ನವದೆಹಲಿ: ಅಫಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಜಾರಿಗೆ ಬಂದಿದ್ದು, ಮಾನವ ಹಕ್ಕುಗಳು ಸರ್ವನಾಶಗೊಂಡಿವೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇದೆ. ಇದೆಲ್ಲದ ಕಾರಣ ನಾಸ್ಟ್ರಾಡಾಮಸ್ ಹಾಗೂ ಬಾಬಾ ವಂಗಾ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ, ಭಾರತದ ಜ್ಯೋತಿಷಿಯೊಬ್ಬರು ಮುಂದಿನ 48 ಗಂಟೆಗಳಲ್ಲಿಯೇ ಮೂರನೇ ಮಹಾಯುದ್ಧ ಆರಂಭವಾಗಲಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಭವಿಷ್ಯ ನುಡಿದಿರುವುದು ಸಂಚಲನ ಮೂಡಿಸಿದೆ.
ಹೌದು, ಹರಿಯಾಣದವರಾದ ಕುಶಾಲ್ ಕುಮಾರ್ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. “2024ರ ಜೂನ್ 18ರಿಂದಲೇ ಅಂದರೆ, ಮುಂದಿನ 48 ಗಂಟೆಗಳಲ್ಲಿಯೇ ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗಲಿದೆ. ತಮ್ಮನ್ನು ತಾವು ವೈದಿಕ ಜ್ಯೋತಿಷಿ ಎಂದು ಘೋಷಿಸಿಕೊಂಡಿರುವ ಕುಶಾಲ್ ಕುಮಾರ್ ಅವರು ಇದುವರೆಗೆ ನುಡಿದ ಭವಿಷ್ಯಗಳು ನಿಜವಾಗಿವೆ. ಜೂನ್ 18ರಂದೇ ಜಾಗತಿಕವಾಗಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆಯಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಕುಶಾಲ್ ಕುಮಾರ್ ಅವರು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್ ಕುಮಾರ್ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಕೊರಿಯಾ ಸೈನಿಕರು ದಕ್ಷಿಣ ಕೊರಿಯಾ ಗಡಿಗಳತ್ತ ನುಗ್ಗುತ್ತಿದ್ದಾರೆ. ಇಸ್ರೇಲ್ ಹಾಗೂ ಗಾಜಾ ನಡುವಿನ ಸಮರವು ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಉಕ್ರೇನ್‌ನಲ್ಲಿ ರಷ್ಯಾವಂತೂ ಮಾರಣಹೋಮ ನಡೆಸುತ್ತಿದೆ. ಇನ್ನು ಕಳೆದ ಜೂನ್‌ನಲ್ಲಿಯೇ ಜಮ್ಮು-ಕಾಶ್ಮೀರದಲ್ಲಿ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದೆಲ್ಲ ಕಾರಣದಿಂದಾಗಿ ಜಾಗತಿಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ, ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇದರಿಂದ ಜಾಗತಿಕ ಅಶಾಂತಿ ಸೃಷ್ಟಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?