ಬೆಂಗಳೂರು: ಅತಿ ಕಡಿಮೆ ಅವಧಿಯಲ್ಲಿ ನಾಡಿನ ಜನರ ಅಚ್ಚುಮೆಚ್ಚಿನ ಟಿವಿ ಚಾನೆಲ್ ಆಗಿ ಹೊರಹೊಮ್ಮಿರುವ ವಿಸ್ತಾರ ನ್ಯೂಸ್, ಲೋಕಸಭೆ (Lok Sabha Election 2024) ಚುನಾವಣೆಯಲ್ಲಿನ ಜನರ ನಾಡಿಮಿಡಿತ ಅರಿಯಲು ‘ಪೋಲಿಂಗ್ ಬೂತ್ʼ (Vistara news polling booth) ತೆರೆದಿದೆ. ಲೋಕಸಭೆ ಕ್ಷೇತ್ರಗಳ ಜನ ನೇರವಾಗಿ ಈ ಪೋಲಿಂಗ್ ಬೂತ್‌ಗೆ ಫೋನ್ ಮಾಡಿ ತಮ್ಮ ಸಂಸದರು ಯಾರಾಗಬೇಕು, ಯಾವ ಪಕ್ಷದವರಾಗಬೇಕು ಎಂದು ತಿಳಿಸುವ ಅಪೂರ್ವ ಅವಕಾಶ ಇದು.
ಉದ್ಘಾಟನೆ ಯಾರಿಂದ?
ಮಾರ್ಚ್ 11ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಖ್ಯಾತ ವೈದ್ಯ, ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್ ಉದ್ಘಾಟಿಸಲಿದ್ದಾರೆ.
ಏನಿದು ಪೋಲಿಂಗ್ ಬೂತ್?
- ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
- ಸೋಮವಾರದಿಂದ ನಿತ್ಯ ಎರಡು ಲೋಕಸಭೆ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ.
- ಇಲ್ಲಿರುವ ಟೈಮ್ಟೇಬಲ್ ಅನ್ನು ದಯವಿಟ್ಟು ಗಮನಿಸಿ.
- ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಫೋನ್ ಮಾಡಬಹುದು.
- ಮಧ್ಯಾಹ್ನ 2 ಗಂಟೆ ಮತ್ತು ರಾತ್ರಿ 8 ಗಂಟೆಯ ನ್ಯೂಸ್ನಲ್ಲಿ ಆಯಾ ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗುವುದು.
ಸೋಮವಾರ ಯಾವ ಕ್ಷೇತ್ರ?
ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಂಡ್ಯ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಬೆಳಗಾವಿ ಕ್ಷೇತ್ರದ ಜನ ಫೋನ್ ಮಾಡಿ ಓಟ್ ಮಾಡಬಹುದು.
ದೂರವಾಣಿ ಸಂಖ್ಯೆ: 080-69554488
ಇದನ್ನೂ ಓದಿ | Lok Sabha Election 2024: ಮಾರ್ಚ್ 14ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ?