Actor Darshan: ಇಂದು ಅದ್ಧೂರಿ ‘ಬೆಳ್ಳಿ ಪರ್ವ ಡಿ-25’ ಆಚರಣೆ: 25 ಸಾವಿರ ಅಭಿಮಾನಿಗಳ ನಿರೀಕ್ಷೆ! - Vistara News

ಸ್ಯಾಂಡಲ್ ವುಡ್

Actor Darshan: ಇಂದು ಅದ್ಧೂರಿ ‘ಬೆಳ್ಳಿ ಪರ್ವ ಡಿ-25’ ಆಚರಣೆ: 25 ಸಾವಿರ ಅಭಿಮಾನಿಗಳ ನಿರೀಕ್ಷೆ!

Actor Darshan: ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.ಈಗಾಗಲೇ ಸಂಜೆಯ ಸಂಭ್ರಮದಕ್ಕೆ ಸಕಲ ಸಿದ್ಧತೆಗಳೂ ಕಳೆದೆರಡು ದಿನಗಳಿಂದ ಆರಂಭ ಆಗಿದೆ.

VISTARANEWS.COM


on

Actor Darshan belli parva Programme in shreerangapattana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಸಿನಿರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು  ‘ಬೆಳ್ಳಿ ಪರ್ವ’ ಆಚರಣೆಗೆ ಮುಂದಾಗಿದ್ದಾರೆ. ಅದ್ಧೂರಿಯಾಗಿ ಈ ಕಾರ್ಯಕ್ರಮ ಇಂದು (ಫೆಬ್ರವರಿ 17)ರರಂದು ನಡೆಯಲಿದೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಸಂಜೆಯ ಸಂಭ್ರಮದಕ್ಕೆ ಸಕಲ ಸಿದ್ಧತೆಗಳೂ ಕಳೆದೆರಡು ದಿನಗಳಿಂದ ಆರಂಭ ಆಗಿದೆ.

ಶ್ರೀರಂಗಪಟ್ಟಣದಲ್ಲಿ ದರ್ಶನ್ ಆಪ್ತ ಇಂಡುವಾಳು ಸಚ್ಚಿದಾನಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಂಜೆಯ ಸಂಭ್ರಮಕ್ಕೆ ಸಕಲ ಸಿದ್ಧತೆಗಳೂ ಕಳೆದೆರಡು ದಿನಗಳಿಂದ ಆರಂಭ ಆಗಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸುಮಲತಾ ಅಂಬರೀಷ್‌, ಡಾಲಿ ಧನಂಜಯ್, ವಿನೋದ್‌ ಪ್ರಭಾಕರ್‌‌, ಪ್ರಜ್ವಲ್ ದೇವರಾಜ್, ನಿನಾಸಂ ಸತೀಶ್‌, ಅಭಿಷೇಕ್ ಅಂಬರೀಷ್‌, ಧನ್ವೀರ್‌, ಚಿಕ್ಕಣ್ಣ, ವಿನೋದ್‌ ರಾಜ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ವೇದಿಕೆ ಮೇಲೆ ಚಂದನವನದ ನಟ-ನಟಿಯರು ಮನರಂಜನೆ ನೀಡಲಿದ್ದಾರೆ. ಸೋನು ಗೌಡ, ಸಾನ್ಯ ಅಯ್ಯರ್, ಬೃಂದಾ ಆಚಾರ್ಯ, ಶರಣ್ಯ ಶೆಟ್ಟಿ, ಪ್ರಿಯಾಂಕಾ ಮುಂತಾದವರು ಡ್ಯಾನ್ಸ್​ ಮಾಡಲಿದ್ದಾರೆ.ಸುಮಾರು 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಅಷ್ಟೂ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ದರ್ಶನ್ ಫೇವರಿಟ್ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ಮಹಿಳೆಗೆ ನಾಯಿ ಕಚ್ಚಿದ ಕೇಸ್‌; ಚಾರ್ಜ್‌ಶೀಟ್‌ನಲ್ಲಿ ನಟ ದರ್ಶನ್‌ ಹೆಸರು ಕೈಬಿಟ್ಟ ಪೊಲೀಸರು

ಇದನ್ನೂ ಓದಿ: Actor Darshan: ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ; ಹೇಗಿರಲಿದೆ  ‘ಬೆಳ್ಳಿ ಪರ್ವ’ ಆಚರಣೆ?

