Site icon Vistara News

Karnataka Budget 2024 : ಬಜೆಟ್​ನಲ್ಲಿ ಬ್ರಾಂಡ್ ಬೆಂಗಳೂರಿಗೆ ಸಿಕ್ಕಿದ್ದೇನು? ಇಲ್ಲಿದೆ ಎಲ್ಲ ವಿವರ

Vistara Editorial, Karnataka budget touches all sectors amid debt burden

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಂಡಿಸಿರುವ 2024-25ನೇ ಹಣಕಾಸು ವರ್ಷದ ಆಯವ್ಯಯದಲ್ಲಿ (Karnataka Budget 2024) ಬ್ರಾಂಡ್​ ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಒತ್ತು ನೀಡುತ್ತಿರುವ ಬೆಂಗಳೂರು ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಲಾಗಿದೆ. ಪ್ರಮುಖವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ವಿಸ್ತಾರ ನ್ಯೂಸ್​ನಲ್ಲಿ ಬಜೆಟ್​ ಲೈವ್ ವೀಕ್ಷಿಸಿ

24-25 ಸಾಲಿನಲ್ಲಿ ಬೆಂಗಳೂರಿನಲ್ಲಿ 6000 ಕೋಟಿ ರೂ. ಗಳಷ್ಟು ತೆರಿಗೆ ಸಂಗ್ರಹದ ಗುರಿಯನ್ನನು ಹೊಂದಲಾಗಿದೆ. ಪರಿಷ್ಕೃತ ಜಾಹೀರಾತು ನೀತಿಯಿಂದ 2000 ಕೋಟಿ ತೆರಿಗೆ ನಿರೀಕ್ಷೆ ಇಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿಗಳ ದಾಖಲೆಗಳ ಆಸ್ತಿ ತೆರಿಗೆಗೆ ಡಿಜಿಟಲಿಕರಣ ಹಾಗೂ ಡಿಜಿಟಲ್ ಇ ಖಾತಾ ಮಾಡಿಸಲು ಬಜೆಟ್​ನಲ್ಲಿ ಯೋಜನೆ ರೂಪಿಸಲಾಗಿದೆ.

ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆಯಿಂದ ಸಂಚಾರ ದಟ್ಟ ನಿವಾರಣೆಗೆ ಹೊಸ ಯೋಜನೆ ಸಿದ್ಧಗೊಳ್ಳಲಿದೆ. 1700 ಕೋಟಿ ವೆಚ್ಚದಲ್ಲಿ 147 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈಟ್ ಟೈಪಿಂಗ್ ಡಿಸೆಂಬರ್ 2025 ಕ್ಕೆ ಪೂರ್ಣಗೊಳ್ಳಲಿದೆ. ಸಂಚಾರದಟ್ಟಣೆ ಅತ್ಯಂತ ಹೆಚ್ಚಿರುವ ಹಿನ್ನೆಲೆ ಪ್ರಾಯೋಗಿಕವಾಗಿ ಹೆಬ್ಬಾಳ ಜಂಕ್ಷನ್ ನಲ್ಲಿ ಟನಲ್ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ.

200 ಕೋಟಿ ವೆಚ್ಚದಲ್ಲಿ ನಾಲಾ ಬಫರ್ ಒಳಗೆ 100 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸುಗಮ ಸಂಚಾರ ಬ್ರಾಂಡ್ ಬೆಂಗಳೂರು ಯೋಜನೆ ಅಡಿ ಅಂತರಾಷ್ಟ್ರೀಯ ಮಟ್ಟದ ತಜ್ಞ ಸಮಿತಿ ನೇಮಕವೂ ಬಜೆಟ್​ನ ಉದ್ದೇಶವಾಗಿದೆ.

ಇದನ್ನೂ ಓದಿ : Karnataka Budget 2024 : ಬಜೆಟ್ ಪುಸ್ತಕದ ಮುಖಪುಟದಲ್ಲಿ ಸಂವಿಧಾನ ಪೀಠಿಕೆ

27 ಸಾವಿರ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 73 ಕೀ ಮಿ ಉದ್ದದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಹೇಳಿದ್ದಾರೆ. ಪಿಆರ್​ಆರ್​​ ರಸ್ತೆಗೆ ಬೆಂಗಳೂರು ಬಿಸಿನೆಸ್ ಕಾರ್ಡ್ ಎಂಬ ಹೊಸ ಪರಿಕಲ್ಪನೆಯನ್ನೂ ಮೂಡಿಸುವುದಾಗಿ ಬಜೆಟ್​ನಲ್ಲಿ ಹೇಳಲಾಗಿದೆ.

ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕಾಗಿ ಚಿಂತನೆ ಮಾಡಿವುದಾಗಿ ಬಜೆಟ್​ನಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರು ವಿವಿಧ ಇಲಾಖೆಗಳ ವಿದ್ಯುತ್ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್ ಸ್ಥಾಪನೆಯೂ ಬಜೆಟ್​ನ ಉದ್ದೇಶವಾಗಿದೆ.

ಸಾರ್ವಜನಿಕ ಸಾರಿಗೆ, ಮೆಟ್ರೊ

ಬಿಎಂಟಿಸಿ ಸೇವೆಯೊಂದಿಗೆ ಮೆಟ್ರೋ ರೈಲು ಹಾಗೂ ಸಬ್ ಅರ್ಬನ್ ರೈಲಗಳ ನಡುವೆ ಸಂಪರ್ಕ ಸೇತು ನಿರ್ಮಿಸುವುದು ಬಜೆಟ್​ ಯೋಜನೆಯಾಗಿದೆ. 2025 ಮಾರ್ಚ್ ವೇಳೆಗೆ ಹೊಸದಾದ 45 ಕಿಲೋ ಮೀಟರ್​​ ಮಾರ್ಗದ ಮೆಟ್ರೋ ಉದ್ಘಾಟನೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೆಟ್ರೋ ಯೋಜನೆ ಹಂತ 2 ಹಾಗೂ ಹಂತ 2ಎ ಯೋಜನೆಯಡಿ ಹೊರವರ್ತಲ ರಸ್ತೆ ಹಾಗೂ ವಿಮಾನ ನಿಲ್ದಾಣ ಮಾರ್ಗ 2026 ಜೂನ್ ಗೆ ಪೂರ್ಣಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಮೆಟ್ರೋ ಹಂತ 3 ರ ಅಡಿ ಅಂದಾಜು 15, 611 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ

ರಾಜ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

Exit mobile version