Site icon Vistara News

Kangana Ranaut : ಕ್ವೀನ್​ಗೆ ಪ್ರತಿಸ್ಪರ್ಧಿ ಕಿಂಗ್​​ ; ಮಂಡಿಯಲ್ಲಿ ಕಂಗನಾ ವಿರುದ್ಧ ವಿಕ್ರಮಾದಿತ್ಯ ಸಿಂಗ್

Kangana Ranaut

ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಂಗೆ ಎದ್ದು ಬಳಿಕ ಸಮಾಧಾನ ಮಾಡಿಕೊಂಡಿದ್ದ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರು ಹಿಮಾಚಲ ಪ್ರದೇಶದ ಮಂಡಿಯಲ್ಲಿ ಬಿಜೆಪಿಯ ಕಂಗನಾ ರಣಾವತ್ (Kangana Ranaut)​ ವಿರುದ್ಧ ಸ್ಪರ್ಧಿಸಲಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಶನಿವಾರ 16 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು ಅದರಲ್ಲಿ ಸಿಂಗ್ ಹೆಸರು ಪ್ರಕಟಿಸಲಾಗಿದೆ. ಹಿಮಾಚಲ ಪ್ರದೇಶದ (himachal pradesh) ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ (Veerabhadra Singh) ಅವರ ಪುತ್ರ 35 ವರ್ಷದ ವಿಕ್ರಮಾದಿತ್ಯ ಸಿಂಗ್ ಅವರು ತಮ್ಮ ತಾಯಿ ಹಾಲಿ ಸಂಸದೆ ಪ್ರತಿಭಾ ಸಿಂಗ್ ಅವರ ಬದಲಿಗೆ ಈ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಿಂಗ್​​ ರಾಜಮನೆತನದವರಾಗಿರುವ ಕಾರಣ ಇದನ್ನು ಕಿಂಗ್​ ವರ್ಸಸ್​ ಕ್ವೀನ್ ಎಂದೇ ಕರೆಯಲಾಗಿದೆ.

ಹಾಲಿ ಸಂಸದೆ ಕಿರಣ್ ಖೇರ್ ಬದಲಿಗೆ ಟಿಕೆಟ್​ ಪಡೆದಿದ್ದ ಬಿಜೆಪಿಯ ಸಂಜಯ್ ಟಂಡನ್ ವಿರುದ್ಧ ಮನೀಶ್ ತಿವಾರಿ ಚಂಡೀಗಢದಿಂದ ಸ್ಪರ್ಧಿಸಲಿದ್ದಾರೆ.

ಮಹೇಸಾನಾದಿಂದ ರಾಮ್ಜಿ ಠಾಕೂರ್, ಅಹಮದಾಬಾದ್ ಪೂರ್ವದಿಂದ ಹಿಮ್ಮತ್​​ಸಿನ್ಹ ಪಟೇಲ್, ರಾಜ್​ಕೋಟ್​ನಿಂದ ಪರೇಶ್ಭಾಯ್ ಧನಾನಿ, ನವಸಾರಿಯಿಂದ ನೈಶಾದ್ ದೇಸಾಯಿ, ಶಿಮ್ಲಾದಿಂದ ವಿನೋದ್ ಸುಲ್ತಾನ್ಪುರಿ, ಕಿಯೋಂಜಾರ್​​ನಿಂದ ಮೋಹನ್ ಹೆಂಬ್ರಮ್, ಬಾಲಸೋರ್​ನಿಂದ ಶ್ರೀಕಾಂತ್ ಕುಮಾರ್ ಜೆನಾ, ಭದ್ರಾಕ್​​ನಿಂದ ಅನಂತ್ ಪ್ರಸಾದ್ ಸೇಥಿ, ಜಜ್ಪುರದಿಂದ ಅಂಚಲ್ ದಾಸ್, ಧೆಂಕನಲ್ನಿಂದ ಸಶ್ಮಿತಾ ಬೆಹೆರಾ, ಕೇಂದ್ರಪಾರಾದಿಂದ ಸಿದ್ಧಾರ್ಥ್ ಸ್ವರೂಪ್ ದಾಸ್ ಅವರ ಹೆಸರುಗಳನ್ನು ಶನಿವಾರ ಘೋಷಿಸಲಾಗಿದೆ.

