Site icon Vistara News

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

ook between H and L

ಬೆಂಗಳೂರು: ಮೇಣದ ಅರಮನೆಗೆ ಬೆಂಕಿ ಹಿಡಿದಷ್ಟೇ ವೇಗವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ವ್ಯಕ್ತಿಯೊಬ್ಬರು ಶೇರ್ ಮಾಡುವ ಯಾವುದೊ ಒಂದು ಕಾನ್ಸೆಪ್ಟ್​ ಬೆಳೆಬೆಳೆದು ವಿಶ್ವ ವ್ಯಾಪಿಯಾಗುತ್ತದೆ. ಆ ವಿಷಯಕ್ಕೆ ತಲೆ, ಕಾಲು ಮತ್ತು ಬಾಲಗಳೂ ಸೇರಿಕೊಳ್ಳುತ್ತವೆ. ಮುಂದೆ ಅದು ಎಲ್ಲರ ಮನಸ್ಸನ್ನೂ ಗೆಲ್ಲುವ ಸೋಶಿಯಲ್​ ಮೀಡಿಯಾ ಟ್ರೆಂಡ್ ಆಗಿ ಉಳಿಯುತ್ತದೆ. ಅಂತೆಯೇ ಮಂಗಳವಾರ (ಏಪ್ರಿಲ್ 23ರಂದು) ಸೋಶಿಯಲ್​ ಮೀಟಿಯಾ ವೇದಿಕೆಯಾಗಿರುವ ಎಕ್ಸ್​​ನಲ್ಲಿ ಎಚ್​​ ಮತ್ತು ಎಲ್ ಮಧ್ಯೆ ನೋಡಿ (Look between H and L) ಟ್ರೆಂಡ್​ ಕಿಡಿ ಹಚ್ಚಿತ್ತು. ಎಲ್ಲಿ ನೋಡಿದರೂ ಇದೇ ರೀತಿಯ ಪೋಸ್ಟ್​ಗಳು ಕಾಣಿಸುತ್ತಿದ್ದವು. ಆರಂಭದಲ್ಲಿ ಪೋಸ್ಟ್​​ ನೋಡಿ ಗಾಬರಿ ಬಿದ್ದಿದ್ದರು ಹಲವರು. ಅರ್ಥ ಮಾಡಿಕೊಂಡ ಬಳಿಕ ಅದು ದೊಡ್ಡ ವಿನೋದವಾಗಿ ಮಾರ್ಪಾಡಾಯಿತು.

ಸೋಶಿಯಲ್​ ಮೀಡಿಯಾಗಳಲ್ಲಿ ಆಗಾಗ್ಗೆ ಮೀಮ್ ಗಳು, ವೀಡಿಯೊಗಳು ಮತ್ತು ನೆಟ್ಟಿಗರು ಹಂಚಿಕೊಳ್ಳುವ ವಿಷಯಗಳು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ಕೆಲವು ಸಂಗತಿಗಳ ಅರ್ಥದ ಬಗ್ಗೆ ತಿಳಿದಿಲ್ಲದ ಬಹಳಷ್ಟು ಜನರಿಗೆ ಇದೇನು ಅನಿಸುವುದು ಸಹಜ. ಅಂತೆಯೇ “ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

ಏನಿದು Look between H and L?

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಕಿ ಪ್ಯಾಡ್​ನಲ್ಲಿ ಇಂಗ್ಲಿಷ್​ನ H ಮತ್ತು L ನಡುವೆ J ಮತ್ತು K ಇದೆ. ಹಾಗಾದರೆ ಜೆ.ಕೆ ಎಂದರೇನು? ಇಂಗ್ಲಿಷ್​ನಲ್ಲಿ Just Kidding ( ಕೇವಲ ತಮಾಷೆಗಾಗಿ) ಎಂಬ ಮಾತಿದೆ. ಅದನ್ನು ನೇರವಾಗಿ ಹೇಳುವ ಬದಲು Look between H and L ಟ್ರೆಂಡ್​ ಸೃಷ್ಟಿ ಮಾಡಲಾಗಿದೆ. ಅಂದ ಹಾಗೆ ಇದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಾಲು’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಅದು ಈಗ ಒಟಿಟಿಯಲ್ಲೂ ಲಭ್ಯ. ಅದಲ್ಲಿ ಭಗ್ನ ಪ್ರೇಮಿ ಹಾಗೂ ಐಟಿ ಕಂಪನಿಯೊಂದರ ಪ್ರಾಜೆಕ್ಟ್​ ಮ್ಯಾನೇಜರ್​ ಆದಿ ಎಂಬ ಪಾತ್ರವನ್ನು Just Kidding ಅನ್ನು ಪದೇ ಪದೆ ಬಳಸುತ್ತಾನೆ. ಗಂಭೀರವಾದ ವಿಷಯವನ್ನು ಹೇಳಿ just kidding ಎಂದು ಹೇಳುತ್ತಿದ್ದಾನೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಇದೇ ವೇಳೆ Look Between T and O ಟ್ರೆಂಡ್​ ಕೂಡ ಆಗಿದೆ. ಇದು 2021ರಲ್ಲಿ ಆರಂಭಗೊಂಡಿತು. 4Chan ಎಂಬ ಚಿತ್ರ ಆಧಾರಿತ ವೆಬ್​​ ಸರಣಿಯದ್ದಾಗಿದೆ. ಕೀಬೋರ್ಡ್​​ನಲ್ಲಿ T ಮತ್ತು O ನಡುವಿನ Y, U ಮತ್ತು I ಅಕ್ಷರಗಳಿವೆ. ಇದು ಅನಿಮೆ ಸರಣಿಯ ಪಾತ್ರವಾದ Yui ಹೆಸರಾಗಿದೆ. ಇದು ತಮ್ಮ ಪ್ರೌಢ ಶಾಲೆಯ ಸಂಗೀತ ಕ್ಲಬ್ ಮೂಲಕ ಬ್ಯಾಂಡ್ ನುಡಿಸುವು ಹುಡುಗಿಯ ಕುರಿತದ್ದು.

ಬಹಳಷ್ಟು ಜನರು ಈ ಟ್ರೆಂಡ್​ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತಪಡಿಸಿದರು. ಕೆಲವರು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಇತರರು ಇದು “ಕಿರಿಕಿರಿ” ಎಂದು ಎಂದೂ ಕಾಮೆಂಟ್​ ಮಾಡಿದ್ದಾರೆ.

Exit mobile version