Site icon Vistara News

VISTARA TOP 10 NEWS : ರಾಜಧಾನಿಯಲ್ಲಿಅನ್ನದಾತರ ಹವಾ, ಗಲ್ಫ್‌ನಲ್ಲಿ ಮೋದಿ ಹವಾ ಮತ್ತು ಇತರ ಸುದ್ದಿ

Vistara top 10 News 13022024

1.ರಾಷ್ಟ್ರ ರಾಜಧಾನಿಯತ್ತ ಅನ್ನದಾತರ ನಡಿಗೆ; ಕನಿಷ್ಠ ಬೆಂಬಲ ಬೆಲೆ ನಿಗದಿ ಕಾನೂನಿಗೆ ಹೋರಾಟ
ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಮಾಡುವ ಕಾನೂನು ರಚನೆ ಆಗ್ರಹಿಸಿ ರಾಷ್ಟ್ರಾದ್ಯಂತದಿಂದ ಬಂದಿರುವ ರೈತರು ರಾಷ್ಟ್ರ ರಾಜಧಾನಿ ದಿಲ್ಲಿಗೆ ನುಗ್ಗಲು ಸಜ್ಜಾಗಿದ್ದಾರೆ. ಹರಿಯಾಣದ ಶಂಭು ಗಡಿಯ ಮೂಲಕ ಸಾವಿರಾರು ರೈತರು ಒಳಬರಲು ಪ್ರಯತ್ನಿಸಿದಾಗ ಅವರನ್ನು ತಡೆಯುವ ಪ್ರಯತ್ನ ನಡೆಯಿತು. ಆದರೆ, ಅಶ್ರುವಾಯು ಪ್ರಯೋಗಕ್ಕೂ ಅವರು ಮಣಿಯದೆ ದಿಲ್ಲಿಯತ್ತ ಹೊರಟಿದ್ದಾರೆ. ಇದೀಗ ದಿಲ್ಲಿಯಲ್ಲಿ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಶಂಭು ಗಡಿಯಲ್ಲಿ ನಡೆದ ಮಾತುಕತೆ ಫಲ ನೀಡಿಲ್ಲ.

ಈ ವರದಿಯನ್ನು ಓದಿ : 6 ತಿಂಗಳ ಪಡಿತರ ತೆಗೆದುಕೊಂಡು ಪ್ರತಿಭಟನೆಗೆ ಹೊರಟ ರೈತರು

2.Ashok Chavan: ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್; ರಾಜ್ಯಸಭೆಗೆ ಸ್ಪರ್ಧೆ
 ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ (Congress Party) ರಾಜೀನಾಮೆ ನೀಡಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ (Ashok Chavan) ಅವರು ಮಂಗಳವಾರ ಭಾರತೀಯ ಜನತಾ ಪಾರ್ಟಿಯನ್ನು (BJP Party) ಸೇರ್ಪೆಯಾದರು. ಇದರ ಬೆನ್ನಲ್ಲೇ ಅವರು ರಾಜ್ಯಸಭೆ ಚುನಾವಣೆಲ್ಲಿ (Rajya Sabha Election) ಸ್ಪರ್ಧಿಸಲು ಮುಂದಾಗಿದ್ದು, ಫೆಬ್ರವರಿ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕುವಂತೆ ಪಕ್ಷಾತೀತ ಒತ್ತಾಯ; ಕಠಿಣ ಕ್ರಮ ಎಂದ ಡಾ.ಜಿ. ಪರಮೇಶ್ವರ್
ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎಂಬ ಕೂಗು ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಮಂಗಳವಾರ ಕೇಳಿಬಂತು. ಬೆಟ್ಟಿಂಗ್‌ ಎಂಬುವುದು ಸಾಮಾಜಿಕ ಪಿಡುಗಾಗಿದೆ, ಬುಕ್ಕಿಗಳು ಮೂರು ಪಕ್ಷಗಳ ಜತೆ ಗುರುತಿಸಿಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಶಾಸಕರು ಒತ್ತಾಯಿಸಿದರು. ಬೆಟ್ಟಿಂಗ್‌ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಕೊಲ್ಲಿಯಲ್ಲಿ ಮೋದಿ : ಯುಎಇನಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರು ಅಬುಧಾಬಿಯಲ್ಲಿ ಯುಪಿಐ ರೂಪೇ ಕಾರ್ಡ್ (UPI RuPay Card) ಸೇವೆಗಳಿಗೆ ಮಂಗಳವಾರ ಚಾಲನೆ ನೀಡಿದರು. ಇದು ಉಭಯ ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಮಂತ್ರಿಯವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಸಹಿ ಮಾಡಿದ ಇಂಟರ್ಲಿಂಕಿಂಗ್ ಪಾವತಿ ಮತ್ತು ಸಂದೇಶ ವ್ಯವಸ್ಥೆಗಳ ಕುರಿತಾದ ತಿಳುವಳಿಕಾ ಒಪ್ಪಂದವನ್ನು ಅನ್ವಯ ಈಗ ಸೇವೆಗೆ ಚಾಲನೆ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಉತ್ತರಾಖಂಡ ಹಿಂಸಾಚಾರ; ಪ್ರಮುಖ ಆರೋಪಿ ಅಬ್ದುಲ್‌ನಿಂದ 2.44 ಕೋಟಿ ರೂ. ವಸೂಲಿ! ಉತ್ತರಾಖಂಡದ ಹಲ್ದ್ವಾನಿಯಲ್ಲಿ (Haldwani Violence) ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾ ನೆಲಸಮ (Illegal Madrasa) ಮಾಡುವ ವೇಳೆ ಸಂಭವಿಸಿದ ಹಿಂಸಾಚಾರದ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ (Abdul Malik) ವಿರುದ್ಧ ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ಸೋಮವಾರ (ಫೆಬ್ರವರಿ 12) 2.44 ಕೋಟಿ ರೂ.ಗಳ ವಸೂಲಿ ನೋಟಿಸ್ ನೀಡಿದ್ದು, ಘರ್ಷಣೆಯ ಸಮಯದಲ್ಲಿ ಸರ್ಕಾರಿ ಆಸ್ತಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಹಣವನ್ನು ಠೇವಣಿ ಇಡುವಂತೆ ಸೂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಜಯೇಂದ್ರ ಪರ ಶಾಮನೂರು ಬ್ಯಾಟಿಂಗ್; ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ರಾ?
ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು (Shamanuru Shivashankarappa) ಇದೀಗ, ಬಿ.ವೈ.ವಿಜಯೇಂದ್ರ ಅವರ ಪರ ಬ್ಯಾಟ್‌ ಬೀಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವೀರಶೈವ ಲಿಂಗಾಯತರಿಗೆ ನೀಡಿರುವುದಕ್ಕೆ ಬಿಜೆಪಿ ಹೈಕಮಾಂಡ್‌ಗೆ ಶಾಮನೂರು ಅವರು ಅಭಿನಂದನೆ ಸಲ್ಲಿಸಿದ್ದು, ಮತ್ತೊಂದೆಡೆ ಸ್ವಪಕ್ಷದಲ್ಲಿ ಸಮುದಾಯದ ನಾಯಕರ ಕಡೆಗಣನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸ್ವಪಕ್ಷದ ಹಿರಿಯ ನಾಯಕನ ಈ ನಡೆ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.DK Shivakumar : ಅಕ್ರಮ ಆಸ್ತಿ ಗಳಿಕೆ ಆರೋಪ; ಡಿಕೆಶಿ ವಿರುದ್ಧ ಲೋಕಾಯುಕ್ತ FIR
 
