Site icon Vistara News

Religious Duty : ಸಿಂಧೂರ ಇಟ್ಟುಕೊಳ್ಳುವುದು ಹೆಣ್ಣಿನ ಧಾರ್ಮಿಕ ಕರ್ತವ್ಯ; ಕೋರ್ಟ್​ ಅಭಿಪ್ರಾಯ

hindu Family

ಇಂದೋರ್: ಸಿಂಧೂರ ಧರಿಸುವುದು ಹಿಂದೂ ಮಹಿಳೆಯ ಧಾರ್ಮಿಕ ಕರ್ತವ್ಯ (Religious Duty ). ಅದರಿಂದ ವಿಮುಖಳಾಗುವುದಕ್ಕೆ ಸಾಧ್ಯವಿಲ್ಲ. ಇಂಥ ವಿಚಾರಕ್ಕೆಲ್ಲ ವಿಚ್ಛೇದನ (Divorce Case) ನೀಡಲು ಸಾಧ್ಯವಿಲ್ಲ ಎಂಬುದಾಗಿ ಇಂದೋರ್​ನ ಕೌಟುಂಬಿಕ ನ್ಯಾಯಾಲಯ (Family Court) ಅಭಿಪ್ರಾಯಪಟ್ಟಿದೆ. ತಮ್ಮನ್ನು ತ್ಯಜಿಸಿದ ಪತ್ನಿಯನ್ನು ವಾಪಸ್ ಮನಗೆ ಕರೆಸಿಕೊಳ್ಳುವುದಕ್ಕೆ ಹಿಂದೂ ವಿವಾಹ ಕಾಯ್ದೆಯಡಿ ಅನುವು ಮಾಡಿಕೊಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.

ಮಹಿಳೆ ಮಹಿಳೆಗೆ ತಕ್ಷಣದಿಂದ ಪತಿಯ ಮನೆಗೆ ಮರಳುವಂತೆ ಸೂಚಿಸಿದ ನ್ಯಾಯಾಲಯ, ಧಾರ್ಮಿಕ ‘ಸಿಂಧೂರ’ (ಕುಂಕುಮ) ಧರಿಸುವುದು (ಹಿಂದೂ) ಮಹಿಳೆಯ ಕರ್ತವ್ಯವಾಗಿದೆ ಎಂಬುದನ್ನು ಪುನರುಚ್ಛರಿಸಿದೆ. ಐದು ವರ್ಷಗಳ ಹಿಂದೆ ಪತ್ನಿ ತಮ್ಮನ್ನು ನಂತರ ಹಿಂದೂ ವಿವಾಹ ಕಾಯ್ದೆಯಡಿ ತನ್ನ ಹಕ್ಕುಗಳನ್ನು ಕಾಪಾಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಇಂದೋರ್ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎನ್.ಪಿ.ಸಿಂಗ್ ಮಹಿಳೆಗೆ ಈ ಮಾತು ಹೇಳಿದ್ದಾರೆ.

ಮಾರ್ಚ್ 1 ರಂದು ಮಹಿಳೆಯ ಹೇಳಿಕೆ ದಾಖಲಿಸಿದಾಗ ಆಕೆ ತಾನು ಸಿಂಧೂರ ಧರಿಸಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಿಂಧೂರವು ಹೆಂಡತಿಯ ಧಾರ್ಮಿಕ ಕರ್ತವ್ಯ. ಇದು ಮಹಿಳೆ ವಿವಾಹಿತಳು ಎಂದು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿತು

ಮಹಿಳೆ ತನ್ನ ಗಂಡನನ್ನು ತ್ಯಜಿಸಿದ್ದಾಳೆ. ಆಕೆ ಸಿಂಧೂರವನ್ನು ಧರಿಸುತ್ತಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ವರದಕ್ಷಿಣೆಗಾಗಿ ಪತಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿಕೆ ನೀಡಿದ ಮಹಿಳೆಯು ಅದನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಮಹಿಳೆ ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರುಗಳು ಅಥವಾ ವರದಿಗಳನ್ನು ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ವಿಚಾರಣೆ ವೇಳೆ ಗಮನಿಸಿತ್ತು. ಅರ್ಜಿದಾರರ ವಕೀಲ ಶುಭಂ ಶರ್ಮಾ ಅವರು ತಮ್ಮ ಕಕ್ಷಿದಾರರು 2017 ರಲ್ಲಿ ವಿವಾಹವಾದರು ಮತ್ತು ದಂಪತಿಗೆ 5 ವರ್ಷದ ಮಗನಿದ್ದಾನೆ ಎಂದು ಹೇಳಿದ್ದರು.

Exit mobile version