Site icon Vistara News

International Women’s Day : ಕಾರ್ಪೋರೇಟ್‌ ವಲಯಕ್ಕೆ ಕಣ್ಮಣಿಗಳಾಗಿ ದೇಶಕ್ಕೆ ಕೀರ್ತಿ ಈ ಮಹಿಳಾ ಉದ್ಯಮಿಗಳು

#image_title

ಬೆಂಗಳೂರು: ತೊಟ್ಟಿಲು ತೂಗುವ ಕೈ ಲೋಕವನ್ನು ಆಳಬಲ್ಲದು ಎಂದು ಹೆಣ್ಣು ಮಕ್ಕಳು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಎಲ್ಲ ಕ್ಷೇತ್ರ, ಎಲ್ಲ ವಲಯದಲ್ಲೂ ಇಂದು ಹೆಣ್ಣು ಮಕ್ಕಳು ಗಂಡಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ. ಮೊದಲು ಹೆಣ್ಣಿಗೆ ಸೂಕ್ತವಲ್ಲ ಎಂದೇ ಹೇಳಲಾಗುತ್ತಿದ್ದ ಕಾರ್ಪೋರೇಟ್‌ ವಲಯದಲ್ಲೂ ಈಗ ಹೆಣ್ಣು ಮಕ್ಕಳ ಸಾಧನೆ ದೊಡ್ಡ ಮಟ್ಟದಲ್ಲಿದೆ. ಭಾರತದಲ್ಲಿ ಕಾರ್ಪೋರೇಟ್‌ ವಲಯದಲ್ಲಿ ಹೆಸರು ಮಾಡಿದ ಕೆಲವು ಮಹಿಳಾ ಸಾಧಕಿಯರ ಪರಿಚಯ (International Women’s Day) ಇಲ್ಲಿದೆ.

ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ

(ಅಧ್ಯಕ್ಷರು, OP ಜಿಂದಾಲ್ ಗ್ರೂಪ್)
(1.41 ಲಕ್ಷ ಕೋಟಿ ರೂ. ಮೌಲ್ಯ)
ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಭಾರತದ 10 ಅಗ್ರ ಶ್ರೀಮಂತರ ಪಟ್ಟಿಯಲ್ಲಿ ಇರುವವರು. ಅವರು ಸ್ಟೀಲ್ ಮ್ಯಾಗ್ನೆಟ್ ಎಂದೇ ಪ್ರಖ್ಯಾತವಾಗಿರುವ OP ಜಿಂದಾಲ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ವಿದ್ಯುತ್ ಉತ್ಪಾದನೆ, ಮೂಲಸೌಕರ್ಯ ಮತ್ತು ಕೈಗಾರಿಕಾ ಅನಿಲಗಳ ಉದ್ಯಮದಲ್ಲಿಯೂ ಸಾವಿತ್ರಿ ಜಿಂದಾಲ್‌ ಹೆಸರಿದೆ. ಓಂ ಪ್ರಕಾಶ್ ಜಿಂದಾಲ್ ಅವರು 2005ರಲ್ಲಿ ಅಪಘಾತದಲ್ಲಿ ನಿಧನರಾದ ನಂತರ ಅವರ ಪತ್ನಿ ಸಾವಿತ್ರಿ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಮಕ್ಕಳೂ ಕೂಡ ಅವರಿಗೆ ಸಾಥ್‌ ನೀಡಿದ್ದಾರೆ.

ಲೀನಾ ಗಾಂಧಿ ತಿವಾರಿ

#image_title

(ನಿರ್ದೇಶಕಿ, USV ಗ್ರೂಪ್)
(30,000 ಕೋಟಿ ರೂ. ಮೌಲ್ಯ)
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿ ಸ್ಥಾನ ಪಡೆದಿರುವುದು ಲೀನಾ ಗಾಂಧಿ ತಿವಾರಿ. ಬೋಸ್ಟನ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿರುವ ಲೀನಾ ಅವರು USVಯ ನಿರ್ದೇಶಕರಾಗಿದ್ದಾರೆ. USV ಭಾರತದ ಅತ್ಯಂತ ಹಳೆಯ ಮತ್ತು ಹೆಚ್ಚು ಪ್ರಸಿದ್ಧತೆ ಇರುವ ಔಷಧೀಯ ಕಂಪನಿಗಳಲ್ಲಿ ಒಂದಾಗಿದೆ. ಅವರ ಪತಿ ಪ್ರಶಾಂತ್ ಟ್ವೇರಿ ಕೂಡ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ.