25ನೇ ವರ್ಷಕ್ಕೆ ದರ್ಶನ್ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಕಾಟೇರ’ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ದರ್ಶನ್ ಸಿನಿಕರಿಯರ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್‌ಲೈನ್‌ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ ಜೀ 5 ವಹಿವಾಟು ಮುಗಿಸಿತ್ತು. ನಿರ್ಮಾಪಕರು ಹಾಗೂ ಒಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಈಗಾಗಲೇ ಪ್ರೀಮಿಯರ್ ಆಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

Actor Ravichandran: 1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.

VISTARANEWS.COM


on

Actor Ravichandran female lead in ravichandrans premaloka 2
Koo

ಬೆಂಗಳೂರು: ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.

‘ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಮೇ 30 ರವಿಚಂದ್ರನ್ ಅವರ ಬರ್ತ್​ಡೇ. ಅಂದು ‘ಪ್ರೇಮಲೋಕ 2’ ಚಿತ್ರ ಲಾಂಚ್ ಆಗಲಿದೆ. ರವಿಚಂದ್ರನ್ ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಅನ್ನೋ ಕುತೂಹಲ ಮೂಡಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.

ಇದನ್ನೂ ಓದಿ: Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

ಈ ಮುಂಚೆ ರವಿಚಂದ್ರನ್‌ ಅವರು ʻʻದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇರಲ್ಲ. ಕೇವಲ ಪ್ರೀತಿ ವಿಚಾರ ಇರಲಿದೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ. ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ ಇನ್​ಸ್ಟಾಗ್ರಾಮ್‌ ಅಕೌಂಟ್​ಗೆ ಫ್ಯಾಮಿಲಿ ಫೋಟೊ ಹಾಕ್ಕೊಂಡು ಬನ್ನಿʼಎಂದಿದ್ದರು.

Continue Reading

ಸ್ಯಾಂಡಲ್ ವುಡ್

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Srinidhi Shetty: ತುಳುನಾಡಿನ ಅನೇಕ ಕಲಾವಿದರು ಸಿನಿಮಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಕೆಜಿಎಫ್‌ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರೂ ಕೂಡ ಒಬ್ಬರು. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್‌ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದ್ದಾರೆ. ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಸಿದ್ದಾರೆ.

VISTARANEWS.COM


on

Srinidhi Shetty Attends Daiva Kola Festivities in Mangalore
Koo

‘ಕೆಜಿಎಫ್’​ ಸಿನಿಮಾ ನಾಯಕಿ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರ ಹುಟ್ಟೂರು ಮಂಗಳೂರು. ಇದೀಗ ನಟಿ ತಮ್ಮ ಕುಟುಂಬದ ದೈವಗಳಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ.

ಮಂಗಳೂರಿನ ಹೊರವಲಯದಲ್ಲಿರೋ ಕಿನ್ನಿಗೋಳಿಯ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆದಿದೆ.

ಇದನ್ನೂ ಓದಿ: Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದರಲ್ಲಿ ಶ್ರೀನಿಧಿ ಶೆಟ್ಟಿ ಹಾಗೂ ಅವರ ಕುಟುಂಬದವರು, ಸಂಬಂಧಿಕರು ಪಾಲ್ಗೊಂಡರು.

‘ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀರಿ’ ಎಂದು ದೈವಗಳು ಇದೇ ಸಂದರ್ಭ ಶ್ರೀನಿಧಿ ‌ಶೆಟ್ಟಿಗೆ ಅಭಯ ನೀಡಿವೆಯಂತೆ. ಕರಾವಳಿ ಮೂಲದ ಬಂಟ ಮನೆತನಕ್ಕೆ ಸೇರಿದ ಇವರು ಅಪಾರ ದೈವಭಕ್ತೆ ಕೂಡಾ. ಸಿನೆಮಾ ರಂಗದಲ್ಲಿ ಬ್ಯುಸಿಯಾಗಿದ್ದರೂ, ಸದಾ ದೈವ ದೇವರ ಕಾರ್ಯಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ.
Continue Reading

ಸಿನಿಮಾ

Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

Actor Darshan: ಈಗಾಗಲೇ ʻಡೆವಿಲ್‌ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌ ಆಗಿದೆ. ರಗಡ್‌ ಲುಕ್‌ನಲ್ಲಿ ದರ್ಶನ್‌ ಕಂಡಿದ್ದಾರೆ. ಚಿತ್ರದ ತಾರೆಗಳ ಬಗ್ಗೆ ಇನ್ನೂ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಚಿತ್ರದಲ್ಲಿರುವ ಉಳಿದ ತಾರೆಯರ ಲುಕ್ ಬಹಿರಂಗವಾಗುವ ಸಾಧ್ಯತೆ ಇದೆ. ಡೆವಿಲ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ಡೆವಿಲ್’ ಪಕ್ಕಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ.

