Site icon Vistara News

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

K. Annamalai

ವಿಜಯಪುರ: ಲೋಕ ಸಭಾ ಕ್ಷೇತದ ವಿಜಯಪುರ ಅಭ್ಯರ್ಥಿ ರಮೇಶ್​ ಜಿಗಜಿಣಗಿ ಪರ ಗುರುವಾರ ಮಾಜಿ ಐಎಎಸ್​ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅವರು ಮತಯಾಚನೆ ಮಾಡಿದರು. ಈ ವೇಳೆ ಅಣ್ಣಾಮಲೈ ರಮೇಶ್​ ಅವರ ಸಾಧನೆಗಳನ್ನು ಹೊಗಳಿದರು. ತಮ್ಮನ್ನು ಹೊಗಳುತ್ತಿದ್ದಂತೆ ಭಾವುಕರಾದ ಜಿಗಜಿಣಗಿ ಅವರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ವಿಜಯಪುರ ನಗರದ ಮೀನಾಕ್ಷಿ ಚೌಕನಲ್ಲಿ ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಅಣ್ಣಾಮಲೈ ಅವರು ಮಾತನಾಡಿದರು. 7 ಬಾರಿ ಸತತಯಾಗಿ ಗೆಲ್ಲುವುದು ಸುಲಭವಲ್ಲ. 70 ವರ್ಷ ವಯಸ್ಸಿನ ರಮೇಶ ಜಿಗಜಿಣಗಿ ಅವರು ಗೆದ್ದೇ ಗೆಲ್ಲುತ್ತಾರೆ. ವಿಜಯಪುರ ಕ್ಷೇತ್ರದ ಜನರ ಪ್ರೀತಿ ಜಿಗಜಿಣಗಿಯವರ ಮೇಲಿದೆ ಎಂದು ಅಣ್ಣಾಮಲೈ ಹೇಳಿದರು. ಈ ವೇಳೆ ರಮೇಶ ಜಿಗಜಿಣಗಿ ಆನಂದಬಾಷ್ಪ ಸುರಿಸಿದರು.

ನಾವು ದೊಡ್ಡ ಸಂಖ್ಯೆಯಲ್ಲಿ ‌ನಾವು ಸೇರಿದ್ದೇವೆ. ಯುವಕರ ಬದುಕು ದೇಶದಲ್ಲಿ ಹೇಗೆ ಇರಬೇಕೆಂದು ಹೇಳಲು ಸೇರಿದ್ದೇವೆ. 26 ನೇ ವಯಸ್ಸಿನಲ್ಲಿ ಜಿಗಜಿಣಗಿ ಸಚಿವರಾಗಿದ್ದರು. 2014 ಮೇ 30ರಂದು ‌ನಾವು ಹೊಸ ರಾಜಕೀಯ ಅಧ್ಯಾಯ ಬರೆದೆವು. ಮೋದಿ ಅವರು ಪ್ರಧಾನಮಂತ್ರಿ ಆಗಬೇಕೆಂದು ಬಯಸಿದೆವು. ಪಿಎಂ‌ ಜಾಗದಲ್ಲಿ ಮೋದಿ ಅವರನ್ನು ಕೂರಿಸಿದೆವು. ಆ ವೇಳೆ 11 ಕೋಟಿ‌ಜನರಿಗೆ ಶೌಚಾಲಯ ಇರಲಿಲ್ಲ, 42 ಕೋಟಿ ಜನರಿಗೆ ಬ್ಯಾಂಕ್ ಅಕೌಂಟ್ ಇರಲಿಲ್ಲ. ಆದರೆ ಮೋದಿ ಬಂದ ಬಳಿಕ ಎಲ್ಲವೂ ಸಿಕ್ಕಿದೆ ಎಂದು ಅಣ್ಣಾಮಲೈ ಅವರು ಹೇಳಿದರು.