ಸ್ಮಿತಾ ಕೃಷ್ಣ ಗೋದ್ರೆಜ್

(22,900 ಕೋಟಿ ರೂ. ಮೌಲ್ಯ)
ಸ್ಮಿತಾ ಕೃಷ್ಣಾ ಗೋದ್ರೇಜ್ ಅವರು ಪ್ರಸಿದ್ಧ ಗೋದ್ರೇಜ್ ಗುಂಪಿನ ಮೂರನೇ ತಲೆಮಾರಿನ ವಾರಸುದಾರರಾಗಿದ್ದಾರೆ. ಕುಟುಂಬದ ಆಸ್ತಿಯಲ್ಲಿ ಐದನೇ ಒಂದು ಪಾಲು ಸ್ಮಿತಾ ಅವರದ್ದಾಗಿದೆ. ಅವರ ಸಹೋದರ ಜಮ್ಶಿದ್ ಕಂಪನಿಯ ಗ್ರಾಹಕ ಸರಕುಗಳ ವ್ಯಾಪಾರ, ಗೋದ್ರೇಜ್ & ಬಾಯ್ಸ್ ಅನ್ನು ನಡೆಸುತ್ತಿದ್ದಾರೆ. ಅವರ ಪತಿ ವಿಜಯ್ ಕೃಷ್ಣ ಅವರು ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದರು ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಮಂಡಳಿಯ ಸದಸ್ಯರೂ ಆಗಿದ್ದರು.

ಫಲ್ಗುಣಿ ಸಂಜಯ್ ನಾಯರ್

(Nykaa ಸ್ಥಾಪಕಿ ಮತ್ತು CEO )
(22,900 ಕೋಟಿ ರೂ. ಮೌಲ್ಯ)
50 ನೇ ವಯಸ್ಸಿನಲ್ಲಿ, ನೈಕಾ ಸಂಸ್ಥೆ ಸ್ಥಾಪಿಸಿದವರು ಫಲ್ಗುಣಿ ಸಂಜಯ್‌ ನಾಯರ್.‌ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಳೆಯ ವಿದ್ಯಾರ್ಥಿನಿಯಾಗಿರುವ ಫಲ್ಗುಣಿ 2012ರಲ್ಲಿ ಕೇವಲ $2 ಮಿಲಿಯನ್ ಹಣದಿಂದ Nykaa ಸಂಸ್ಥೆ ಪ್ರಾರಂಭಿಸಿದರು. ಸಂಸ್ಥೆ ಆರಂಭವಾಗಿ ಒಂದು ದಶಕದೊಳಗೆ ಮಿಲಿಯನ್‌ ಡಾಲರ್‌ ಮೌಲ್ಯಕ್ಕೆ ತಲುಪಿದೆ.

ಕಿರಣ್ ಮಜುಂದಾರ್ ಶಾ

(ಬಯೋಕಾನ್ ಸಮೂಹದ ಅಧ್ಯಕ್ಷರು ಮತ್ತು ಸಂಸ್ಥಾಪಕರು)
(18,000 ಕೋಟಿ ರೂ. ಮೌಲ್ಯ)
ಕಿರಣ್ ಮಜುಂದಾರ್ ಶಾ ಅವರು 1990ರ ದಶಕದಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದವರು. ಬಯೋಕಾನ್‌ ಹೆಸರಿನಲ್ಲಿ ಆರಂಭವಾದ ಸಂಸ್ಥೆಯು, ಭಾರತದಲ್ಲಿ ಎನ್ಜೈಮ್‌ ತಯಾರಿಸಿ ಯುರೋಪ್‌ ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಮೊದಲ ಸಂಸ್ಥೆ ಎನ್ನುವ ಖ್ಯಾತಿಯನ್ನೂ ಪಡೆದಿದೆ. ಬಯೋಕಾನ್ ತನ್ನ ಜೆನೆರಿಕ್ ಔಷಧಿಗಳಿಗೆ ಹೆಸರುವಾಸಿಯಾಗಿದೆ. ಈ ಸಂಸ್ಥೆ ಮಲೇಷಿಯಾದ ಜೋಹರ್‌ನಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿದೆ.

Exit mobile version