Site icon Vistara News

Pre Menstrual Syndrome: ಮುಟ್ಟಿನ ಸಂದರ್ಭದ ಮಾನಸಿಕ ತುಮುಲಗಳಿಗೆ ಸರಳ ಪರಿಹಾರಗಳು!

periods

ಪ್ರಿ-ಮೆನ್‌ಸ್ಟ್ರುವಲ್‌ ಸಿಂಡ್ರೋಮ್‌ ಬಹಳಷ್ಟು ಮಹಿಳೆಯರನ್ನು ಕಾಡುವ ಸಮಸ್ಯೆ. ಮುಟ್ಟಿನ ಅಥವಾ ಋತುಚಕ್ರದ ಮೊದಲು ಭಾವನೆಗಳ ಏರಿಳಿತ ಇದು. ಬಹಳಷ್ಟು ಮಹಿಳೆಯರಲ್ಲಿ ಮುಟ್ಟಿನ ದಿನಗಳಲ್ಲಿ ಮಾನಸಿಕ ತುಮುಲಗಳು, ಕೋಪ, ಅಸಹನೆ ಜಾಸ್ತಿಯಾದರೆ, ಇನ್ನೂ ಕೆಲವರಲ್ಲಿ ಮುಟ್ಟಿಗೂ ಸುಮಾರು 10-12 ದಿನಗಳ ಮೊದಲೇ ಈ ಭಾವನೆಗಳ ವೈಪರೀತ್ಯ (Pre Menstrual Syndrome) ಆರಂಭವಾಗುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಒತ್ತಡ ಹೆಚ್ಚಾಗುವುದು, ರೇಗುವುದು, ಕಿರಿಕಿರಿ ಎನಿಸಿವುದು, ಕೆಲಸದಲ್ಲಿ ಆಲಸ್ಯ ಇತ್ಯಾದಿ ತೊಂದರೆಗಳನ್ನು ಬಿಟ್ಟೂ ಬಿಡದಂತೆ ಕಾಡುತ್ತವೆ. ಇದು ಸಾಮಾನ್ಯ ಸಮಸ್ಯೆಯೇ ಆದರೂ, ಮಹಿಳೆಯರ ನಿತ್ಯ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುವ ಅಂಶವಾಗಿದೆ. ಸ್ತನದಲ್ಲಿ ನೋವು, ಕೆಳಹೊಟ್ಟೆ ಹಾಗೂ ಸೊಂಟದ ಸುತ್ತ ಸೆಳೆತ, ನೋವು, ಹೊಟ್ಟೆ ಉಬ್ಬರಿಸಿದಂತಾಗುವುದು, ತಲೆಸುತ್ತು, ವಿಪರೀತ ಸುಸ್ತು ಇತ್ಯಾದಿಗಳೆಲ್ಲ ಮುಟ್ಟಿನ ಸಂದರ್ಭ ಸಾಮಾನ್ಯ ಕೂಡಾ.

ಆದರೆ, ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕಿಕೊಳ್ಳದಿದ್ದರೆ, ಪ್ರತೀ ತಿಂಗಳ ಆಸುಪಾಸಿನಲ್ಲೂ ಕಷ್ಟಪಡುವುದನ್ನೇ ಕಣ್ಣಿಗೊತ್ತಿಕೊಂಡು ಬದುಕುವುದು ಕಷ್ಟ. ಅದರ ಪರಿಹಾರಕ್ಕೆ ಪ್ರಯತ್ನ ಬಹಳ ಮುಖ್ಯ. ನಾವು ನಿತ್ಯ ಉಣ್ಣುವ ಆಹಾರದಲ್ಲೇ ಹಲವು ತಪ್ಪುಗಳನ್ನು, ನಮ್ಮ ದೇಹಕ್ಕೆ ಹೊಂದಿಕೊಳ್ಳದ ವಿಚಾರಗಳೂ ಘಟಿಸುತ್ತಿರುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಂಡು ಹುಡುಕಿಕೊಂಡು ಆಹಾರದಲ್ ಕೊಂಚ ಬದಲಾವಣೆ ಮಾಡಿಕೊಂಡರೂ ಕೂಡಾ ಗಮನಾರ್ಹ ಸುಧಾರಣೆ ಕಂಡುಬರುವುದುಂಟು. ಹಾಗಾಗಿ ಸೂಕ್ಷ್ಮವಾಗಿ ನಮ್ಮ ದೇಹವನ್ನು ನಾವು ಗಮನಿಸುವುದೂ ಮುಖ್ಯವೇ ಆಗಿದೆ.

ಮುಟ್ಟಿನ ದಿನಗಳು ಹತ್ತಿರ ಬಂದಂತೆ ಅತಿಯಾಗಿ ಕುರುಕಲು, ಚಿಪ್ಸ್‌ ತಿನ್ನಬೇಕೆಂಬ ಬಯಕೆ ಕೆಲವರಿಗೆ ಆಗುವುದುಂಟು. ಚಿಪ್ಸ್‌ನಲ್ಲಿರುವ ಅತಿಯಾದ ಉಪ್ಪು, ದೇಹದಲ್ಲಿ ನೀರು ಸಂಗ್ರಹವಾಗುವಂತೆ ಮಾಡುತ್ತದೆ. ಹಾಗಾಗಿ, ಮುಟ್ಟು ಹತ್ತಿರ ಬರುತ್ತಿದ್ದಂತೆ ಉಪ್ಪಿನಂಶವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇಂತಹ ತೊಂದರೆಗಳಲ್ಲಿ ಕೊಂಚ ಬದಲಾವಣೆ ಕಾಣಬಹುದು.

