Site icon Vistara News

World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

food safety day

ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು ಮತ್ತು ನಿರ್ವಹಿಸಲು, ಮಾನವನ ಆರೋಗ್ಯವನ್ನು ಸುಧಾರಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಜಾಗತಿಕವಾಗಿ, ಪ್ರತಿ ವರ್ಷ ಹತ್ತು ಜನರಲ್ಲಿ ಒಬ್ಬರು ಆಹಾರದಿಂದ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ. ಸುರಕ್ಷಿತ ಆಹಾರವು ಉತ್ತಮ ಆರೋಗ್ಯದ ಸೂಚಕ. ಅಸುರಕ್ಷಿತ ಆಹಾರ ಅನೇಕ ರೋಗಗಳಿಗೆ ಕಾರಣವಾಗಬಹುದು. ಕಳಪೆ ಆಹಾರದ ಗುಣಮಟ್ಟವು ಆರೋಗ್ಯವನ್ನು ಹದಗೆಡಿಸುತ್ತದೆ. ಉದಾಹರಣೆಗೆ, ಬೆಳವಣಿಗೆ ಕುಂಠಿತವಾಗುವುದು ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಗಳು, ಸಾಂಕ್ರಾಮಿಕವಲ್ಲದ ಅಥವಾ ಸಾಂಕ್ರಾಮಿಕ ರೋಗಗಳು, ಮಾನಸಿಕ ಅಸ್ವಸ್ಥತೆ ಇತ್ಯಾದಿ ಉಂಟಾಗಬಹುದು. ಆಹಾರದಿಂದ ಹರಡುವ ರೋಗಗಳು ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವುದಿಲ್ಲ; ಆದರೆ ಸಾಂಕ್ರಾಮಿಕ ಅಥವಾ ವಿಷಕಾರಿಯಾಗಿರುತ್ತವೆ. ಹೀಗಾಗಿ ಆಹಾರ ಸುರಕ್ಷತೆಯು ನಿರ್ಣಾಯಕ ಅಂಶ.

ಉತ್ಪಾದನೆಯಿಂದ ತೊಡಗಿ ಕೊಯ್ಲು, ಸಂಸ್ಕರಣೆ, ಸಂಗ್ರಹಣೆ, ವಿತರಣೆ, ತಯಾರಿಕೆ ಮತ್ತು ಬಳಕೆಯವರೆಗೆ- ಪ್ರತಿ ಹಂತದಲ್ಲೂ ಆಹಾರವು ಸುರಕ್ಷಿತವಾಗಿರಬೇಕು ಎಂಬ ಸಂದೇಶವನ್ನು ಪ್ರಸಾರ ಮಾಡಲು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನ ಯಾವಾಗ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ವರ್ಷ, ಇದು ಮಂಗಳವಾರ ಬಂದಿದೆ.

ವಿಶ್ವ ಆಹಾರ ಸುರಕ್ಷತಾ ದಿನ 2022 ಥೀಮ್

ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಚ್‌ನಲ್ಲಿ ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್ ಅನ್ನು ಘೋಷಿಸಿತು. ʼಸುರಕ್ಷಿತ ಆಹಾರ, ಉತ್ತಮ ಆರೋಗ್ಯ’ ಎಂಬುದು ಈ ವರ್ಷದ ಥೀಮ್ ಆಗಿದೆ. ಜಾಗತಿಕವಾಗಿ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಡಬ್ಲ್ಯುಎಚ್‌ಓ ಅಭಿಯಾನವನ್ನು ನಡೆಸುತ್ತಿದೆ.

ಆಹಾರ ಸುರಕ್ಷತಾ ದಿನದ ಇತಿಹಾಸ ಮತ್ತು ಮಹತ್ವ

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 2018ರಲ್ಲಿ ವಿಶ್ವ ಆಹಾರ ಸುರಕ್ಷತಾ ದಿನದ ಆಚರಣೆಯನ್ನು ಪ್ರಮುಖವಾಗಿ ಆಹಾರ ಸುರಕ್ಷತೆಯ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಆರಂಭಿಸಿತು. ವಿಶ್ವಸಂಸ್ಥೆಯ ಡಬ್ಲ್ಯುಎಚ್‌ಓ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆ (FAO) ಜಂಟಿಯಾಗಿ ಸದಸ್ಯ ರಾಷ್ಟ್ರಗಳು ಮತ್ತು ಇತರ ಭಾಗೀದಾರರ ಸಹಯೋಗದೊಂದಿಗೆ ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರಾರಂಭಿಸಿತು.

ಜಗತ್ತಿನ ಜನತೆಯ ಆರೋಗ್ಯವನ್ನು ಕಾಪಾಡಲು ಮತ್ತು ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಆಹಾರ ವ್ಯವಸ್ಥೆಯನ್ನು ಸುರಕ್ಷಿತವಾಗಿ ಕಾಪಾಡುವ ಗುರಿಯನ್ನು ಈ ದಿನ ಹೊಂದಿದೆ. ನಾವು ಸೇವಿಸುವ ಆಹಾರ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು, ಜಾಗತಿಕವಾಗಿ ಆಹಾರದಿಂದ ಹರಡುವ ಕಾಯಿಲೆಗಳ ಹೊರೆಯನ್ನು ಕಡಿಮೆ ಮಾಡುವುದು- ಇವುಗಳಿಗೆ ಈ ದಿನ ಪ್ರೇರಣೆ ಒದಗಿಸುತ್ತದೆ.

ಆರೋಗ್ಯ ಸುರಕ್ಷತೆಯ ಬಗ್ಗೆ ತಜ್ಞರು ಕೆಲವು ಅಂಶಗಳನ್ನು ಸೂಚಿಸುತ್ತಾರೆ. ಅವು ಹೀಗಿವೆ:

Exit mobile version