ನವ ದೆಹಲಿ: World Athletics Championships ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ ನಾಯಕರುಗಳು ನೀರಜ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ಅಂತೆಯೇ ಕ್ರೀಡಾ ಕ್ಷೇತ್ರದ ಗಣ್ಯರೂ ಶುಭಾಶಯ ತಿಳಿಸಿದ್ದಾರೆ.
ಶುಭಾಶಯಗಳು. ವಿಶಿಷ್ಟ ಕ್ರೀಡಾಪಟುವಿನಿಂದ ಅತ್ಯದ್ಭುತ ಸಾಧನೆ ಎಂದು ಬರೆದಿರುವ ನರೇಂದ್ರ ಮೋದಿ ಅವರು, ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಇದು ವಿಶೇಷ ಕ್ಷಣ ಎಂದು ಟ್ವೀಟ್ ಮಾಡಿದ್ದಾರೆ.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ಟ್ವೀಟ್ ಮಾಡಿ, ವಿಶ್ವ ಚಾಂಪಿಯನ್ಷಿಪ್ನಲ್ಲಿ ನೀವು ಗೆದ್ದಿರುವ ಬೆಳ್ಳಿಯ ಪದಕ ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯ ಎಂದು ಬರೆದುಕೊಂಡಿದ್ದಾರೆ.
ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಕೂಡ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಕಠಿಣ ಪರಿಶ್ರಮ, ಬದ್ಧತೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟಿದೆ. ನಾವೆಲ್ಲರೂ ಅವರ ಬಗ್ಗೆ ಹೆಮ್ಮೆ ಪಡಬೇಕು ಎಂದು ಬರೆದುಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಟ್ವೀಟ್ ಶುಭಾಶಯ ತಿಳಿಸಿದ್ದಾರೆ.
ಭಾರತ ಖ್ಯಾತ ಅಥ್ಲೀಟ್ ಪಿ. ಟಿ ಉಷಾ ಅವರೂ ನೀರಜ್ ಚೋಪ್ರಾ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ನಿಮ್ಮ ಶ್ರಮದಿಂದಾಗಿ ಭಾರತದ ಧ್ವಜ ಎತ್ತರೆತ್ತರ ಹಾರುತ್ತಿದೆ. ನಾವೆಲ್ಲರೂ ಹೆಮ್ಮೆ ಪಡಬೇಕಾದ ಕ್ಷಣ ಎಂದು ಬರೆದುಕೊಂಡಿದ್ದಾರೆ.
೨೦೦೩ರ ವಿಶ್ವ ಚಾಂಪಿಯನ್ಷಿಪ್ನ ಲಾಂಗ್ ಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಂಜು ಬಾಬಿ ಜಾರ್ಜ್, ಇದೊಂದು ಅಪೂರ್ಣ ಕ್ಷಣ. ನಮ್ಮ ಗುಂಪಿಗೆ ಸ್ವಾಗತ ಎಂದು ಬರೆದಿದ್ದಾರೆ.
ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