Site icon Vistara News

Viral Video: ಮೆರವಣಿಗೆಯಲ್ಲಿ ಸಾಗಿ 200 ಕೋಟಿ ರೂ. ಜನರ ಮೇಲೆ ಸುರಿದ ಜೈನ ದಂಪತಿ; ವಿಡಿಯೊ ವೈರಲ್​

jain monk

ಗುಜರಾತ್: ದುಡ್ಡು ಯಾರಿಗೆ ಬೇಡ ಹೇಳಿ….? ದುಡ್ಡು ಇಲ್ಲದಿದ್ದರೆ ಬದುಕು ಕಷ್ಟ ಎಂಬ ಸ್ಥಿತಿ ಇದೆ. ಹೀಗಾಗಿ ದುಡ್ಡಿಗಾಗಿ ಹಗಲು ರಾತ್ರಿ ನಿದ್ದೆ ಬಿಟ್ಟು ದುಡಿಯುವವರನ್ನು ನಾವು ಕಂಡಿರುತ್ತೇವೆ. ಅಂಥವರ ಸಾಲಿನಲ್ಲಿ ನಾವು ಕೂಡ ಇರುತ್ತೇವೆ. ಇಡೀ ಜಗತ್ತಿನಲ್ಲಿ ದುಡ್ಡೇ ಜೀವನ ಎಂದು ಬದುಕುವ ಜನರೇ ತುಂಬಿದ್ದು, ಆಸ್ತಿಗಾಗಿ ಸಂಬಂಧಗಳನ್ನು ಲೆಕ್ಕಿಸದೇ ಜೀವಗಳನ್ನೇ ತೆಗೆಯುವಂತಹ ಕೀಳುಮಟ್ಟಕ್ಕೆ ಇಳಿದಿರುವಂತಹವರನ್ನು ನೋಡಿರುತ್ತೇವೆ. ಅಂಥದ್ದರಲ್ಲಿ ಕಷ್ಟಪಟ್ಟು ಸಂಪಾದಿಸಿದ ಕೋಟಿ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಆದರೆ, ಈ ಮನಸ್ಥಿತಿಗೆ ವ್ಯತಿರಿಕ್ತ ಎಂಬಂತೆ ತಮ್ಮಲ್ಲಿದ್ದ 200 ಕೋಟಿ ರೂಪಾಯಿ ಆಸ್ತಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಈ ಜೈನ ದಂಪತಿ ಸುದ್ದಿಯಾಗಿದ್ದಾರೆ. ಅದರಲ್ಲೂ ಅವರು ಸನ್ಯಾಸ ಸ್ವೀಕರಿಸುವ ಮೊದಲು ಮೆರವಣಿಗೆ ಮಾಡಿ ಇದ್ದ ನಗದನ್ನೆಲ್ಲಾ ಜನರ ಮೇಲೆ ಸುರಿದಿದ್ದಾರೆ. ಆ ವಿಡಿಯೊ ವೈರಲ್ ಆಗಿದೆ.

