Site icon Vistara News

Viral News: ನೀರಿನ ಕೊಳಕ್ಕೆ ಬಿದ್ದ ಯಜಮಾನನನ್ನು ರಕ್ಷಿಸಿದ ನಾಯಿ; ಸಖತ್ ವೈರಲ್ ಈ ವಿಡಿಯೊ

Viral News

ಬೆಂಗಳೂರು: ನಾಯಿ ಹಾಗೂ ಮನುಷ್ಯರ ಮಧ್ಯೆ ಯಾವಾಗಲೂ ಒಂದು ವಿಶೇಷವಾದ ಬಂಧವಿದೆ. ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರೇಮಿಗಳು ಎಂದರೆ ತಪ್ಪಾಗಲಾರದು. ದುಬಾರಿ ಬೆಲೆ ತೆತ್ತು ನಾಯಿಗಳನ್ನು ಖರೀದಿಸುವವರೂ ಇದ್ದಾರೆ. ಇನ್ನು ಕೆಲವರು ಬೀದಿ ಬದಿಯ ನಾಯಿಗಳನ್ನು ಅಪ್ಪಿ ಮುದ್ದಾಡುವುದನ್ನು ನೀವು ನೋಡಿರಬಹುದು. ಮನುಷ್ಯ ಹಾಗೂ ನಾಯಿ ನಡುವಿನ ಪ್ರೀತಿಯ ಬಂಧದ ಕುರಿತು ಸಾಕಷ್ಟು ಸಿನಿಮಾಗಳು ಕೂಡ ಬಂದಿವೆ (Viral News) ಕೆಲವರು ನಾಯಿಯನ್ನು ತಮ್ಮ ಮಕ್ಕಳ ಹಾಗೇ ಸಾಕುತ್ತಾರೆ. ನಾಯಿ ಕೂಡ ತನ್ನ ಪ್ರೀತಿ ಹಾಗೂ ಕಾಳಜಿ ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ! ನಿಷ್ಠಾವಂತ ಪ್ರಾಣಿಯಾಗಿರುವುದರಿಂದ ಮನುಷ್ಯರಿಗೆ ತೀರಾ ಹತ್ತಿರವಾಗಿದೆ. ಮನುಷ್ಯರ ಜೊತೆ ಒಂದು ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದೆ. ಸಾಕುಪ್ರಾಣಿಯಾದ ನಾಯಿ ಮನುಷ್ಯರ ಖಿನ್ನತೆ, ಒತ್ತಡ, ಒಂಟಿತನವನ್ನು  ನಿಭಾಯಿಸಲು ಕೂಡ ಸಹಾಯ ಮಾಡುತ್ತದೆಯಂತೆ.ಇಷ್ಟೆಲ್ಲಾ ಪೀಠಿಕೆ ಯಾಕೆ ಎಂದು ಕೊಳ್ಳುತ್ತಿದ್ದೀರಾ…? ಹೌದು ಇಲ್ಲಿ ನಾಯಿಯೊಂದು ತನ್ನ ಯಜಮಾನನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ನೀರಿನ ಕೊಳಕ್ಕೆ ಜಿಗಿದ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ತಮ್ಮನ್ನು ಸಾಕಿದ ಯಜಮಾನನನ್ನು ಆಪತ್ತುಗಳಿಂದ ಕಾಪಾಡಿದ ನಾಯಿಗಳ ಕಥೆಯನ್ನು ಸಾಕಷ್ಟು ಕಡೆ ನೀವು ಓದಿರಬಹುದು, ಅಥವಾ ಕೇಳಿರಬಹುದು. ಇಲ್ಲಿ ಕೂಡ ಅದೇ ರೀತಿ ಒಂದು ಕತೆಯಿದೆ. ತನ್ನ ನಾಯಿಯ ಸಾಮರ್ಥ್ಯವನ್ನು ಪರೀಕ್ಷಿಸಲು ವ್ಯಕ್ತಿಯೊಬ್ಬರು ನೀರಿಗೆ ಬಿದ್ದ ಹಾಗೇ ನಟಿಸುತ್ತಾರೆ. ಆದರೆ ತನ್ನ ಯಜಮಾನ ನಿಜವಾಗಿಯೂ ನೀರಿಗೆ ಬಿದ್ದು ಬಿಟ್ಟಿದ್ದಾನೆ ಎಂದು ನಾಯಿ ನೀರಿನ ಕೊಳಕ್ಕೆ ಹಾರಿ ಯಜಮಾನನನ್ನು ರಕ್ಷಣೆ ಮಾಡಿದ ವಿಡಿಯೋ ಕ್ಲಿಪ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:Coorg Restaurants: ಬೇಸಿಗೆ ಪ್ರವಾಸಕ್ಕೆ ಹೋಗ್ತೀರಾ? ಕೊಡಗಿನ ಅತ್ಯುತ್ತಮ ರೆಸ್ಟೋರೆಂಟ್‌ಗಳ ಮಾಹಿತಿ ನಿಮಗಾಗಿ

