ಮುಂಬೈ: ಯುವಕರಿಗೆ ಚಲಿಸುತ್ತಿದ್ದ ವಾಹನಗಳ ಹಿಂದೆ ಓಡಿ ಅದನ್ನು ಹತ್ತುವ ಶೋಕಿ. ನಾವು ಹೆಚ್ಚಾಗಿ ಈ ದೃಶ್ಯವನ್ನು ಬಸ್ಸು, ರೈಲುಗಳನ್ನು ಹತ್ತುವಾಗ ಯುವಕರ ಈ ಸರ್ಕಸ್ ಅನ್ನು ಕಾಣುತ್ತೇವೆ. ಹಾಗೇ ಬಸ್ಸು ಅಥವಾ ರೈಲಿನ ಬಾಗಿಲಿನಲ್ಲಿ ನಿಂತು ನೇತಾಡುತ್ತಾ ಸಾಗುತ್ತಾರೆ. ಆದರೆ ಇದರಿಂದ ಅನೇಕರು ಅಪಾಯಕ್ಕೆ ಒಳಗಾಗಿದ್ದಾರೆ. ಇದನ್ನು ತಿಳಿದರೂ ಕೂಡ ಇನ್ನೂ ನಮ್ಮ ಯುವಕರು ಇಂತಹ ಸರ್ಕಸ್ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಿಂದ ಹೊರಗೆ ನೇತಾಡಿದ ಯುವಕನೊಬ್ಬ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಯುವಕನೊಬ್ಬ ರೈಲಿನ ಬಾಗಿಲು ಮುಚ್ಚಿದ್ದರೂ ಕೂಡ ಬಾಗಿಲಿನ ಹೊರಗೆ ನೇತಾಡುತ್ತಿದ್ದ. ಹಾಗೇ ತನ್ನ ಕೈಯನ್ನು ಸ್ವಲ್ಪ ಹೊರಗೆ ಚಾಚಿದ್ದಾನೆ. ಆ ವೇಳೆ ಆತ ಇದ್ದಕ್ಕಿದ್ದಂತೆ ಅಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಅವನು ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರರು ಭಯಭೀತರಾದರು. ಈ ಭಯಾನಕ ಅಪಘಾತವನ್ನು ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ. ಹಾಗೇ ಘಟನೆಯ ಸಮಯ ಮತ್ತು ಸ್ಥಳ ತಿಳಿದುಬಂದಿಲ್ಲ.
To run family we need Job, To save Job , have to attend office in time, To attend office we have to catch Train, To catch daily late , Overcrowded trains we have to risk our life . Family is more important than LIFE and for @RailMinIndia Mails and Express are important Than Lives pic.twitter.com/tvlloMwoI9
— मुंबई Mumbai Rail Pravasi Sangha (@MumRail) July 25, 2024
ಆದರೆ ಈ ಘಟನೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ಕಳುಹಿಸಲಾಗಿದೆ. ವಿಲಕ್ಷಣ ಅಪಘಾತದಿಂದ ಆ ಯುವಕ ಬದುಕುಳಿದಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಹಿಂದೆ ಕೂಡ ಮುಂಬೈನ ಉಪನಗರ ಸ್ಥಳೀಯ ರೈಲು ಚಲಿಸುವಾಗ ಅಪಾಯಕಾರಿ ಸ್ಟಂಟ್ ಮಾಡಿದ ಆರೋಪದ ಮೇಲೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪತ್ತೆ ಹಚ್ಚಿದ್ದರು. ಆತ ಫರ್ಹತ್ ಅಜಮ್ ಶೇಖ್ ಎಂಬುದಾಗಿ ತಿಳಿದುಬಂದಿದ್ದು, ಈ ಯುವಕ ಇಂತಹ ಸ್ಟಂಟ್‌ಗಳನ್ನು ಮಾಡಿ ಅಪಾಯಕ್ಕೆ ಒಳಗಾಗಿದ್ದಕ್ಕೆ ಗಂಭೀರ ಉದಾಹರಣೆಯಾಗಿದ್ದಾನೆ.
#Mumbai
— मुंबई Matters™ (@mumbaimatterz) July 14, 2024
Attn : @RailMinIndia @drmmumbaicr @grpmumbai @RPFCR @Central_Railway @cpgrpmumbai
Such Idiots performing Stunts on speeding #MumbaiLocal trains are a Nuisance just like the Dancers inside the trains.
Should be behind Bars.
Loc: Sewri Station.#Stuntmen pic.twitter.com/ZWcC71J44z
ಇದನ್ನೂ ಓದಿ: ಊಟದ ಪಾರ್ಸೆಲ್‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್; 35,000 ರೂ. ದಂಡ ಹಾಕಿದ ಕೋರ್ಟ್!
ಈತ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಒಂದು ಕೈ ಮತ್ತು ಕಾಲನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ಶೇಖ್ ಈಗ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಆಗದೆ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ರೈಲ್ವೆ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡದಂತೆ ಕಠಿಣ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.