Site icon Vistara News

Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

woman

ಮಹಿಳೆ ತನ್ನ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಪುರುಷರಿಗಿಂತಲೂ ಹೆಚ್ಚು ತನ್ನ ಆರೋಗ್ಯದ ಕಾಳಜಿ ಮಾಡಬೇಕು. ಆದರೆ ಬಹುತೇಕ ಮಹಿಳೆಯರು ಎಡವುವುದೇ ಇಲ್ಲಿ. ಆದರೆ ಯೌವನಾವಸ್ಥೆಯಲ್ಲಿ ತನ್ನ ಕುಟುಂಬದವರ ಕಾಳಜಿ, ಮಕ್ಕಳ ಆರೋಗ್ಯ, ಗಂಡನ ಯೋಗಕ್ಷೇಮ, ತನ್ನ ವೃತ್ತಿ, ಇತರ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಕಾಗದೆ, ತನ್ನ ಆರೋಗ್ಯ, ಕಾಳಜಿ ಎಂಬುದು ಮರೀಚಿಕೆಯಾಗುತ್ತದೆ. ನಾಗಾಲೋಟದ ಜೀವನದಲ್ಲಿ ಇದರ ಅಗತ್ಯ ಸಂದರ್ಭದಲ್ಲಿ ಅರಿವಿಗೆ ಬರುವುದಿಲ್ಲ. ಸೊಂಟ ನೋವು, ಬೆನ್ನು ನೋವು, ತೂಕದಲ್ಲಿ ಹೆಚ್ಚಳ, ಬೊಜ್ಜು, ತಿಂಗಳ ಮುಟ್ಟಿನ ಏರುಪೇರು, ಹೆಚ್ಚಿದ ರಕ್ತಸ್ರಾವ ಎಲ್ಲವೂ ಗೌಣವಾಗುತ್ತದೆ. ಆದರೆ, ಇವುಗಳ ನಿರ್ಲಕ್ಷ್ಯ ತಾನು ಮಾಡಿಬಿಟ್ಟೆನೆಂದು ಅರಿವಾಗುವಾಗ ಬದುಕು ಬಹಳ ಮುಂದೆ ಹೋಗಿರುತ್ತದೆ!

ಮಹಿಳೆಯ ದೇಹಾರೋಗ್ಯದ ದೃಷ್ಟಿಯಿಂದ ಆಕೆಯ ವಯಸ್ಸಿನ ಪ್ರತಿ ದಶಕವೂ ಬಹಳ ಮುಖ್ಯ. ೧೦, ೨೦, ೩೦, ೪೦, ೫೦ ಹೀಗೆ ಪ್ರತಿ ಹತ್ತು ವರ್ಷಗಳಲ್ಲಿ ಆಕೆಯ ದೇಹದಲ್ಲಾಗುವ ಬದಲಾವಣೆ ಬಹಳ. ಹಾಗಾಗಿ ಆಕೆ ತನ್ನ ದೇಹದ ಆರೋಗ್ಯವನ್ನು ಈ ಪ್ರತಿ ದಶಕಗಳಲ್ಲೂ ಹೆಚ್ಚುವರಿ ಜವಾಬ್ದಾರಿಯಿಂದ ಮಾಡಲೇಬೇಕು. ವಯಸ್ಸಿನಲ್ಲಿ ಏರಿಕೆಯಾಗುತ್ತಾ ಇದ್ದಂತೆ ಆಕೆಗೆ ಎದುರಾಗುವ ಆರೋಗ್ಯದ ಸಮಸ್ಯೆಗಳು ಅನೇಕ. ಎಲುಬು ಹಾಗೂ ಮಾಂಸಖಂಡಗಳ ಸಂಬಂಧಿ, ತೂಕದ ವಿಚಾರದಲ್ಲಿ ಹಾಗೂ ಚರ್ಮದ ತೊಂದರೆಗಳು ಹೀಗೆ ಅನೇಕ ತೊಂದರೆಗಳು ಆಕೆಯನ್ನು ಜೀವನದ ಹಲವು ಮಜಲುಗಳಲ್ಲಿ ಕಾಡುತ್ತವೆ.

