ಕೋಟಾ: ಚಲಿಸುತ್ತಿದ್ದ ಬೈಕಿನಲ್ಲಿ ಯುವ ಜೋಡಿಯೊಂದು ಚುಂಬಿಸುತ್ತಾ ಸಾಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ (Viral Video). ಅಪಾಯಕಾರಿ ಸ್ಟಂಟ್ (Bike Stunt) ಮಾಡುತ್ತಿರುವ ಅಶ್ಲೀಲ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನೆಟ್ಟಿಗರು ಶಿಸ್ತಿನ ಪಾಠ ಹೇಳಿದ್ದಾರೆ. ಚಲಿಸುತ್ತಿದ್ದ ಬೈಕ್ ಅನ್ನೇ ಶೃಂಗಾರ ಮಂಚ ಮಾಡಿಕೊಂಡಿದ್ದ ಜೋಡಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ವೈರಲ್ ಮಾಡಿದ್ದಾರೆ. ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿರುವ ಹುಡುಗನನ್ನು ಹುಡುಗಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪಾಯಕಾರಿ ಸ್ಟಂಟ್ ಮಾಡುವ ವೇಲೆ ಅವರು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಚರ್ಚೆಗೆ ಕಾರಣವಾಗಿದೆ.
ख़तरनाक।
— Sagar Kumar “Sudarshan News” (@KumaarSaagar) May 23, 2024
सोचिए ये इनके लिए मज़ा है।
लेकिन जरा सी भी चूक होते ही इनके घर के बाहर सफ़ेद टेंट और दरी बिछ सकती है। pic.twitter.com/YbUW4EMzqX
ರಾಜಸ್ಥಾನದ ಕೋಟಾದ ರಾಷ್ಟ್ರೀಯ ಹೆದ್ದಾರಿ 52 (ಎನ್ಎಚ್ -52) ನಲ್ಲಿ ಈ ನಾಚಿಕೆಗೇಡಿನ ಮತ್ತು ಅಪಾಯಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಪ್ರದೇಶದಕ್ಕೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು, ಮುಖ್ಯವಾಗಿ ನೀಟ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ದೇಶದಾದ್ಯಂತದಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಾರೆ. ನಾಚಿಕೆಗೇಡಿನ ಕೃತ್ಯವನ್ನು ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾದ ಜೋಡಿಯೂ ವಿದ್ಯಾರ್ಥಿಗಳಾಗಿದ್ದು, ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಹುಡುಗಿಯೊಂದಿಗೆ, ಬುದ್ಧಿಗೇಡಿ ಹುಡುಗ ಅಪಾಯಕಾರಿಯಾಗಿ ಬೈಕ್ ಸವಾರಿ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹೆದ್ದಾರಿಯಲ್ಲಿ ಭಾರಿ ವಾಹನಗಳು ಹೆಚ್ಚಿನ ವೇಗದಲ್ಲಿ ಹಾದುಹೋಗುತ್ತಿರುವುದನ್ನು ಸಹ ಕಾಣಬಹುದು. ವೀಡಿಯೊದಲ್ಲಿ, ಹುಡುಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಗೆಳೆಯನಿಗೆ ಅಂಟಿಕೊಂಡು ಭಾವೋದ್ರಿಕ್ತವಾಗಿ ಚುಂಬಿಸುತ್ತಿರುವುದೇ ವಿಶೇಷ.
ಬಾಲಕ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿರುವುದು ಕೂಡ ವೀಡಿಯೊದಲ್ಲಿ ರೆಕಾರ್ಡ್ ಅಗಿದೆ. ಹೆಚ್ಚಿನ ವೇಗದಲ್ಲಿ ಬೈಕ್ ಸವಾರಿ ಮಾಡುವಾಗ ಹುಡುಗಿ ಅವನನ್ನು ಚುಂಬಿಸುತ್ತಿರುವುದರಿಂದ ಅವನಿಗೆ ರಸ್ತೆಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ. , ಅವರೊಂದಿಗೆ ಬೈಕ್ ಸವಾರರ ಗುಂಪು ಕೂಡ ಇತ್ತು. ವೇಗವಾಗಿ ಚಲಿಸುತ್ತಿದ್ದ ಬೈಕಿನಲ್ಲಿ ಹುಚ್ಚು ಸ್ಟಂಟ್ ಮಾಡುವಾಗ ಇತರ ಬೈಕ್ ಸವಾರರು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು.
ಕಾನೂನುಗಳ ಉಲ್ಲಂಘನೆ
ಜೋಡಿಯೊಂದಿಗೆ ಸವಾರಿ ಮಾಡುತ್ತಿದ್ದ ಇತರ ಸವಾರರು ಸಹ ಹೆಲ್ಮೆಟ್ ಇಲ್ಲದೆ ಮೂರು ಬೈಕುಗಳಲ್ಲಿ ಟ್ರಿಪಲ್ ಸೀಟ್ ಸವಾರಿ ಮಾಡುತ್ತಿದ್ದರು. ಅದು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘನೆಯಾಗಿದೆ. ಅವರು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸುವಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.