Site icon Vistara News

Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ

NCC Cadets beaten

ಥಾಣೆ, ಮಹಾರಾಷ್ಟ್ರ: ಎನ್‌ಸಿಸಿ ಕೆಡೆಟ್‌ಗಳನ್ನು (NCC Cadets) ಹೀನಾಯವಾಗಿ ಹೊಡೆಯುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಳೆಯ ನಡುವೆಯೇ ಕೊಚ್ಚೆ ಗುಂಡಿಯಲ್ಲಿ 8 ಯುವ ಎನ್‌ಸಿಸಿ ಕೆಡೆಟ್‌ಗಳನ್ನು ಪುಶ್-ಅಪ್‌ ಸ್ಥಿತಿಯಲ್ಲಿರಿಸಿ(push-up position), ಸಿನೀಯರ್ ಕೆಡೆಟ್‌ ಒಬ್ಬರು ಅವರ ಹಿಂಭಾಗಕ್ಕೆ ಕೋಲಿನಿಂದ ಜೋರಾಗಿ ಹೊಡೆಯುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ(Viral Video).

ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಸದಸ್ಯರು ತರಬೇತಿ ವೇಳೆ ನಡೆದ ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಮುಂಬೈಗೆ ಹೊಂದಿಕೊಂಡಿರುವ ಥಾಣೆಯ ಬಂದೋಡ್ಕರ್ ಕಾಲೇಜಿನಲ್ಲಿ ನಡೆಯುತ್ತಿರುವ ಎನ್‌ಸಿಸಿ ತರಬೇತಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಎನ್‌ಸಿಸಿ ಕೆಡೆಟ್‌ಗೆ ಅಮಾನವೀಯವಾಗಿ ಹೊಡೆಯುತ್ತಿರುವ ವಿಡಿಯೋ ವೈರಲ್

ವಿಡಿಯೋದಲ್ಲಿ ಕೋಲು ಹಿಡಿದಿರುವ ವ್ಯಕ್ತಿಯನ್ನು ಸೀನಿಯರ್ ಎನ್‌ಸಿಸಿ ಕೆಡೆಟ್ ಎಂದು ಗುರುತಿಸಲಾಗಿದೆ. ಸವಾಲಿನ ಕಸರತ್ತು ನಡೆಸಲು ಸಾಧ್ಯವಾಗದ ಎನ್‌ಸಿಸಿ ಕೆಡೆಟ್‌ಗಳಿಗೆ ಈ ಭಯಾನಕ ಶಿಕ್ಷೆಯನ್ನು ನೀಡಲಾಗುತ್ತಿದೆ. ಫುಶ್-ಅಪ್ ರೀತಿಯಲ್ಲಿ ಬಗ್ಗಿಸಿ, ಅವರ ಹಿಂಭಾಕ್ಕೆ ಕೋಲಿನಿಂದ ಜೋರಾಗಿ ಹೊಡೆಯುತ್ತಿರುವುದು ಅಮಾನವೀಯ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಸೀನಿಯರ್ ಕೆಡೆಟ್ ನೀಡುವ ಹೊಡೆತಗಳ್ನು ತಾಳಲಾರದೇ ಕೆಲವು ಕೆಡೆಟ್‌ಗಳ ಜೋರಾಗಿ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಇಡೀ ಅಮಾನುಷ ಘಟನೆಯನ್ನು ವಿದ್ಯಾರ್ಥಿಯೊಬ್ಬ ಕಿಟಕಿಯಿಂದಲೇ ಚಿತ್ರೀಕರಿಸಿದ್ದಾನೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಲೇಜ್‌ ಪ್ರಿನ್ಸಿಪಾಲ್ ಸುಚಿತ್ರಾ ನಾಯಕ್ ಅವರು, ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂಥ ನಡವಳಿಕೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಹಿರಿಯ ವಿದ್ಯಾರ್ಥಿಯ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Fact Check: ಕನ್ನಡ ಗೊತ್ತಿಲ್ಲದ್ದಕ್ಕೆ ಬಿಹಾರ ಯುವಕನ ಮೇಲೆ ದೌರ್ಜನ್ಯ ನಡೆಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

ಅಮಾನವೀಯವಾಗಿ ಶಿಕ್ಷೆ ನೀಡಿದ ವಿದ್ಯಾರ್ಥಿ ಕೂಡ ಎನ್‌ಸಿಸಿ ಕೆಡೆಟ್ ಆಗಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ ಎನ್‌ಸಿಸಿಯಿಂದ ಇಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಪ್ರಿನ್ಸಿಪಾಲ್ ಸುಚಿತ್ರಾ ನಾಯಿಕ್ ಹೇಳಿದ್ದಾರೆ. ಸುಮಾರು 40 ವರ್ಷಗಳಿಂದ ಇಲ್ಲಿ ಎನ್ ಸಿಸಿ ತರಬೇತಿ ನಡೆಯುತ್ತಿದೆ.ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾಡಿದ್ದಾನೆ. ಮಾನಸಿಕ ಅಸ್ವಸ್ಥರು ಮಾತ್ರ ಮಾಡಬಲ್ಲರು ಪ್ರಿನ್ಸಿಪಾಲ್ ಸುಚಿತ್ರಾ ನಾಯಿಕ್ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version