ಪೂಂಛ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ಸೇನೆಯ “ಸೈಲೆಂಟ್ ವಾರಿಯರ್ಸ್ʼ ಪಡೆಯಿಂದ ಯೋಗಾಭ್ಯಾಸ ನಡೆಯಿತು.
ಸೇನೆಯಲ್ಲಿ ಶ್ವಾನಗಳ ಪಡೆಯನ್ನು ಸೈಲೆಂಟ್ ವಾರಿಯರ್ಸ್ ಎಂದು ಕರೆದು ಗೌರವಿಸಲಾಗುತ್ತದೆ.
ಸೇನೆಯಲ್ಲಿ ಶ್ವಾನ ದಳವನ್ನು ಒಳಗೊಂಡಿರುವ ಈ ಸೈಲೆಂಟ್ ವಾರಿಯರ್ಸ್ ವಿಭಾಗಕ್ಕೆ ಅದರದ್ದೇ ಆದ ಮಹತ್ವ ಇದೆ. ಅತಿ ಸೂಕ್ಷ್ಮ ಕಾರ್ಯಾಚರಣೆಗಳಲ್ಲಿ ಸೈಲೆಂಟ್ ವಾರಿಯರ್ಸ್ ಪಡೆ ನಿರ್ಣಾಯಕ ಪಾತ್ರ ವಹಿಸುತ್ತದೆ.
ಡ್ರಗ್ಸ್ ಹಾಗೂ ಸ್ಫೋಟಕಗಳನ್ನು ಪತ್ತೆ ಹಚ್ಚುವುದು, ಶತ್ರುಗಳ ಬಗ್ಗೆ ಅಲರ್ಟ್ ಮಾಡುವುದು ಮಾತ್ರವಲ್ಲದೆ ಹಲವು ಕೆಲಸಗಳನ್ನೂ ತರಬೇತಿ ಪಡೆದ ಮಿಲಿಟರಿ ಶ್ವಾನಗಳು ನಿರ್ವಹಿಸುತ್ತವೆ. ಹೀಗಾಗಿ ಯೋಧರು ಮತ್ತು ಈ ಶ್ವಾನಗಳ ನಡುವೆ ಅವಿನಾಭಾವ ನಂಟು ಇರುತ್ತದೆ.