ತಮ್ಮ 200ಕೋಟಿ ಮೌಲ್ಯದ ಆಸ್ತಿಯನ್ನು ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ ಗುಜರಾತ್ ನ ಶ್ರೀಮಂತ ಜೈನ ದಂಪತಿಗಳನ್ನು ನೋಡಿದರೆ ನಿಜಕ್ಕೂ ಆಚ್ಚರಿಯಾಗುತ್ತದೆ. ಭವೇಶ್ ಭಂಡಾರಿ ಅವರು ಕಟ್ಟಡ ನಿರ್ಮಾಣ ಉದ್ಯಮಿಯಾಗಿದ್ದು, ಇವರು ಸಬರ್ಕಾಂತ ಮತ್ತು ಅಹಮದಾಬಾದ್ ಎರಡರಲ್ಲೂ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು 2022ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಇದೀಗ ಭಂಡಾರಿ ಮತ್ತು ಅವರ ಪತ್ನಿ ತನ್ನ ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ ದಂಪತಿ ಗುಜರಾತ್ ನ ಸಬರ್ ಕಾಂತ ಜಿಲ್ಲೆಯಲ್ಲಿ ಟ್ರಕ್ ಅನ್ನು ರಥದಂತೆ ಅಲಂಕರಿಸಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ವಾಹನದ ಮೇಲೆ ನಿಂತು ಮೆರವಣಿಗೆ ನಡೆಸಿದ್ದಾರೆ. ಕಿರಿದಾದ ರಸ್ತೆಯಲ್ಲಿ ಅವರು ಪ್ರಯಾಣಿಸುವಾಗ ಕುಟುಂಬದವರು ಅವರನ್ನು ಸುತ್ತುವರಿದಿದ್ದಾರೆ. ಭಂಡಾರಿ ಮತ್ತು ಆತನ ಪತ್ನಿ  ನೆರೆದಿದ್ದ ಜನರ ಮೇಲೆ ಬಟ್ಟೆಗಳನ್ನು ಹಾಗೂ ಹಣವನ್ನು ಎಸೆದಿದ್ದಾರೆ. ಹಣವನ್ನು ಪಡೆಯಲು ಜನರು ಮುಗಿಬಿದ್ದಿದ್ದಾರೆ. ಈ ವಿಡಿಯೊ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Lok Sabha Election 2024 : ಜಯನಗರದಲ್ಲಿ ಸೀಜ್‌ ಆದ ಕೋಟ್ಯಂತರ ಹಣ; ಇಬ್ಬರ ವಿರುದ್ಧ ಎಫ್‌ಐಆರ್‌

ಜೈನ ಧರ್ಮದಲ್ಲಿ ಸನ್ಯಾಸಕ್ಕೆ ಮಹತ್ವವಿದೆ

ಜೈನ ಧರ್ಮದಲ್ಲಿ ಅಹಿಂಸೆ ಮತ್ತು ತ್ಯಾಗಕ್ಕೆ ಗರಿಷ್ಠ ಮೌಲ್ಯವಿದೆ. ಸಂಪಾದಿಸಿದ್ದನ್ನು ದಾನ ಮಾಡುವ ಅಥವಾ ಭೌತಿಕ ಲೋಕ ನಶ್ವರ ಎಂಬಂತೆ ಸನ್ಯಾಸ ಸ್ವೀಕರಿಸುವುದು ಜೈನ ಸಮುದಾಯದಲ್ಲಿ ಸಾಧಾರಣವಾಗಿ ಕಂಡು ಬರುವ ಪ್ರಕ್ರಿಯೆ. ಕೋಟ್ಯಂತರ ರೂಪಾಯಿ ಸಂಪತ್ತನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದ ಹಲವಾರು ಪ್ರಕರಣಗಳು ಈ ಹಿಂದೆಯೂ ವರದಿಯಾಗಿದೆ. ಶ್ರೀಮಂತ ಉದ್ಯಮಿಯ ಸುಂದರಿ ಪುತ್ರಿ ಸನ್ಯಾಸದ ಕಡೆ ಒಲವು ತೋರಿದ ಸಂಗತಿಗಳನ್ನೂ ನೋಡಿದ್ದೇವೆ. ಹೀಗಾಗಿ ಜೈನ ಧರ್ಮದಲ್ಲಿ ಇದು ಸರ್ವೇಸಾಮಾನ್ಯ ಎಂದು ಅಂದುಕೊಳ್ಳಬಹುದು. ಆದಾಗ್ಯೂ ಕೋಟಿಗಟ್ಟಲೆ ಸಂಪತ್ತನ್ನು ತ್ಯಜಿಸುವರಿಗೆ ದೊಡ್ಡ ಪ್ರಮಾಣದ ಧಾರ್ಮಿಕ ಶ್ರದ್ಧೆ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

Exit mobile version