Site icon Vistara News

ನೌಕಾಪಡೆಯಲ್ಲೂ ಶಾಶ್ವತ ಆಯೋಗ ಜಾರಿಗೆ ತನ್ನಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Supreme Court

Electoral Bonds: Supreme Court pulls up SBI, asks it to disclose all information

ನವದೆಹಲಿ: ಭಾರತದ ಕರಾವಳಿ ರಕ್ಷಣಾ ದಳದಲ್ಲಿ (Coast Guard Officers) ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಆಯೋಗದ (Permanent Commission) ಸೌಲಭ್ಯ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ (Central Government) ಸುಪ್ರೀಂ ಕೋರ್ಟ್‌ (Supreme Court) ತಾಕೀತು ಮಾಡಿದೆ. “ಲಿಂಗ ತಾರತಮ್ಯದ ಆಧಾರದ ಮೇಲೆ ಯಾವುದೇ ಕಾರಣಕ್ಕೂ ಕೋಸ್ಟ್‌ ಗಾರ್ಡ್‌ನಲ್ಲಿ ಮಹಿಳೆಯರನ್ನು ತಿರಸ್ಕರಿಸಬಾರದು” ಎಂದು ಕೂಡ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಅಂತಿಮ ಆದೇಶ ಹೊರಡಿಸಿದೆ.

ಕೋಸ್ಟ್‌ ಗಾರ್ಡ್‌ನಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗಳಿಗೂ ಶಾಶ್ವತ ಆಯೋಗ ರಚಿಸಬೇಕು ಎಂದು ಕೋಸ್ಟ್‌ ಗಾರ್ಡ್‌ ಮಹಿಳಾ ಅಧಿಕಾರಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. “ಯಾವುದೇ ಕಾರಣಕ್ಕೂ ಮಹಿಳೆಯರನ್ನು ಸೌಲಭ್ಯಗಳಿಂದ ಹೊರಗಿಡುವಂತಿಲ್ಲ. ನಿಮಗೆ ಮಾಡಲು ಆಗದಿದ್ದರೆ ಹೇಳಿ, ನಾವು ಮಾಡುತ್ತೇವೆ” ಎಂದು ಖಾರವಾಗಿ ಪ್ರತಿಕ್ರಿಯಿಸಿತು.

ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ವಾದ ಮಂಡಿಸಿದರು. ಅವರು, ಭಾರತದ ಸೇನೆ ಹಾಗೂ ನೌಕಾಪಡೆಗಿಂತ ಕೋಸ್ಟ್‌ ಗಾರ್ಡ್‌ ಹೇಗೆ ವಿಭಿನ್ನವಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಇದಾವುದಕ್ಕೂ ಜಗ್ಗದ ಸುಪ್ರೀಂ ಕೋರ್ಟ್‌, “ಯಾವುದೇ ಕಾರಣಕ್ಕೂ ಮಹಿಳಾ ಅಧಿಕಾರಿಗಳಿಗೆ ಸೌಲಭ್ಯ ನೀಡುವುದಿಲ್ಲ ಎಂದು ಹೇಳುವಂತಿಲ್ಲ. ಹೆಣ್ಣುಮಕ್ಕಳು ನೌಕಾಪಡೆ ಹಾಗೂ ಸೇನೆಯಲ್ಲಿ ದಕ್ಷವಾಗಿ ಕೆಲಸ ಮಾಡುತ್ತಾರೆ ಎಂದರೆ, ಕೋಸ್ಟ್‌ ಗಾರ್ಡ್‌ನಲ್ಲೂ ಮಾಡುತ್ತಾರೆ” ಎಂದು ಸೂಚಿಸಿತು. ಮಾರ್ಚ್‌ 1ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: Indian Army: ಭಾರತೀಯ ಸೇನೆಗೆ ಬರಲಿವೆ ₹84,560 ಕೋಟಿ ಮೌಲ್ಯದ ʼಮೇಡ್ ಇನ್ ಇಂಡಿಯಾʼ ಸಲಕರಣೆ; ಏನೇನಿವೆ?

ಏನಿದು ಶಾಶ್ವತ ಆಯೋಗ?

ಕಿರು ಸೇವಾ ಆಯೋಗದ (SSC) ಅಡಿಯಲ್ಲಿ ಮಹಿಳಾ ಅಧಿಕಾರಿಗಳು ಕೋಸ್ಟಲ್‌ ಗಾರ್ಡ್‌ನಲ್ಲಿ 10-14 ವರ್ಷ ಮಾತ್ರ ಸೇವೆ ಸಲ್ಲಿಸಬಹುದಾಗಿದೆ. ಇಷ್ಟು ಅವಧಿ ಮುಗಿದ ಬಳಿಕ ಅವರ ಸೇವಾವಧಿ ಮುಗಿಯಲಿದೆ. ಅವರು ಕಡ್ಡಾಯವಾಗಿ ನಿವೃತ್ತರಾಗಬೇಕಾಗುತ್ತದೆ. ಹಾಗೊಂದು ವೇಳೆ, ಇವರಿಗೂ ಶಾಶ್ವತ ಆಯೋಗ ರಚನೆಯಾದರೆ ಅವರು ನಿವೃತ್ತಿಯ ವಯಸ್ಸಾಗುವವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಈಗಾಗಲೇ ಸೇನೆ ಹಾಗೂ ನೌಕಾಪಡೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version