ಮಾಲೀಕನನ್ನು ಈಜುಕೊಳದಿಂದ ಕಾಪಾಡಿದ ನಾಯಿ

ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ನಲ್ಲಿ ವೈರಲ್ ವೀಡಿಯೊದಲ್ಲಿ ನಾಯಿಯ ಯಜಮಾನ ತನ್ನ ನಾಯಿ ತಾನು ಅಪಾಯದ ಸ್ಥಿತಿಯಲ್ಲಿದ್ದರೆ ಹೇಗೆ ಕಾಪಾಡುತ್ತದೆ ಎಂದು ಪರೀಕ್ಷಿಸಬೇಕು ಎಂದು ನೀರಿನ ಕೊಳದಲ್ಲಿ ಮುಳುವ ಹಾಗೇ ನಟಿಸುತ್ತಾರೆ. ಯಜಮಾನನ ನಾಟಕದ ಬಗ್ಗೆ ಗೊತ್ತಿಲ್ಲದ ನಾಯಿ ಮಾತ್ರ ತನ್ನ ಯಜಮಾನ ನಿಜವಾಗಿಯೂ ನೀರಿಗೆ ಬಿದ್ದು ಬಿಟ್ಟಿದ್ದಾನೆ  ಎಂದು ಬೊಗಳುತ್ತಾ ನೀರಿನ ಕೊಳದ ಸುತ್ತ ಓಡಾಡುತ್ತದೆ. ಹಾಗೇ ಹೇಗಾದರೂ ಮಾಡಿ ಯಜಮಾನನನ್ನು ಉಳಿಸಿಕೊಳ್ಳಲು ನಾಯಿ ನೀರಿನ ಕೊಳಕ್ಕೆ ಹಾರಿ ಯಜಮಾನನ ಬಳಿಗೆ ಹೋಗಿ ಅವನನ್ನು ಕೊಳದ ಮೂಲೆಗೆ ಕರೆದುಕೊಂಡು ಬರುತ್ತದೆ. ಈ ವೈರಲ್ ಕ್ಲಿಪ್ ನಾಯಿಯ ನಿಷ್ಠೆ ಹಾಗೂ ಮಾಲೀಕನ ಮೇಲೆ ನಾಯಿಗಿರುವ ಕಾಳಜಿ ಮತ್ತೊಮ್ಮೆ ಸಾಬೀತುಪಡಿಸಿದೆ. ನಾಯಿಯ ಈ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡಿದೆ.

@AMAZINGNATURE ಎಂಬ ಖಾತೆಯಿಂದ ಈ ವಿಡಿಯೋವನ್ನು ಎಕ್ಸ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. “ನೀರಿನಲ್ಲಿ ಮುಳುಗುತ್ತಿರುವಂತೆ ನಟಿಸುತ್ತಿರುವ ಯಜಮಾನನ್ನು ನಾಯಿ ಉಳಿಸುತ್ತದೆಯೇ ಇಲ್ಲವೋ” ಎಂದು ನೋಡಲು ಈ ವಿಡಿಯೋವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನಾಯಿಯ ಈ ವಿಡಿಯೋ ಇಲ್ಲಿಯವರೆಗೆ, ಇದು 22.8 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

Exit mobile version