ಅದರಲ್ಲೂ ಮಹಿಳೆ ನಲುವತ್ತಕ್ಕೆ ಕಾಲಿಡುವ ಘಟ್ಟ ತುಂಬ ಮುಖ್ಯವಾದದ್ದು. ಮೆನೋಪಾಸ್‌ನ ದಿನಗಳಿಗೆ ಹತ್ತಿರಾಗುವ ಹಂತವಿದು. ಹಾಗಾಗಿ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಕೆಲವು ಮಹಿಳೆಯರಿಗೆ ಈ ಸಂದರ್ಭ ತೂಕ ಕಡಿಮೆಯಾಗುತ್ತಾ ಬಂದರೆ, ಇನ್ನೂ ಕೆಲವರಿಗೆ ತೂಕ ಹೆಚ್ಚಾಗುತ್ತದೆ. ಎಲ್ಲಕ್ಕಿಂತ ಹೆಚ್ಚು ೪೦ ದಾಟಿದ ತಕ್ಷಣ ಎಲುಬಿನ ತೊಂದರೆಗಳು, ಮೂಳೆಗಳಲ್ಲಿ ನೋವು, ಸೊಂಟ ನೋವು, ಮುಖದ ಚರ್ಮದ ಮೇಲಾಗುವ ಕಪ್ಪು ಚುಕ್ಕೆಗಳು, ಬೆಳ್ಳಗಾಗುವ ಕೂದಲು ಹೀಗೆ ಎಲ್ಲ ಸಮಸ್ಯೆಗಳೂ ಮುಖ್ಯವಾಹಿನಿಗೆ ಬಂದು ನಿಲ್ಲುತ್ತವೆ. ಹಾಗಾದರೆ ನೀವು ೪೦ರ ಆಸುಪಾಸಿನಲ್ಲಿದ್ದರೆ ಸದ್ಯ ಮಾಡಬೇಕಾದುದೇನು ಎಂಬುದನ್ನು ನೋಡೋಣ.‌

ಇದನ್ನೂ ಓದಿ: ಅವರು ಮಕ್ಕಳಂತಿರಲೇ ಇಲ್ಲ: Elon Musk ತಾಯಿ ಹೇಳಿದ್ದೇನು?

೧. ದಿನದಲ್ಲಿ ಅರ್ಧ ಗಂಟೆಯಾದರೂ ಕೈಕಾಲು ಆಡಿಸಿ ವ್ಯಾಯಾಮ ಮಾಡಿ. ನಲುವತ್ತು ದಾಟಿದ ಮಹಿಳೆಗೆ ಸುಸ್ತು, ತಲೆ ಸುತ್ತುವುದು ಮತ್ತಿತರ ಸಮಸ್ಯೆಗಳು ಇದ್ದಕ್ಕಿದ್ದಂತೆ ತಲೆದೋರಬಹುದು. ಅದಕ್ಕಾಗಿ, ನಿಮ್ಮ ದೇಹದ ಮೇಲೆ ಸ್ವಲ್ಪ ಗಮನ ಕೊಡಿ. ಇದರರ್ಥ ನೀವು ಜಿಮ್‌ಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ವ್ಯಾಯಾಮಗಳನ್ನು ಮಾಡಿ, ಅಥವಾ ಸೂರ್ಯ ನಮಸ್ಕಾರವೋ, ಒಂದಿಷ್ಟು ಆಸನಗಳನ್ನೋ ಮಾಡಬಹುದು. ಅಥವಾ ಅರ್ಧ ಗಂಟೆಯ ನಡಿಗೆಯಾದರೂ ಒಕೆ, ಮಾಡಿ. ಬಿಡಬೇಡಿ. ಈ ಅರ್ಧ ಗಂಟೆ ನಿಮ್ಮ ಇಡೀ ೨೪ ಗಂಟೆಗಳಿಗೆ ಬೇಕಾದ ಚೈತನ್ಯವನ್ನು ನೀಡುತ್ತದೆ.

