Site icon Vistara News

Russian Presidential election : ಕೇರಳದಲ್ಲಿ ನಡೆಯಿತು ರಷ್ಯಾ ಅಧ್ಯಕ್ಷರ ಆಯ್ಕೆಗೆ ಮತದಾನ!

Russia Eection

ತಿರುವನಂತಪುರಂ: ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ (Russian Presidential election) ಕೇರಳದಲ್ಲಿ ಮತದಾನ ನಡೆಯುವುದೆಂದರೆ ಅಚ್ಚರಿಯೇ ಸರಿ. ಆದರೆ, ಅದು ಆಗಿದ್ದು ಹೌದು. ಭಾರತದಲ್ಲಿ ನೆಲೆಸಿರುವ ಸುಮಾರು 60 ರಷ್ಯನ್ನರು ಮತ್ತು ಪ್ರವಾಸಿಗರು ಗುರುವಾರ ಕೇರಳದ ರಾಜಧಾನಿಯಲ್ಲಿರುವ ರಷ್ಯಾ ಒಕ್ಕೂಟದ ಧೂತವಾಸದಲ್ಲಿ ವ್ಯವಸ್ಥೆ ಮಾಡಲಾದ ಮತಗಟ್ಟೆಯಲ್ಲಿ ರಷ್ಯಾದ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಿದ್ದಾರೆ.

ಎರ್ನಾಕುಲಂ, ವರ್ಕಲಾ ಮತ್ತು ಕೋವಲಂನಲ್ಲಿರುವ ರಷ್ಯಾದ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದರು. ರಷ್ಯಾದಲ್ಲಿ ಎಂಟನೇ ಅಧ್ಯಕ್ಷೀಯ ಚುನಾವಣೆ ಮಾರ್ಚ್ 15 ರಿಂದ 17 ರವರೆಗೆ ನಿಗದಿಯಾಗಿದೆ. ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಹಲವೆಡೆ ಮತದಾನ

ರಷ್ಯಾದ ಹೌಸ್​​ನಲ್ಲಿ ಮಾತ್ರವಲ್ಲದೆ ದೆಹಲಿಯ ರಷ್ಯಾ ರಾಯಭಾರ ಕಚೇರಿ ಮತ್ತು ಚೆನ್ನೈ, ಮುಂಬೈ, ಕೋಲ್ಕೊತಾ, ಗೋವಾ ಮತ್ತು ತಮಿಳುನಾಡಿ ಕೂಡಂಕುಲಂನಂತಹ ನಗರಗಳಲ್ಲಿನ ದೂತಾವಾಸಗಳು ಸೇರಿದಂತೆ ದೇಶಾದ್ಯಂತ ವಿವಿಧ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮತದಾನ ನಡೆಸಲಾಗಿದೆ.

ತಿರುವನಂತಪುರಂನಲ್ಲಿ ಮತದಾನ ಪ್ರಕ್ರಿಯೆಯು ಸಾಂಪ್ರದಾಯಿಕ ಕಾಗದದ ಮತಪತ್ರಗಳನ್ನು ಬಳಸಿತು, ಪೂರ್ಣಗೊಂಡ ಮತಪತ್ರಗಳನ್ನು ಚೆನ್ನೈನಿಂದ ರಾಜತಾಂತ್ರಿಕ ಮಾರ್ಗದ ಮೂಲಕ ಮಾಸ್ಕೋಗೆ ಕಳುಹಿಸಲಾಯಿತು. ಮಾರ್ಚ್ 17 ರಂದು ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದ ನಂತರ ಈ ಮತಗಳನ್ನು ಎಣಿಕೆ ಮಾಡಲಾಗುತ್ತದೆ.

ಮೂರನೇ ಬಾರಿ ಕೇರಳದಲ್ಲಿ ಮತದಾನ

ಕೇರಳದಲ್ಲಿರುವ ರಷ್ಯಾದ ಧೂತವಾಸದಲ್ಲಿ ಚುನಾವಣೆ ನಡೆಸುತ್ತಿರುವ ಮೂರನೇ ಸಂದರ್ಭ ಇದಾಗಿದೆ. ಇದಕ್ಕೂ ಮೊದಲು, ರಷ್ಯಾದ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಗಳಿಗೆ ಎರಡು ಬಾರಿ ಮತದಾನ ನಡೆಸಲಾಗಿತ್ತು. ಅಲ್ಲದೆ, ಈ ಬಾರಿ ಮತದಾರರ ಸಂಖ್ಯೆ ನಿರೀಕ್ಷೆಯನ್ನು ಮೀರಿದೆ ಎಂದು ರಷ್ಯಾದ ಗೌರವ ರಾಯಭಾರಿ ರತೀಶ್ ಸಿ. ಹೇಳಿದ್ದಾರೆ.

ಇದನ್ನೂ ಓದಿ : Lok Sabha Election : ನಾಳೆ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

ಈ ಚುನಾವಣೆ ನನಗೆ ತುಂಬಾ ವಿಶೇಷವಾಗಿದೆ. ಈ ಬಾರಿ ರಷ್ಯಾದಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಮತಗಳು ಹೆಚ್ಚಾಗುವ ಅವಕಾಶಗಳಿವೆ. ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ ” ಎಂದು ನಗರದಲ್ಲಿ ನೆಲೆಸಿರುವ ಓಲ್ಗಾ ಹೇಳಿದ್ದಾರೆ, ಪುಟಿನ್ ಈ ಬಾರಿಯೂ ಅಧ್ಯಕ್ಷರಾಗಿ ಗೆಲ್ಲಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಚುನಾವಣಾ ಪ್ರಕ್ರಿಯೆಯನ್ನು ಚೆನ್ನೈನ ರಷ್ಯಾದ ಕಾನ್ಸುಲೇಟ್ ಜನರ ಲ್​ನ ಹಿರಿಯ ಕಾನ್ಸುಲ್ ಸೆರ್ಗೆ ಅಜರೋವ್ ಮೇಲ್ವಿಚಾರಣೆ ಮಾಡಿದರು. ವೈಸ್ ಕಾನ್ಸುಲ್ ಅಲೆಕ್ಸಿ ತಾರೆಸೊವ್ ರತೀಶ್ ಸಿ ನಾಯರ್ ಮತ್ತು ರಷ್ಯಾದ ಹೌಸ್ ಉಪ ನಿರ್ದೇಶಕಿ ಕವಿತಾ ನಾಯರ್ ಮತದಾನದ ವೇಳೆ ಇದ್ದರು.

Exit mobile version