ಮಂಡಿಯಿಂದ ವಿಕ್ರಮಾದಿತ್ಯ ಸಿಂಗ್ ವರ್ಸಸ್ ಕಂಗನಾ ರಣಾವತ್​

ಹೆಸರು ಘೋಷಿಸುವ ಮೊದಲೇ, ಕಂಗನಾ ರಣಾವತ್​​ ವಿಕ್ರಮಾದಿತ್ಯ ಅವರನ್ನು ‘ಛೋಟಾ ಪಪ್ಪು’ ಎಂದು ಕರೆದಿದ್ದರು. ಈ ಮೂಲಕ ಮಂಡಿಯ ಜಿದ್ದು ಶುರುವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ವಿಕ್ರಮಾದಿತ್ಯ, ನಟಿ ಗೆ ಸ್ವಲ್ಪ “ಒಳ್ಳೆಯ ಬುದ್ಧಿ” ನೀಡುವಂತೆ ಭಗವಾನ್ ರಾಮನನ್ನು ಪ್ರಾರ್ಥಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: Job Alert: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ; ವಿವಿಧ ಹುದ್ದೆಗಳಿಗೆ ಏ. 25ರೊಳಗೆ ಅರ್ಜಿ ಸಲ್ಲಿಸಿ

“ನಾವು ನಮ್ಮ ಅಕ್ಕ ಕಂಗನಾ ರಣಾವತ್​​ ಅವರನ್ನು ಗೌರವಿಸುತ್ತೇವೆ. ಇಂದು ಅವರು ಮನಾಲಿಯ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಮಾತನಾಡುವ ಬದಲು, ಕೆಲವು ತಿಂಗಳ ಹಿಂದೆ ಮನಾಲಿಯಲ್ಲಿ ಸಂಭವಿಸಿದ ಶತಮಾನದ ಅತಿದೊಡ್ಡ ವಿಪತ್ತಿನ ಸಮಸ್ಯೆಗಳ ಬಗ್ಗೆ ಅವರು ಕೈಗೆತ್ತಿಕೊಂಡು ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ವಿಕ್ರಮಾದಿತ್ಯ ಹೇಳಿದ್ದರು.

ಇದಕ್ಕೂ ಮೊದಲು, ವಿಕ್ರಮಾದಿತ್ಯ ಕಂಗನಾ ಅವರನ್ನು ವಿವಾದದ ರಾಣಿ ಎಂದು ಕರೆದಿದ್ದರು. ಅವರಿಗೆ ಹಿಮಾಚಲದ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದರು. ಇದು ನಿಮ್ಮ ತಂದೆ ಅಥವಾ ಅಜ್ಜನ ಎಸ್ಟೇಟ್ ಅಲ್ಲ, ನೀವು ನನ್ನನ್ನು ಬೆದರಿಸಿ ವಾಪಸ್ ಕಳುಹಿಲು ಸಾಧ್ಯವಿಲ್ಲ. . ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಭಾರತ. ಚಹಾ ಮಾರಾಟ ಮಾಡುತ್ತಿದ್ದ ಸಣ್ಣ, ಬಡ ಹುಡುಗ ಜನರ ಅತಿದೊಡ್ಡ ನಾಯಕ ಮತ್ತು “ಪ್ರಧಾನ ಸೇವಕ” ಎಂದು ಪ್ರತ್ಯುತ್ತರ ಕೊಟ್ಟಿದ್ದರು.

ವಿಕ್ರಮಾದಿತ್ಯ ಸಿಂಗ್ ಈಗ ರಾಂಪುರ ಎಂದು ಕರೆಯಲ್ಪಡುವ ಹಿಂದಿನ ಭೂಶರ್ ಎಸ್ಟೇಟ್ಸ್​​​ ವಂಶಸ್ಥರಾಗಿದ್ದಾರೆ. ಅವರ ತಂದೆಯ ಮರಣದ ನಂತರ ಅವನನ್ನು ಹಿಂದಿನ ರಾಜಪ್ರಭುತ್ವದ ರಾಜ್ಯದ ರಾಜನಾಗಿ ಕಿರೀಟಧಾರಣೆ ಮಾಡಲಾಗಿತ್ತು.

ಹಿಮಾಚಲ ಪ್ರದೇಶದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ ಶಾಸಕರ ಅನರ್ಹತೆಯಿಂದಾಗಿ ತೆರವಾಗಿರುವ ಹಿಮಾಚಲ ಪ್ರದೇಶದ ಆರು ವಿಧಾನಸಭಾ ಸ್ಥಾನಗಳು ಸೇರಿದಂತೆ ಈ ನಾಲ್ಕು ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ. 2019 ರಲ್ಲಿ ಬಿಜೆಪಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

Exit mobile version