೨. ಪ್ರೋಟೀನಿನಿಂದ ಶ್ರೀಮಂತವಾಗಿರುವ ಆಹಾರಗಳನ್ನು ತಿನ್ನಿ. ಬಾದಾಮಿ ಈ ನಿಟ್ಟಿನಲ್ಲಿ ಒಳ್ಳೆಯ ಆಯ್ಕೆ. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ ಬಾದಾಮಿ ತಿನ್ನಬಹುದು. ಅಥವಾ ಇನ್ನಾವುದಾದರೂ ಒಣಹಣ್ಣು, ಬೀಜಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಇದು ನಿಮ್ಮ ಮಾಂಸಖಂಡಗಳನ್ನು ಬಲಗೊಳಿಸುವುದಷ್ಟೇ ಅಲ್ಲ, ಹಸಿವನ್ನು ನಿಯಂತ್ರಣದಲ್ಲಿರಿಸುತ್ತದೆ. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ತಗ್ಗಿಸಿ, ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಿರುವ ಊಟ ಮಾಡಿದ್ದರ ಪರಿಣಾಮ ತಟ್ಟದಂತೆ ನೋಡಿಕೊಳ್ಳುತ್ತದೆ. ಬೆಳಗಿನ ಹೊತ್ತು ಉಪಹಾರದ ನಂತ ಒಂರದೆರಡು ಗಂಟೆ ಬಿಟ್ಟಿ ಬಾದಾಮಿ ತಿನ್ನುವುದರಿಂದ ಮಧ್ಯಾಹ್ನ ಅತಿಯಾಗಿ ತಿನ್ನುವುದು ತಪ್ಪುತ್ತದೆ. ಶಕ್ತಿ, ಚೈತನ್ಯ ಹಾಗೂ ಉಲ್ಲಾಸವನ್ನೂ ದೇಹಕ್ಕೆ ನೀಡುತ್ತದೆ.

೩. ಮಾಡುವ ಊಟದ ಬಗ್ಗೆ ಗಮನ ಇರಲಿ. ಸಿಕ್ಕಸಿಕ್ಕ ಟೈಮಲ್ಲಿ ಸಿಕ್ಕಿದ್ದನ್ನು ತಿನ್ನುವ ಗುಣ ಬಿಡಿ. ಈಗ ನೀವು ೪೦ರ ಆಸುಪಾಸಿನಲ್ಲಿದ್ದೀರಿ ಎಂದರೆ, ಆರೋಗ್ಯ- ಆಹಾರ ಎರಡರ ಸಮತೋಲನ ಬಹಳ ಮುಖ್ಯ. ಪೋಷಕಾಂಶಯುಕ್ತ, ಪ್ರೋಟೀನ್‌, ಕ್ಯಾಲ್ಶಿಯಂಗಳಿಂದ ಸಮೃದ್ಧ ಆಹಾರದ ಅಗತ್ಯ ಹೆಚ್ಚಿದೆ ಎಂದು ನೆನಪಿಡಿ. ಹಸಿವಿಲ್ಲದಿರುವುದು, ಅಥವಾ ಹೆಚ್ಚಾದ ಬಾಯಿ ಚಪಲ ಇವೆರಡೂ ಈ ವಯಸ್ಸಿನಲ್ಲಿ ಹಲವರನ್ನು ಕಾಡುತ್ತದೆ. ಅದಕ್ಕಾಗಿಯೇ, ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಶಿಸ್ತಿರಲಿ. ಗೆಂದುಕೊಂಡು ತೂಕ ಇಳಿಸಿಕೊಳ್ಳುವ ಹುಚ್ಚಿನಲ್ಲಿ ಊಟ ಬಿಡುವ ಸಾಹಸಗಳನ್ನೆಲ್ಲ ಮಾಡಬೇಡಿ. ತನ್ನ ತಟ್ಟೆಯಲ್ಲಿ ಏನಿರಬೇಕು ಎಂಬುದು ಗೊತ್ತಿರಲಿ. ಸೊಪ್ಪು, ಬೇಳೆ, ಮೊಳಕೆ ಕಾಳುಗಳು, ತರಕಾರಿಗಳು ಎಲ್ಲವೂ ನಿಮ್ಮ ದಿನನಿತ್ಯದ ಆಹಾರದಲ್ಲಿ ಸಮತೂಕದಲ್ಲಿರಲಿ. 

ಇದನ್ನೂ ಓದಿ: Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು

Exit mobile version