ಅಕ್ರಮ ಆಸ್ತಿ ಪ್ರಕರಣಕ್ಕೆ (Illegal Asset Case) ಸಂಬಂಧಿಸಿ ಲೋಕಾಯುಕ್ತವು (Karnataka Lokayukta) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 2019ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆಪಾದನೆ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆದು ಲೋಕಾಯುಕ್ತಕ್ಕೆ ಒಪ್ಪಿಸಲು ನಿರ್ಧರಿಸಲಾಗಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.TET: 9ರಿಂದ 12ನೇ ತರಗತಿ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸುವ ಪ್ರಸ್ತಾಪ!
ಮಾಧ್ಯಮಿಕ ಶಾಲೆ (Secondary Education) ಶಿಕ್ಷಕರಿಗೆ(9ರಿಂದ 12ನೇ ತರಗತಿ) ಶಿಕ್ಷಕರ ಅರ್ಹತಾ ಪರೀಕ್ಷೆ(TET)ಯನ್ನು ಕಡ್ಡಾಯಗೊಳಿಸುವ ಬಗ್ಗೆ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್(NCTE) ಪ್ರಸ್ತಾಪಿಸಿದೆ. ಶಿಕ್ಷಕರ ನೇಮಕಾತಿಯ (Teacher Recruitment) ಪದ್ಧತಿಗಳನ್ನು ಮತ್ತಷ್ಟು ದಕ್ಷಗೊಳಿಸುವ ಅನೇಕ ಪ್ರಸ್ತಾಪಗಳನ್ನು ಮುಂದಿಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್‌; ದಾವಣಗೆರೆಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಬಯಲಿಗೆ
ಯಾವುದೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ (Toilet Cleaning) ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸಬಾರದು ಎಂಬ ಸರ್ಕಾರದ ಮಾರ್ಗಸೂಚಿಯನ್ನು ಮೀರಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್‌ ಮಾಡಿಸಿದ (Toilet Cleaning by Students) ಮತ್ತೊಂದು ಘಟನೆ ದಾವಣಗೆರೆಯಲ್ಲಿ ವರದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಮಗಳು ಅಕ್ಷತಾ ಜತೆ ಶಾಪ್‌ಗೆ ಬಂದು ಐಸ್‌ ಕ್ರೀಂ ಸವಿದ ಇನ್ಫಿ ನಾರಾಯಣ ಮೂರ್ತಿ
ಎರಡು ದಿನದ ಹಿಂದೆ ಜಯನಗರದ ಜನಪ್ರಿಯ ಐಸ್‌ ಕ್ರೀಂ ಶಾಪ್‌ ಐಕಾನಿಕ್‌ ಕಾರ್ನರ್‌ (Ice Cream Corner Jayanagara) ಹೌಸ್‌ಗೆ ಇಬ್ಬರು ಅಪರೂಪದ ಅತಿಥಿಗಳು ಬಂದಿದ್ದರು. ಅವರೇ ಇನ್ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ (Infosys Narayanamurty) ಮತ್ತು ಅವರ ಮಗಳು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಹೇಗಿತ್ತು ಆ ಕ್ಷಣಗಳು.. ಇಲ್ಲಿದೆ ವರದಿ.. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version