ದುಬೈ: ಜಗತ್ತು ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದೆ. ಮನುಷ್ಯನ ನಿರೀಕ್ಷೆ, ಆಸೆ, ಮಹತ್ವಾಕಾಂಕ್ಷೆಯನ್ನೂ ಮೀರಿ ತಂತ್ರಜ್ಞಾನ ಬೆಳೆದುನಿಂತಿದೆ. ಇಂತಹ ತಂತ್ರಜ್ಞಾನ ಉಚ್ಛ್ರಾಯ ತಲುಪಿರುವುದಕ್ಕೆ ನಿದರ್ಶನ ಎಂಬಂತೆ ದುಬೈನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಸೂಪರ್‌ಮಾಡೆಲ್ ರೋಬೊಗಳೇ (Supermodel Robot) ಹೋಟೆಲ್‌ಗಳಲ್ಲಿ ಸರ್ವ್ ಮಾಡಲಿದ್ದಾರೆ.
ಹೌದು, ದುಬೈನ ದೊನ್ನ ಸೈಬರ್ ಕೆಫೆ ಎಂಬ ಕೆಫೆಯಲ್ಲಿ 2023ರಿಂದ ಸಂಪೂರ್ಣವಾಗಿ ಸೂಪರ್‌ಮಾಡೆಲ್ ರೋಬೊಗಳೇ ಜನರಿಗೆ ಸೇವೆ ಒದಗಿಸಲಿವೆ. ಸರ್ವ್ ಮಾಡಲು ಒಬ್ಬರೇ ಒಬ್ಬರು ವ್ಯಕ್ತಿಗಳು ಹೋಟೆಲ್‌ನಲ್ಲಿ ಇರುವುದಿಲ್ಲ. ಲಲನೆಯರಂತೆ ಕಾಣುವ, ನೋಡಲು ಎರಡು ಕಣ್ಣು ಕೂಡ ಸಾಲದಂತೆ ಇರುವ ಸೂಪರ್ ಮಾಡೆಲ್ ರೋಬೊಗಳೇ ಸರ್ವ್ ಮಾಡಲಿವೆ ಎಂದು ತಿಳಿದುಬಂದಿದೆ.
ಹೇಗೆ ಕಾರ್ಯನಿರ್ವಹಣೆ?
ಈ ಸೂಪರ್‌ಮಾಡೆಲ್ ರೋಬೊಗಳು ಗ್ರಾಹಕರಿಗೆ ಏನು ಬೇಕೋ ಅದನ್ನು ಪೂರೈಸುವ ಜತೆಗೆ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ. ಬೇಕು ಎಂದರೆ ಕತೆಗಳನ್ನು ಕೂಡ ಹೇಲುತ್ತವೆ. ನಿಜವಾಗಿಯೂ ಮನುಷ್ಯರೇ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬಂತೆ ವರ್ತಿಸುತ್ತವೆ. ಅಂದಹಾಗೆ, ದಿನದ 24 ಗಂಟೆಯೂ ಕೆಫೆ ತೆರೆದಿರಲಿದ್ದು, ಇಲ್ಲಿ ಲಲನೆಯರಂತೆ ಕಾಣುವ ರೋಬೊಗಳ ಕೈಯಿಂದ ತಿಂಡಿ ತಿನ್ನಲು, ಕಾಫಿ ಕುಡಿಯಲು ತುಂಬ ಜನ ಕಾತುರದಿಂದ ಕಾಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Janhvi Kapoor | ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಜಾಹ್ನವಿ ಕಪೂರ್-ಶಿಖರ್: ವೈರಲ್ ಆಯ್ತು ಫೋಟೊ