Site icon Vistara News

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Challenging Darsha

ಮಂಡ್ಯ: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಸಿನಿರಂಗಕ್ಕೆ (Sandalwood) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಹಾಗೂ ಹಿತೈಷಿಗಳು ‘ಬೆಳ್ಳಿ ಪರ್ವ’ (Belli Parva) ಆಚರಣೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ (Srirangapattana) ಅದ್ಧೂರಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆದಿಚುಂಚನಗಿರಿ ಶ್ರೀಗಳು, ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕಳೆದೆರಡು ದಿನಗಳಿಂದ ಈ ಕಾರ್ಯಕ್ರಮಕ್ಕಾಗಿ ಸಿದ್ದತೆ ನಡೆದಿತ್ತು.

ದರ್ಶನ್ ಆಪ್ತ ಇಂಡುವಾಳು ಸಚ್ಚಿದಾನಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಂಜೆಯಿಂದಲೇ ನಾನಾ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸುಮಲತಾ ಅಂಬರೀಷ್‌, ಡಾಲಿ ಧನಂಜಯ್, ವಿನೋದ್‌ ಪ್ರಭಾಕರ್‌‌, ಪ್ರಜ್ವಲ್ ದೇವರಾಜ್, ನಿನಾಸಂ ಸತೀಶ್‌, ಅಭಿಷೇಕ್ ಅಂಬರೀಷ್‌, ಧನ್ವೀರ್‌, ಚಿಕ್ಕಣ್ಣ, ವಿನೋದ್‌ ರಾಜ್, ನೆನಪಿರಲಿ ಪ್ರೇಮ್ ಹಲವರು ಭಾಗಿಯಾಗುತ್ತಿದ್ದಾರೆ.

ಇದನ್ನು ಓದಿ : Actor Darshan: ಇಂದು ಅದ್ಧೂರಿ ‘ಬೆಳ್ಳಿ ಪರ್ವ ಡಿ-25’ ಆಚರಣೆ: 25 ಸಾವಿರ ಅಭಿಮಾನಿಗಳ ನಿರೀಕ್ಷೆ!

ದರ್ಶನ್​ ಅವರ ಬೆಳ್ಳಿ ಪರ್ವ ಕಾರ್ಯಕ್ರಮ ವಿಸ್ತಾರ ನ್ಯೂಸ್​​ನ ಲ್ಲಿ ನೇರ ಪ್ರದರ್ಶಗೊಳ್ಳುತ್ತಿದೆ. ದರ್ಶನ್ ಅವರ ಚಲನಚಿತ್ರ ಪಯಣದ ವಿಶೇಷ ಸಂದರ್ಭವನ್ನು ಇಲ್ಲಿ ವೀಕ್ಷಿಸಬಹುದು.

25ನೇ ವರ್ಷಕ್ಕೆ ದರ್ಶನ್ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಕಾಟೇರ’ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ದರ್ಶನ್ ಸಿನಿಕರಿಯರ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್‌ಲೈನ್‌ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ ಜೀ 5 ವಹಿವಾಟು ಮುಗಿಸಿತ್ತು. ನಿರ್ಮಾಪಕರು ಹಾಗೂ ಒಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಈಗಾಗಲೇ ಪ್ರೀಮಿಯರ್ ಆಗುತ್ತಿದೆ.

Exit mobile version