VISTARANEWS.COM


on

Actor Darshan devil starring making video release on may 10
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರ ಮುಂಬರುವ ಸಿನಿಮಾಗಳ ಕೆಲಸ ನಿಂತು ಹೋಗಿತ್ತು. ಇದೀಗ ದರ್ಶನ್‌ ಅವರು ತಮ್ಮ ಆಪ್ತ ಸಚ್ಚಿದಾನಂದ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ದರ್ಶನ್ ಅವರಿಗೆ ಕಟ್ಟಲಾದ ಬ್ಯಾಂಡೇಜ್‌ ಕೂಡ ಮಾಯವಾಗಿದೆ. ಹೀಗಾಗಿ ದರ್ಶನ್‌ ಫ್ಯಾನ್ಸ್‌ ಖುಷಿಯಲ್ಲಿ ಇದ್ದಾರೆ. ಜತೆಗೆ ಶೀಘ್ರದಲ್ಲೇ ಮತ್ತೆ ‘ಡೆವಿಲ್’ ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ನಿರ್ದೇಶಕ ಮಿಲನಾ ಪ್ರಕಾಶ್ ಮತ್ತು ತಂಡ ಫ್ಯಾನ್ಸ್‌ಗೆ ಸರ್‌ಪ್ರೈಸ್ ನೀಡಿದೆ. ಮೇ 10ಕ್ಕೆ ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ ಜತೆ ಮಾಹಿತಿ ಹಂಚಿಕೊಂಡಿದೆ.

ಈಗಾಗಲೇ ʻಡೆವಿಲ್‌ʼ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌ ಆಗಿದೆ. ರಗಡ್‌ ಲುಕ್‌ನಲ್ಲಿ ದರ್ಶನ್‌ ಕಂಡಿದ್ದಾರೆ. ಚಿತ್ರದ ತಾರೆಗಳ ಬಗ್ಗೆ ಇನ್ನೂ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಕೆಲವೇ ದಿನಗಳಲ್ಲಿ ಚಿತ್ರದಲ್ಲಿರುವ ಉಳಿದ ತಾರೆಯರ ಲುಕ್ ಬಹಿರಂಗವಾಗುವ ಸಾಧ್ಯತೆ ಇದೆ. ಈಗಾಗಲೇ ತಂಡ ಮೊದಲನೇ ಹಂತದ ಚಿತ್ರೀಕರಣ ಮುಗಿಸಿತ್ತು. ಇನ್ನೂ ಡೆವಿಲ್ ಚಿತ್ರದ ಮೂಲಕ ಹತ್ತೊಂಬತ್ತು ವರ್ಷದ ನಂತರ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕನ್ನಡಕ್ಕೆ ಬರುತ್ತಿದ್ದಾರೆ. ಚಿತ್ರದ ನಾಯಕಿ ಯಾರು ಎಂದು ಇದುವೆರೆಗೆ ತಿಳಿದು ಬಂದಿಲ್ಲ. ಬಿಡುಗಡೆಯಾಗಲಿರುವ ಮೇಕಿಂಗ್ ನಲ್ಲಿ ನಾಯಕಿಯ ಸುಳಿವು ಸಿಗುತ್ತಾ ಎಂಬ ಕುತೂಹಲ ಕೂಡ ಅನೇಕರಲ್ಲಿದೆ.

ಇದನ್ನೂ ಓದಿ: Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

‘ಡೆವಿಲ್’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ಡೆವಿಲ್’ ಪಕ್ಕಾ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ʻಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ವಂಶಿ’, ‘ಮಿಲನ’ ಮೊದಲಾದ ಚಿತ್ರಗಳಿಗೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ದರ್ಶನ್ ಜೊತೆ 2017ರಲ್ಲಿ ‘ತಾರಕ್’ ಸಿನಿಮಾ ಮಾಡಿದ್ದರು. ಈಗ ಎರಡನೇ ಬಾರಿಗೆ ಇವರು ಒಂದಾಗಿದ್ದಾರೆ.ಶ್ರೀ ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಡೆವಿಲ್ ಚಿತ್ರದ ನಂತರ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ‘ರಾಬರ್ಟ್’ ಹಾಗೂ ‘ಕಾಟೇರ’ ಬಳಿಕ ಮತ್ತೆ ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Continue Reading

ಸ್ಯಾಂಡಲ್ ವುಡ್

Aishwarya Arjun: ಅರ್ಜುನ್ ಸರ್ಜಾ ಪುತ್ರಿ ಮದುವೆ ಮುಹೂರ್ತ ಫಿಕ್ಸ್!

