Site icon Vistara News

Water Crisis: ನೀರಿನ ಟ್ಯಾಂಕರ್‌ ನೋಂದಣಿ ಮಾಡಿಕೊಳ್ಳಿ: ಮಾ.15ರವರೆಗೂ ಸಮಯ ವಿಸ್ತರಣೆ

water tanker

ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ (Drinking Water Scarcity, water crisis) ತಾತ್ಕಾಲಿಕ ಪರಿಹಾರವಾಗಿ ಒದಗಿಬಂದಿರುವ ನೀರಿನ ಟ್ಯಾಂಕರ್‌ಗಳನ್ನು (water tanker) ನೋಂದಣಿ (registartion) ಮಾಡಿಕೊಳ್ಳಲು ಗಡುವು ವಿಸ್ತರಿಸಲಾಗಿದೆ. ಇನ್ನೂ ನೋಂದಣಿ ಮಾಡಿಸದ ಟ್ಯಾಂಕರ್‌ ಮಾಲೀಕರಿಗೆ ಮಾರ್ಚ್ 15ರವರೆಗೆ ನೋಂದಣಿಗೆ ಗಡುವು ವಿಸ್ತರಿಸಲಾಗಿದೆ.

ಬಿಬಿಎಂಪಿ (BBMP) ಪೋರ್ಟಲ್‌ನಲ್ಲಿ ಈವರೆಗೆ 1,530 ಖಾಸಗಿ ಟ್ಯಾಂಕರ್‌ಗಳು ನೋಂದಣಿಯಾಗಿವೆ. ಆದರೆ ಇದರ ಮೂರು ಪಟ್ಟು ಟ್ಯಾಂಕರ್‌ಗಳು ಕಾರ್ಯನಿರತವಾಗಿರುವುದು ಕಂಡುಬರುತ್ತಿದೆ. ಮಾರ್ಚ್ 15ರ ಒಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ನೋಂದಣಿ ಮಾಡಿಕೊಂಡ ಟ್ಯಾಂಕರ್‌ಗಳಿಗೆ ಬಿಬಿಎಂಪಿಯ ಸ್ಟಿಕ್ಕರ್ ಅಂಟಿಸಲಾಗಿದೆ. 419 ಟ್ಯಾಂಕರ್‌ ಮಾಲೀಕರು ಸ್ವಯಂಪ್ರೇರಿತವಾಗಿ ಮಂಡಳಿಗೆ ಟ್ಯಾಂಕರ್ ಬಾಡಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ ವಿಧಿಸುವುದಾಗಿ ಆದೇಶಿಸಲಾಗಿದೆ. ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದರೆ, ಮಾರ್ಚ್ 15ರಿಂದ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸ್ಥಳ ದಂಡ ಶುಲ್ಕದ ನಮೂನೆಯನ್ನು ಸಿದ್ಧಪಡಿಸಲಾಗುತ್ತಿದೆ. ಸಿಬ್ಬಂದಿ ಬೆಳಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ವಾರ್ಡ್‌ಗಳಲ್ಲಿ ಸಂಚರಿಸಿ ಪರಿಶೀಲನೆ ಮಾಡುತ್ತಾರೆ. ಸಾರ್ವಜನಿಕರು 1916 ಸಹಾಯವಾಣಿಗೂ ಕರೆ ಮಾಡಿ ನೀರಿನ ದುರ್ಬಳಕೆ ಬಗ್ಗೆ ಮಾಹಿತಿ ನೀಡಬಹುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ರಿಯಾಯಿತಿ ದರದಲ್ಲಿ ಸಂಪ್‌ಗಳಿಗೆ ಮತ್ತು ಅನ್ಯ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ನೀಡಲಿದ್ದು, ಟ್ಯಾಂಕರ್‌ಗೆ ತುಂಬಿಸಿಕೊಂಡು ಹೋಗಬಹುದು. ಇದಕ್ಕಾಗಿ ಮೊಬೈಲ್ ತಂತ್ರಾಂಶವನ್ನು ರೂಪಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ಓದಿ: Water Crisis : ಟ್ಯಾಂಕರ್‌ ಮಾಫಿಯಾಗೆ ಬ್ರೇಕ್‌; ನೀರಿಗೆ ಸರ್ಕಾರಿ ದರ ಫಿಕ್ಸ್‌

Exit mobile version