ಇದನ್ನೂ ಓದಿ: Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

ಕಾಂಗ್ರೆಸ್ ನವರು ಪ್ರತಿ ಚುನಾವಣೆಯಲ್ಲೂ ಬಡತನ ನಿರ್ಮೂಲನೆ ಮಾಡುತ್ತೇವೆಂದು ಭಾಷಣ ಮಾಡಿಕೊಂಡು ಬಂದಿದ್ದಾರೆ. ಆದರೆ ಬಡತನ ನಿರ್ಮೂಲನೆ ಮಾಡಲಿಲ್ಲ. ಈಗಲೂ ಅದೇ ಮಾತನಾಡುತ್ತಿದ್ದಾರೆ. ವಾಜಪೇಯಿ‌ 13 ದಿನ, 13 ತಿಂಗಳು ಹಾಗೂ ಐದು ವರ್ಷ ಸರ್ಕಾರ ಮಾಡಿದ್ದರು. ಮೋದಿ ಅವರಿಗೆ 10 ವರ್ಷ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ ಈಗಲೂ ಅದೇ ಬಡತನದ ಕುರಿತು ಮಾತನಾಡುತ್ತಿದೆ ಎಂದು ಅಣ್ಣಾಮಲೈ ಅವರು ಲೇವಡಿ ಮಾಡಿದರು.

ಒಂದು ವೋಟ್ ನಿಂದ ಏನಾಗುತ್ತದೆ ಎಂದು ಉದಾಸೀನ ಮಾಡಬೇಡಿ. ರಾಜಕೀಯ ವ್ಯವಸ್ಥೆ ಬಗ್ಗೆ ನಿರ್ಧರಿಸಲು ಮೋದಿಗೆ ವೋಟ್ ಮಾಡಿ. ರಮೇಶ ಜಿಗಜಿಣಗಿ ಮತ್ತೇ ಸಂಸದರಾಗಬೇಕು ಎಂದು ಹೇಳಿದರು

197 ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೋದಿ ಇಂತ ವ್ಯವಸ್ಥೆ ಮಾಡಿದ್ದಾರೆ. ದೇಶ ಮೊದಲು ಎಂಬುದು ಮೋದಿ‌ಯವರ ಸಿದ್ಧಾಂತ. ತಮಿಳುನಾಡಿನಲ್ಲಿ ಒಂದು‌ ಪಕ್ಷವಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬೆಂಬಲ ನೀಡಿದವರು ಅವರು. ತಮಗೆ ಬೇಕಾದ ಖಾತೆಗಳನ್ನು ಪಡೆದುಕೊಂಡರು. ತಮಿಳುನಾಡಿನಲ್ಲಿ ಏಳು ಕೇಂದ್ರ ಸಚಿವರಾಗಿದ್ದರು. 2 ಜಿ ಸ್ಪೆಕ್ಟ್ರಮ್ ಹಗರಣ ಮಾಡಿದರು ಎಂದು ಇಂಡಿಯಾ ಬ್ಲಾಕ್​ ಬಗ್ಗೆ ದೂರಿದರು.

ಜೂನ್ 4 ರ ಬಳಿಕ 70 ವರ್ಷದ ಮೇಲಿನವರಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಕೊಡೊದಾಗಿ ಮೋದಿ ಹೇಳಿದ್ದಾರೆ. ಮೋದಿ ಮನೆಯಿಲ್ಲದವರಿಗರ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. 295 ಭರವಸೆಗಳಲ್ಲಿ ಎಲ್ಲ ಭರವಸೆ ಈಡೇರಿಸಿದ್ದೇವೆ ಎಂದು ಅವರು ಹೇಳಿದರು.

ಈ ಚುನಾವಣೆಯಲ್ಲಿ ಶೇಕಡಾ 51 ಮತ ಬಿಜೆಪಿಗೆ ಬೀಳಬೇಕು. ಮೇಡ್ ಇನ್ ಇಂಡಿಯಾದಲ್ಲಿ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಇಳಿದಿದ್ದೇವೆ. 14 ದೇಶಗಳಿಗೆ‌ ನಾನಾ ಸರಕು ರಪ್ತು ಮಾಡುತ್ತಿದ್ದೇವೆ. ಕೊರೊನಾ‌ ಕಾಲದಲ್ಲಿ ಅಮೆರಿಕಾಗೂ ಮುನ್ನ ಲಸಿಕೆ ಕಂಡು‌ ಹಿಡಿದೇವು. 10 ವರ್ಷ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Exit mobile version