ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ (Bengaluru Rains) ಜೋರಾಗಲಿದೆ. ನೈರುತ್ಯ ಮುಂಗಾರು (Southwest Monsoon) ಚುರುಕಾಗಿದ್ದು ಮುಂದಿನ 48 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ (Rain News) ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (weather report) ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ.
ಬೆಂಗಳೂರಲ್ಲಿ ಅಬ್ಬರಿಸುವ ಮಳೆರಾಯ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಒಮ್ಮೊಮ್ಮೆ ಭಾರಿ ಮಳೆಯೊಂದಿಗೆ ಗುಡುಗು ಸಹಿತ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Assault Case : ಮನೆ ಕಟ್ಟುವ ವಿಚಾರಕ್ಕೆ ಮಾರಾಮಾರಿ; ಯುವಕನ ಬೆರಳು ಕಚ್ಚಿ ತುಂಡರಿಸಿದ ದುರುಳರು
ಹಿರಿಯೂರಲ್ಲಿ ಭಾರಿ ಮಳೆ ದಾಖಲು
ರಾಜ್ಯದಲ್ಲಿ ಗುರುವಾರ ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದರೆ, ಕರಾವಳಿಯಲ್ಲಿ ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಅತಿ ಹೆಚ್ಚು ಮಳೆ ಚಿತ್ರದುರ್ಗದ ಹಿರಿಯೂರಲ್ಲಿ 12 ಸೆಂ.ಮೀ ಮಳೆಯಾಗಿದೆ.
ಹಿಡಕಲ್ ಅಣೆಕಟ್ಟು (ಬೆಳಗಾವಿ ಜಿಲ್ಲೆ), ಮದ್ದೂರು (ಮಂಡ್ಯ ಜಿಲ್ಲೆ), ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ) ತಲಾ 11 ಹಾಗೂ ಬೆಂಗಳೂರು ನಗರ 9, ಮಧುಗಿರಿ ಬರಗೂರು (ಎರಡೂ ತುಮಕೂರು ಜಿಲ್ಲೆ), ಬೆಂಗಳೂರು ಹಾಲ್ ವಿಮಾನ ನಿಲ್ದಾಣ, ರಾಮನಗರ ತಲಾ 7ದಲ್ಲಿ ಭಾರಿ ಮಳೆ ಮಳೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಆರ್‌ಜಿ, ಉತ್ತರಹಳ್ಳಿ, ಗುಬ್ಬಿ, ದೊಡ್ಡಬಳ್ಳಾಪುರದಲ್ಲಿ ತಲಾ 6, ಧಾರವಾಡ, ಕಣಬರ್ಗಿ ಅವ್ಸ್, ಬಾದಾಮಿ, ಹುಣಸೂರು, ಮಾಗಡಿ , ತುಮಕೂರು, ಮಿಡಿಗೇಶಿ, ಬುಕ್ಕಪಟ್ಟಣ, ಚನ್ನಪಟ್ಟಣ, ಹೆಸರಘಟ್ಟ, ಬೆಂಗಳೂರು ಕೆಐಎಎಲ್. ಬು ಕ್ಯಾಂಪಸ್ ತಲಾ 5 ಸೆಂ.ಮಿ ಮಳೆಯಾಗಿದೆ. ಹುಬ್ಬಳ್ಳಿ, ಬೇಲೂರು, ಹರಪನಹಳ್ಳಿ, ಚಿಂತಾಮಣಿ, ಗೌರಿಬಿದನೂರು, ದೇವನಹಳ್ಳಿ, ಬೆಳ್ಳೂರು, ತೊಂಡೆಭಾವಿ 4ಸೆಂ.ಮೀ ಮಳೆಯಾಗಿದೆ.
ಶಿರಹಟ್ಟಿ, ಬೆಳಗಾವಿ ವಿಮಾನ ನಿಲ್ದಾಣ, ಹುಕ್ಕೇರಿ, ಕಟ್ಕೋಳ, ಯಡವಾಡ , ನರಗುಂದ ಧಾರವಾಡ, ಸಿರಾ, ವೈ ಎನ್ ಹೊಸಕೋಟೆ, ಹೊಸಕೋಟೆ ತಲಾ 3ಸೆಂ,ಮೀ ಮಳೆಯಾಗಿದೆ. ಸಂಕೇಶ್ವರ, ನಿಪ್ಪಾಣಿ, ಬೈಲಹೊಂಗಲ, ರೋನ್, ಚಿಕ್ಕಬಳ್ಳಾಪುರ, ಶ್ರವಣಬೆಳಗೊಳ, ಚಿಕ್ಕನಹಳ್ಳಿ ಎಡಬ್ಲ್ಯೂಎಸ್ ತಲಾ 2, ಲಕ್ಷ್ಮೇಶ್ವರ, ಚಿಕ್ಕೋಡಿ, ಮುರಗೋಡ, ಮತ್ತಿಕೊಪ್ಪ, ಸುತಗಟ್ಟಿ, ಅಣ್ಣಿಗೆರೆ ಆರ್ಸ್, ಕೃಷ್ಣರಾಜಪೇಟೆ , ಚಿತ್ರದುರ್ಗ, ಕೋಲಾರ, ಮಂಡ್ಯ, ಮಾಲೂರು, ಸಾಲಿಗ್ರಾಮದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