Site icon Vistara News

Vegetable Rates: ತರಕಾರಿ ಮುಟ್ಟಿದರೆ ಶಾಕ್‌, ಕಿಲೋಗೆ 320 ದಾಟಿದ ಬೀನ್ಸ್!‌

vegetable rates increase

ಬೆಂಗಳೂರು: ರಾಜಧಾನಿ ಹಾಗೂ ರಾಜ್ಯದ ಇತರ ಕಡೆಗಳಲ್ಲೂ ತರಕಾರಿ ಬೆಲೆಗಳು (vegetable rates increase) ಗಗನಕ್ಕೇರಿವೆ. ಶ್ರೀಸಾಮಾನ್ಯನ ಕೈ ಸುಡುತ್ತಿರುವ ತರಕಾರಿ ಬೆಲೆಗಳನ್ನು ಕಂಡು ವರ್ತಕರಿಗೆ ಕೂಡ ಚಿಂತೆಯಾಗಿದೆ. ಬೀನ್ಸ್‌ ದರ (Beans rate) ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆ.ಜಿ. ಬೀನ್ಸ್‌ ಬರೋಬ್ಬರಿ 200- 320 ರೂ.ವರೆಗೆ ತಲುಪಿದೆ. ರಾಜಧಾನಿಯ ಕೆಂಗೇರಿ, ಹೆಬ್ಬಾಳ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 200 ರೂ. ಇದ್ದರೆ, ಜಯನಗರ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 320 ರೂ. ಇದೆ.

ಬೀನ್ಸ್‌ನ ಬೆಲೆ ಬೆಂಗಳೂರಿನಲ್ಲಿ ನಿನ್ನೆಯೇ ಒಂದು ಕೆಜಿಗೆ 200 ರೂ. ಗಡಿ ದಾಟಿದೆ. ಕಳೆದ ವಾರ 60ರಿಂದ 80 ರೂಪಾಯಿ ಇದ್ದ ಬೀನ್ಸ್ ಬೆಲೆ ಈ ವಾರ ಮುಗಿಲು ಮುಟ್ಟಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಯಲ್ಲಿ ಬೀನ್ಸ್‌ 160ರಿಂದ 190 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆ ಹೊರಗಡೆ 180ರಿಂದ 230 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ತಾಜಾ ಬೀನ್ಸ್‌ ಸಿಗುತ್ತಿಲ್ಲ.

ಅಕಾಲಿಕ ತಾಪಮಾನ ಹಾಗೂ ಮಳೆಯಿಂದಾಗಿ ಇಳುವರಿ ನೆಲಕಚ್ಚಿದ ಪರಿಣಾಮ ಬೆಲೆಗಳು ಏರಿವೆ. ಫೆಬ್ರವರಿಯಿಂದಲೇ ಆರಂಭವಾದ ಬಿಸಿಲ ಧಗೆ ಮಾರ್ಚ್, ಏಪ್ರಿಲ್‌ನಲ್ಲಿ ತುತ್ತ ತುದಿಗೆ ತಲುಪಿತ್ತು. ಬರಗಾಲದಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಹಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಹೀಗಾಗಿ, ತರಕಾರಿ ಬೆಳೆಗಳು ಕೆಲವೆಡೆ ಒಣಗಿವೆ. ಮತ್ತೆ ಕೆಲವೆಡೆ ಬೆಳೆಯಾದರೂ ಹೂ ಉದುರಲು ಅರಂಭಿಸಿತು. ಹೀಗಾಗಿ, ಬೀನ್ಸ್‌ನ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಇದೇ ಅವಧಿಯಲ್ಲಿ ಶುಭ ಸಮಾರಂಭಗಳ ಸೀಸನ್‌ ಬಂದುದರಿಂದ ಬೀನ್ಸ್‌ ಸೇರಿ ತರಕಾರಿಗೆ ಹೆಚ್ಚಿನ ಬೇಡಿಕೆ ಬಂತು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಏಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದೆ.

ಬೀನ್ಸ್ ಜೊತೆಗೆ ಗೆಡ್ಡೆಕೂಸು, ಬೀಟ್ರೂಟ್, ಹೀರೇಕಾಯಿ ಎಲ್ಲದರ ದರವೂ ಏರಿಕೆಯಾಗಿದೆ. ಬೆಲೆಗಳು ಹೀಗಿವೆ:

ಬೀನ್ಸ್ : ₹180- ₹230
ಈರುಳ್ಳಿ : ₹30
ಬೀಟ್ರೂಟ್ : ₹40
ಬೆಂಡೆಕಾಯಿ : ₹45
ಗೆಡ್ಡೆಕೂಸು : ₹60
ಕ್ಯಾಪ್ಸಿಕಂ : ₹75 – ₹90
ಹೀರೇಕಾಯಿ : ₹50
ಬೆಳ್ಳುಳ್ಳಿ ₹300
ಆಲೂಗಡ್ಡೆ ₹40
ಕ್ಯಾರೆಟ್ ₹50
ಬೀಟ್‌ರೂಟ್ ₹100
ಟೊಮ್ಯಾಟೊ ₹50
ಎಲೆಕೋಸು ₹40
ಹೂಕೋಸು ಒಂದಕ್ಕೆ ₹40
ಬದನೆಕಾಯಿ ₹80

ಕೊತ್ತಂಬರಿ ಒಂದು ಕಟ್ಟು ₹50
ಪಾಲಕ್ ₹40
ಪುದಿನಾ ₹10
ಸಬ್ಸಿಗೆ ₹50
ಮೆಂತ್ಯ ₹50
ನುಗ್ಗೆಕಾಯಿ ಒಂದಕ್ಕೆ- ₹10- ₹12

ಇದನ್ನೂ ಓದಿ: Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Exit mobile version