ಕೇವಲ ಇಷ್ಟೇ ಅಲ್ಲ. ಇನ್ನೂ ಕೆಲವು ವಿಚಾರಗಳನ್ನು ನಾವು ನಮ್ಮ ದೇಹಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿದರೆ, ಈ ತೊಂದರೆಯಿಂದ ಕೊಂಚ ನೆಮ್ಮದಿ ಕಾಣಬಹುದು. ಹಾಗಾಗಿ ಮಹಿಳೆಯರು, ತಮ್ಮ ಭಾವನೆಗಳಲ್ಲಿ ಹತೋಟಿ ಹೊಂದಲು, ನೋವುಗಳಿಂದ ಮುಕ್ತರಾಗಲು, ಕೆಲವು ಸರಳ ಸೂತ್ರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಮಹಿಳೆಯರ ಆರೋಗ್ಯಕ್ಕೆ ಇವು ಅಗತ್ಯ ಕೂಡಾ. ಅವುಗಳ ವಿವರ ಇಲ್ಲಿದೆ.

1 ಮಹಿಳೆಯರು ಕ್ಯಾಲ್ಶಿಯಂನಿಂದ ಶ್ರೀಮಂತವಾಗಿರುವ ಆಹಾರವನ್ನು ಹಾಗೂ ವಿಟಮಿನ್‌ ಡಿಯನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ಸಮಯದ ಭಾವನಾತ್ಮಕ ಏರುಪೇರುಗಳು ಸಮತೋಲನಕ್ಕೆ ಬರುತ್ತವೆ ಎನ್ನುತ್ತದೆ ಬಹಳಷ್ಟು ಅಧ್ಯಯನಗಳು. ಪ್ರತಿದಿನವೂ ಮಹಿಳೆಯರು, ಕೊಬ್ಬು ಕಡಿಮೆಯಿರುವ ಹಾಲು, ಮೊಸರು, ಪನೀರ್‌ ಸೋಯಾ ಹಾಲನ್ನು ಮಹಿಳೆಯರು ಸೇವಿಸಬೇಕು.

ಇದನ್ನೂ ಓದಿ: ಮೊದಲ ಬಾರಿಗೆ ಮುಟ್ಟಿನ ಬಗ್ಗೆ ತಿಳಿದುಕೊಂಡ ಕ್ಷಣ ವಿವರಿಸಿದ ದೀಪಿಕಾ ಪಡುಕೋಣೆ

2. ಸಮತೋಲನವಾದ ಆಹಾರ ಬಹಳ ಮುಖ್ಯ. ಎಲ್ಲ ಬಣ್ಣದ ತರಕಾರಿಗಳು, ನಾರಿನಂಶ ಹೆಚ್ಚಿರುವ ಆಹಾರ, ಹಣ್ಣುಗಳು, ಧಾನ್ಯಗಳು, ಮೊಳಕೆ ಕಾಳುಗಳು ಸೇರಿದಂಥ ಪೋಷಕಾಂಶಯುಕ್ತ ಆಹಾರವನ್ನು ಈ ಸಮಸ್ಯೆ ಇರುವ ಮಂದಿ ಸೇವಿಸಬೇಕು. ಪ್ರತಿನಿತ್ಯ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

3. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ. ಇಸ್ಟ್ರೋಜನ್‌ ಹಾಗೂ ಪ್ರೊಜೆಸ್ಟೆರಾನ್‌ ಹಾರ್ಮೋನಿನ ಮಟ್ಟ ಏರುಪೇರಾಗುವುದರಿಂದಲೇ ಮಹಿಳೆಯರಲ್ಲಿ ಬಾವನೆಯ ಏರಿಳಿತಗಳೂ ತೀವ್ರವಾಗುತ್ತದೆ. ಇದು ಸಿಹಿತಿಂಡಿಯನ್ನು ಹೆಚ್ಚು ಹೆಚ್ಚು ತಿನ್ನಬೇಕೆಂಬ ಬಯಕೆಯನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಆದಷ್ಟೂ ಸಕ್ಕರೆಯಿಂದ ದೂರವಿರಿ.

4. ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬೇಡಿ. ಹಾರ್ಮೋನಿನ ಏರುಪೇರು ಹಸಿವನ್ನೂ ಏರುಪೇರಾಗಿಸುತ್ತದೆ. ಆದರೆ, ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬೇಡಿ. ಉಪಹಾರ ಬಿಟ್ಟರೆ ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಏರುಪೇರಾಗುತ್ತದೆ.

ಇದನ್ನೂ ಓದಿ: Menstrual Hygiene day: ಮುಟ್ಟು ಕಳಂಕವಲ್ಲ, ಕೊಳಕೂ ಅಲ್ಲ; ಮೌಢ್ಯ ಬಿಟ್ಟು ಸ್ವಚ್ಛತೆಯತ್ತ ಗಮನಕೊಡಿ

Exit mobile version