Site icon Vistara News

Wayanad landslide: ವಯನಾಡು ಭೂ ಕುಸಿತ; ಮೃತ ಬಾಲಕ ರೋಹಿತ್ ತಾಯಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ ಸಿಎಂ

Kodagu News

ಮಡಿಕೇರಿ: ವಯನಾಡಿನ ಅಜ್ಜ-ಅಜ್ಜಿ ಮನೆಗೆ ಹೋಗಿದ್ದ ವೇಳೆ ಭೂ ಕುಸಿತದಲ್ಲಿ (Wayanad landslide) ಮೃತಪಟ್ಟ ಬಾಲಕ ರೋಹಿತ್ ತಾಯಿಗೆ ಸಿಎಂ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ. ಕೊಡಗು ಜಿಲ್ಲೆ (Kodagu News) ವಿರಾಜಪೇಟೆ ತಾಲೂಕಿನ ಗುಹೆಯಾ ಗ್ರಾಮದ 4ನೇ ತರಗತಿ ವಿದ್ಯಾರ್ಥಿ ರೋಹಿತ್ ತಾಯಿ ಕವಿತಾ ಜತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಯವರು ದುರಂತಕ್ಕೆ ಸಾಂತ್ವನ‌ ಹೇಳಿ ಪರಿಹಾರ ಕೊಡುವ ಭರವಸೆ ನೀಡಿದರು.

ಇದಕ್ಕೂ ಮೊದಲು ಪೊನ್ನಂಪೇಟೆ ತಾಲೂಕಿನ‌ ಶ್ರೀಮಂಗಲ ಕುಟ್ಟದ ಗುಡ್ಡ ಕುಸಿತ ಪ್ರದೇಶಕ್ಕೆ ಸಿಎಂ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರ ಜೊತೆ ಕೆಲಹೊತ್ತು ಚರ್ಚೆ ಮಾಡಿದ ಬಳಿಕ 20 ಕುಟುಂಬಗಳ ಸಂಕಷ್ಟ ಕೇಳಿ ಸಿಎಂ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು

ಗುಡ್ಡ ಕುಸಿತದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು, ಇಲ್ಲಿ ತೂಗು ಸೇತುವೆ ನಿರ್ಮಿಸುವ ಜೊತೆಗೆ ತುರ್ತಾಗಿ ರಸ್ತೆ ನಿರ್ಮಾಣದ ಜೊತೆಗೆ ಇತರೆ ದುರಸ್ತಿ ಕಾರ್ಯಗಳನ್ನು ಮುಗಿಸುವಂತೆ ಸಿಎಂ ಸೂಚಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುಡ್ಡ ಕುಸಿತದ ಪರಿಣಾಮಗಳನ್ನು ಮತ್ತು ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸ್ ರಾಜು, ಶಾಸಕರಾದ ಪೊನ್ನಣ್ಣ , ಮಂಥರ್ ಗೌಡ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?ಇದನ್ನೂ ಓದಿ |

ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

ಹೈದರಾಬಾದ್‌: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ(Wayanad Landslide)ದ ಭೀಕರ ದೃಶ್ಯವನ್ನು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸೆರೆ ಹಿಡಿದಿದೆ. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌(NRSC) ಹೈ ರೆಸೊಲ್ಯೂಶನ್‌ ಉಪಗ್ರಹದ ಚಿತ್ರವನ್ನು ಬಿಡುಗಡೆ ಮಾಡಿದೆ. ಭೀಕರ ದುರಂತ ಸಂಭವಿಸಿದ ವಯನಾಡ್‌ ಜಿಲ್ಲೆಯ ಚೂರಲ್‌ಮಾಲದ ದುರಂತಕ್ಕೂ ಮುನ್ನ ಮತ್ತು ನಂತರದ ಚಿತ್ರವನ್ನು NRSC ಇಸ್ರೋ ರಿಲೀಸ್‌ ಮಾಡಿದೆ.

ಕಾರ್ಟೊಸ್ಯಾಟ್ 3 ಉಪಗ್ರಹವು ಮೇ 22 ರಂದು ಒಂದು ಚಿತ್ರವನ್ನು ತೆಗೆದುಕೊಂಡಿತು ಮತ್ತು ಜುಲೈ 31 ರಂದು ಭೂಕುಸಿತದ ಒಂದು ದಿನದ ನಂತರ RISAT ಉಪಗ್ರಹವು ಮತ್ತೊಂದು ಚಿತ್ರವನ್ನು ತೆಗೆದಿದೆ. ಬರೋಬ್ಬರಿ 86,000 ಚದರ ಮೀಟರ್‌ಗಳಷ್ಟು ಭೂಮಿ ಹಾನಿಗೊಳಗಾಗಿರುವುದನ್ನು ಸ್ಯಾಟಲೈಟ್‌ ಚಿತ್ರದಲ್ಲಿ ಕಾಣಬಹುದಾಗಿದೆ. ಸುಮಾರು ಎಂಟು ಕಿ.ಮೀಗಳಷ್ಟು ಭೂಮಿ ಸಂಪೂರ್ಣವಾಗಿ ನಾಶವಾಗಿದೆ.

ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗ 300ದಾಟಿದೆ. ಇನ್ನು ನಾಪತ್ತೆಯಾದವರ ಸಂಖ್ಯೆ ಅದೆಷ್ಟೋ… ಹೈ-ರೆಸಲ್ಯೂಷನ್‌ ಉಪಗ್ರಹ ಚಿತ್ರಗಳನ್ನು ರಿಲೀಸ್‌ ಮಾಡಿರುವ ಇಸ್ರೋ, ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ತೋರಿಸಿದೆ.

ಉಪಗ್ರಹ ಚಿತ್ರಗಳ ಪ್ರಕಾರ ಸಮುದ್ರ ಮಟ್ಟದಿಂದ 1500 ಮೀಟರ್‌ ಎತ್ತರದಲ್ಲಿರುವ ಗುಡ್ಡದ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದೆ. ಇನ್ನು ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ಉಪಗ್ರಹದ ಮಾಹಿತಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಅದೇ ಸ್ಥಳದಲ್ಲೇ ಭೂ ಕುಸಿತವಾಗಿದೆ ಎಂದು ಹೇಳಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್‌ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ.

ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್‌ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ

ಭಾರೀ ದೊಡ್ಡ ಪ್ರಮಾಣದ ಕುಸಿತ ಎಂಬುದು ಚಿತ್ರಗಳ ಮೂಲಕ ಸ್ಪಷ್ಟವಾಗಿದೆ.
ಭೂಕುಸಿತ ವಿನಾಶವನ್ನು ಸೆರೆಹಿಡಿಯಲು, ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹ ಮತ್ತು ಮೋಡದ ಹೊದಿಕೆಯನ್ನು ಭೇದಿಸಬಲ್ಲ RISAT ಉಪಗ್ರಹದ ಸಹಾಯದಿಂದ ಇಂ ಚಿತ್ರವನ್ನು ಸೆರೆ ಹಿಡಿದಿದೆ.

Exit mobile version