ಪ್ಯಾನ್ ಕಾರ್ಡ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡುವ 2023ರ ಜೂನ್ 30ರ ಗಡುವು ಮೀರಿದೆ. ನಿಮ್ಮ ಪ್ಯಾನ್ ಕಾರ್ಡ್ ಇನ್ನೂ ಆಧಾರ್‌ಗೆ ಲಿಂಕ್ ಆಗಿರದಿದ್ದರೆ 2023ರ ಜುಲೈ 1ರಿಂದ ( PAN -Aadhaar linking) ನಿಷ್ಕ್ರಿಯವಾಗಿರುತ್ತದೆ. ಸಿಬಿಡಿಟಿ ಅಧಿಸೂಚನೆ ಇದನ್ನು ತಿಳಿಸಿದೆ. ಏಕೆಂದರೆ ಈ ಸಲ ಗಡುವನ್ನು ಸರ್ಕಾರ ವಿಸ್ತರಿಸಿಲ್ಲ. ಈ ಹಿಂದೆ ಹಲವಾರು ಬಾರಿ ವಿಸ್ತರಿಸಿತ್ತು. ಹಾಗಾದರೆ ಇದರ ಪರಿಣಾಮಗಳೇನು? ನೋಡೋಣ.
ಷೇರುದಾರರಿಗೆ ಸಿಗುವ ಡಿವಿಡೆಂಡ್ ಮೇಲೆ ಇದು ಪ್ರಭಾವ ಬೀರುತ್ತದೆ. ಇದರಲ್ಲಿ ಅವರ ರೆಸಿಡೆನ್ಸಿ ಸ್ಟೇಟಸ್ ಮತ್ತು ಐಟಿ ಕಾಯಿದೆಯ ಕ್ಲಾಸಿಫಿಕೇಶನ್ ನಿರ್ಣಾಯಕವಾಗುತ್ತದೆ. ಹೀಗಾಗಿ ಕಾಯಿದೆ ಪ್ರಕಾರ ಆಧಾರ್ ಜತೆಗೆ ಪ್ಯಾನ್ ಲಿಂಕ್ ಮಾಡದವರಿಗೆ ಡಿವಿಡೆಂಡ್ ಕುರಿತ ಟಿಡಿಎಸ್ ಕಡಿತ ಹೆಚ್ಚಲಿದೆ. ಟಿಸಿಎಸ್ ಕಡಿತದ ಪ್ರಮಾಣವೂ ಏರಿಕೆಯಾಗಲಿದೆ. ಯಾವುದೇ ರಿಫಂಡ್ ಸಿಗುವುದಿಲ್ಲ. ರಿಫಂಡ್ ಮೇಲಿನ ಬಡ್ಡಿ ದರ ಸಿಗದು.
ಗ್ರಾಸಿಮ್ ಇಂಡಸ್ಟ್ರಿ ಡಿವಿಡೆಂಡ್ ಸ್ವೀಕರಿಸುವವರಿಗೆ ಕಳಿಸಿರುವ ಇ-ಮೇಲ್‌ನಲ್ಲಿ ಆಧಾರ್ ಜತೆಗೆ ಪ್ಯಾನ್ ಲಿಂಕ್ ಆಗದಿದ್ದರೆ ಡಿವಿಡೆಂಡ್ ಮೇಲೆ 20% ತೆರಿಗೆ ಕಡಿತವಾಗಲಿದೆ ಎಂದು ತಿಳಿಸಿದೆ. ಇಲ್ಲದಿದದರೆ ಸೆಕ್ಷನ್ 194 ಪ್ರಕಾರ 10% ತೆರಿಗೆ ಕಡಿತ ಇರುತ್ತದೆ.
ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಕೆಲವು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಆದಾಯ ತೆರಿಗೆ ವಿವರ ಸಲ್ಲಿಕೆ (ಐಟಿಆರ್) ಸಾಧ್ಯವಾಗುವುದಿಲ್ಲ. ಆಧಾರ್ ಜತೆಗೆ ಪ್ಯಾನ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್ ದಾಖಲೆ ಅಗತ್ಯವಿರುವ ರಿಫಂಡ್‌ಗಳು ನೆರವೇರುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ ಐರಿ ರಿಟರ್ನ್ ಮಾಡಲು ಕಷ್ಟವಾಗಬಹುದು. ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗಿ ಬರಬಹುದು. ತೆರಿಗೆ ಬೆನಿಫಿಟ್ ಸಿಗದೆ ಹೋಗಬಹುದು. ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಕಷ್ಟವಾಗಬಹುದು. ಕಾರು, ಗೃಹಸಾಲವನ್ನು, ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್‌ಗಳಿಂದ ಪಡೆಯಲು ಕಷ್ಟ ಸಾಧ್ಯವಾಗಬಹುದು.
ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ? ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತೆ ಸಕ್ರಿಯಗೊಳಿಸಬಹುದು. 1000 ರೂ. ದಂಡ ಪಾವತಿಸಿ ಆಧಾರ್-ಪ್ಯಾನ್ ಲಿಂಕ್ ಮಾಡಿದ ಬಳಿಕ ಪ್ಯಾನ್ ಸಕ್ರಿಯವಾಗುತ್ತದೆ. ಆದರೆ ಈ ಸಲ ಇದಕ್ಕಾಗಿ 30 ದಿನಗಳ ಕಾಲ ಕಾಯಬೇಕಾಗುತ್ತದೆ.
ಇದನ್ನೂ ಓದಿ: Vistara Money Plus : ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ಕೊಡುವಾಗ ಇರಲಿ ಎಚ್ಚರ, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್ ವಿಡಿಯೊ
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ www. incometax.gov.in ಲಿಂಕ್ ವಿಭಾಗದಲ್ಲಿ Link Aadhaar Status ಸೆಲೆಕ್ಟ್ ಮಾಡಿ ಪ್ಯಾನ್ ಮತ್ತು ಆಧಾರ್ ಸಂಖ್ಯೆ ಟೈಲಿಸಿ. ಬಳಿಕ View link Aadhaar status ಅನ್ನು ಕ್ಲಿಕ್ಕಿಸಿ. ಆಗ ಸ್ಟೇಟಸ್ ಡಿಸ್‌ಪ್ಲೇ ಆಗುತ್ತದೆ.