತ ರೂ. 492 ಕೋಟಿ. ಜೂನ್ 2025ರಲ್ಲಿ ಈ ಯೋಜನೆಯನ್ನು ಪೂರ್ಣ ಮಾಡುವ ಗುರಿಯಿದೆ. ನನ್ನ ಮತ ಕ್ಷೇತ್ರದ ವಿಜಯನಗರ, ನಾಯಂಡಹಳ್ಳಿ, ಯೂನಿವರ್ಸಿಟಿಯಲ್ಲಿ ಕಾಮಗಾರಿಗಳನ್ನು ಸರಿಪಡಿಸುತ್ತೇವೆ ಎಂದು ಸೋಮಣ್ಣ ತಿಳಿಸಿದರು.

11ರಂದು ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳ ಜೊತ ಚರ್ಚೆ ಮಾಡಿದ್ದೇನೆ. ಇಲಾಖೆಯ ಸಾಧಕ ಭಾದಕಗಳ ಅರಿಯುವ ಕೆಲಸ ಮಾಡ್ತಿದ್ದೇನೆ. ರೈಲ್ವೆ ಇಲಾಖೆಗೆ ರಾಜ್ಯದಿಂದ ಅತಿರಥ ಮಹಾರಥರು ಮಂತ್ರಿಗಳಾಗಿ ಕೊಡುಗೆ ಕೊಟ್ಟಿದ್ದಾರೆ. ಅಶ್ವಿನಿ ವೈಷ್ಣವ್ ಹಾಗೂ ಜಲಶಕ್ತಿ ಸಚಿವ ಸಿ. ಆರ್ ಪಾಟೀಲ್ ನನಗೆ ಹೆಚ್ಚಿನ ಹುಮ್ಮಸ್ಸು ಕೊಟ್ಟಿದ್ದಾರೆ. ಐವತ್ತು ವರ್ಷಗಳಲ್ಲಿ ಆಗದಿರುವುದನ್ನು ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆ ಮಾಡಿ ತೋರಿಸಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿ ಮಿಲಿಟರಿ ಇದ್ದಂತೆ. ಇನ್ನೂ ಎರಡು ವರ್ಷಗಳಲ್ಲಿ ಕರ್ನಾಟಕ, ವಿಭಿನ್ನ ರೀತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಬದಲಾವಣೆ ಆಗುತ್ತದೆ. ನನ್ನ ನಲವತ್ತು ವರ್ಷಗಳ ಅನುಭವದೊಂದಿಗೆ ಬದಲಾವಣೆ ಆಗುತ್ತದೆ. ರೈಲ್ವೆ ಮೇಲ್ಸುತುವೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರ್ಧ ಅರ್ಧ ಹಣ ಕೊಡಬೇಕು. ಜಾಗವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದಿದ್ದಾರೆ ಸೋಮಣ್ಣ.

ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಮಾಹಿತಿ ಅವರು ನೀಡಿದರು.
ಹಾಸನ – ಬೆಂಗಳೂರು ಹೊಸ ಲೈನ್ : 166 km ರೂ 2010 ಕೋಟಿ ವೆಚ್ಚದಲ್ಲಿ 2017 ರಲ್ಲಿ ನಿರ್ಮಾಣಗೊಂಡಿದೆ
ಯಲಹಂಕ – ದೇವರಪಲ್ಲಿ ಡಬಲಿಂಗ್ : 72 km ರೂ 882 ಕೋಟಿ ವೆಚ್ಚದಲ್ಲಿ 2021ರಲ್ಲಿ ಪೂರ್ಣ ಗೊಂಡಿದೆ
2016 ರಲ್ಲಿ ರೂ 167 ಕೋಟಿ ವೆಚ್ಚದಲ್ಲಿ ಯಲಹಂಕ – ಚನ್ನಸಂದ್ರ 13km ಡಬಲಿಂಗ್
95 ಕೋಟೆ ವೆಚ್ಚದಲ್ಲಿ ಯಲಹಂಕ – ಯಶವಂತಪುರ 7km ಡಬಲಿಂಗ್ ಪೂರ್ಣಗೊಂಡಿದೆ
ಪ್ರಧಾನಿ ಮೋದಿಯವರ ಸಂಕಲ್ಪದಂತೆ ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ಉತ್ತಮ್ಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೈಯಪ್ಪನಹಳ್ಳಿಯಲ್ಲಿ ರೂ 314 ಕೋಟಿ ವೆಚ್ಚದಲ್ಲಿ 2022ರಲ್ಲಿ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣಗೊಂಡಿದೆ.
ರೂ 280 ಕೋಟಿ ವೆಚ್ಚದಲ್ಲಿ 11 RUB ಗಳ ಹಾಗೂ ರೂ 285 ಕೋಟಿ ವೆಚ್ಚದಲ್ಲಿ 12 ROB ಗಳ ನಿರ್ಮಾಣಗೊಂಡಿದೆ.

ಇದನ್ನೂ ಓದಿ: V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ

Exit mobile version