Aishwarya Arjun: 80-90ರ ದಶಕದ ಪ್ರಮುಖ ನಾಯಕರಲ್ಲಿ ಒಬ್ಬರಾದ ಅರ್ಜುನ್ ಸರ್ಜಾ ಬಹುಭಾಷಾ ನಟ. 1998ರಲ್ಲಿ ಆಶಾ ರಾಣಿ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಇಬ್ಬರು ಪುತ್ರಿಯರು. ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪದಾರ್ಪಣೆ ಮಾಡಿದರು.

VISTARANEWS.COM


on

Aishwarya Arjun Umapathy Ramaiah Wedding Date Venue Revealed
Koo

ಕರ್ನಾಟಕ ಮೂಲದ ದಕ್ಷಿಣ ಭಾರತದ ಖ್ಯಾತ ನಟ, ‘ಆ್ಯಕ್ಷನ್ ಕಿಂಗ್’ (Action King) ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Sarja) ಅವರ ನಿಶ್ಚಿತಾರ್ಥವು ತಮಿಳುನಾಡಿನ ಚೆನ್ನೈನಲ್ಲಿ ನಟ ತಂಬಿ ರಾಮಯ್ಯ ಅವರ ಪುತ್ರ (Aishwarya Arjun ಉಮಾಪತಿ ರಾಮಯ್ಯ(umapathy ramaiah) ಜತೆಗೆ ಆಗಿತ್ತು.

ಇದೀಗ ನಟ ಅರ್ಜುನ್ ಸರ್ಜಾ ಸದ್ಯ ಮೊದಲನೇ ಮಗಳು ಐಶ್ವರ್ಯಾ ಮದುವೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇಬ್ಬರ ಮದುವೆ ಚೆನ್ನೈನಲ್ಲೇ ನಡೆಯಲಿದ್ದು, ಜೂನ್ 10ರಂದು ಸಂಪ್ರದಾಯಬದ್ಧವಾಗಿ ಮದುವೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Ramana Avatara Movie: ಬಂಪರ್ ಆಫರ್; ಕೇವಲ 99 ರೂ.ಗೆ ಸಿಗಲಿದೆ ‘ರಾಮನ ಅವತಾರ’ ಸಿನಿಮಾ ಟಿಕೆಟ್

ಈ ಮದುವೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಯಶಿಕಾ ಆನಂದ್ ಜತೆ ಉಮಾಪತಿ ರಾಮಯ್ಯ ಸಂಬಂಧ ಹೊಂದಿದ್ದರು ಎಂಬ ಊಹಾಪೋಹಗಳು ಇದ್ದವು. ಅರ್ಜುನ್ ಸ್ವತಃ ಹೋಸ್ಟ್ ಮಾಡಿದ ರಿಯಾಲಿಟಿ ಟಿವಿ ಶೋ “ಸರ್ವೈವರ್ ತಮಿಳು” ನಲ್ಲಿ ಉಮಾಪತಿ ಸ್ಪರ್ಧಿಯಾಗಿ ಭಾಗವಹಿಸಿದ್ದರು, ಈ ಮೂಲಕ ಅರ್ಜುನ್‌ ಫ್ಯಾಮಿಲಿಗೆ ಉಮಾಪತಿ ರಾಮಯ್ಯ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಇವರಿಬ್ಬರ ನಡುವೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ ತಿರುಗಿದೆ ಎಂದು ವರದಿಯಾಗಿದೆ.

Continue Reading
Advertisement
Padma Awards 2024
ಪ್ರಮುಖ ಸುದ್ದಿ37 mins ago

Padma Awards 2024 : ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case : ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಲೈಂಗಿಕ ಕಿರುಕುಳ ಕೇಸ್​ ದಾಖಲು

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ2 hours ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ3 hours ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ3 hours ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Ranveer Singh
Latest3 hours ago

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ4 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ10 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ11 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ11 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು11 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ12 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು13 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