Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ? - Vistara News

ಮಹಿಳೆ

Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

ಮಹಿಳೆ ನಲುವತ್ತಕ್ಕೆ ಕಾಲಿಡುವ ಘಟ್ಟ ತುಂಬ ಮುಖ್ಯ. ಮೆನೋಪಾಸ್‌ನ ದಿನಗಳಿಗೆ ಹತ್ತಿರಾಗುವ ಈ ಹಂತದಲ್ಲಿ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಈಗ ಆರೋಗ್ಯ ಗಮನಿಸಲೇಬೇಕು.

VISTARANEWS.COM


on

woman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಿಳೆ ತನ್ನ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಪುರುಷರಿಗಿಂತಲೂ ಹೆಚ್ಚು ತನ್ನ ಆರೋಗ್ಯದ ಕಾಳಜಿ ಮಾಡಬೇಕು. ಆದರೆ ಬಹುತೇಕ ಮಹಿಳೆಯರು ಎಡವುವುದೇ ಇಲ್ಲಿ. ಆದರೆ ಯೌವನಾವಸ್ಥೆಯಲ್ಲಿ ತನ್ನ ಕುಟುಂಬದವರ ಕಾಳಜಿ, ಮಕ್ಕಳ ಆರೋಗ್ಯ, ಗಂಡನ ಯೋಗಕ್ಷೇಮ, ತನ್ನ ವೃತ್ತಿ, ಇತರ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಕಾಗದೆ, ತನ್ನ ಆರೋಗ್ಯ, ಕಾಳಜಿ ಎಂಬುದು ಮರೀಚಿಕೆಯಾಗುತ್ತದೆ. ನಾಗಾಲೋಟದ ಜೀವನದಲ್ಲಿ ಇದರ ಅಗತ್ಯ ಸಂದರ್ಭದಲ್ಲಿ ಅರಿವಿಗೆ ಬರುವುದಿಲ್ಲ. ಸೊಂಟ ನೋವು, ಬೆನ್ನು ನೋವು, ತೂಕದಲ್ಲಿ ಹೆಚ್ಚಳ, ಬೊಜ್ಜು, ತಿಂಗಳ ಮುಟ್ಟಿನ ಏರುಪೇರು, ಹೆಚ್ಚಿದ ರಕ್ತಸ್ರಾವ ಎಲ್ಲವೂ ಗೌಣವಾಗುತ್ತದೆ. ಆದರೆ, ಇವುಗಳ ನಿರ್ಲಕ್ಷ್ಯ ತಾನು ಮಾಡಿಬಿಟ್ಟೆನೆಂದು ಅರಿವಾಗುವಾಗ ಬದುಕು ಬಹಳ ಮುಂದೆ ಹೋಗಿರುತ್ತದೆ!

ಮಹಿಳೆಯ ದೇಹಾರೋಗ್ಯದ ದೃಷ್ಟಿಯಿಂದ ಆಕೆಯ ವಯಸ್ಸಿನ ಪ್ರತಿ ದಶಕವೂ ಬಹಳ ಮುಖ್ಯ. ೧೦, ೨೦, ೩೦, ೪೦, ೫೦ ಹೀಗೆ ಪ್ರತಿ ಹತ್ತು ವರ್ಷಗಳಲ್ಲಿ ಆಕೆಯ ದೇಹದಲ್ಲಾಗುವ ಬದಲಾವಣೆ ಬಹಳ. ಹಾಗಾಗಿ ಆಕೆ ತನ್ನ ದೇಹದ ಆರೋಗ್ಯವನ್ನು ಈ ಪ್ರತಿ ದಶಕಗಳಲ್ಲೂ ಹೆಚ್ಚುವರಿ ಜವಾಬ್ದಾರಿಯಿಂದ ಮಾಡಲೇಬೇಕು. ವಯಸ್ಸಿನಲ್ಲಿ ಏರಿಕೆಯಾಗುತ್ತಾ ಇದ್ದಂತೆ ಆಕೆಗೆ ಎದುರಾಗುವ ಆರೋಗ್ಯದ ಸಮಸ್ಯೆಗಳು ಅನೇಕ. ಎಲುಬು ಹಾಗೂ ಮಾಂಸಖಂಡಗಳ ಸಂಬಂಧಿ, ತೂಕದ ವಿಚಾರದಲ್ಲಿ ಹಾಗೂ ಚರ್ಮದ ತೊಂದರೆಗಳು ಹೀಗೆ ಅನೇಕ ತೊಂದರೆಗಳು ಆಕೆಯನ್ನು ಜೀವನದ ಹಲವು ಮಜಲುಗಳಲ್ಲಿ ಕಾಡುತ್ತವೆ.

ಅದರಲ್ಲೂ ಮಹಿಳೆ ನಲುವತ್ತಕ್ಕೆ ಕಾಲಿಡುವ ಘಟ್ಟ ತುಂಬ ಮುಖ್ಯವಾದದ್ದು. ಮೆನೋಪಾಸ್‌ನ ದಿನಗಳಿಗೆ ಹತ್ತಿರಾಗುವ ಹಂತವಿದು. ಹಾಗಾಗಿ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಕೆಲವು ಮಹಿಳೆಯರಿಗೆ ಈ ಸಂದರ್ಭ ತೂಕ ಕಡಿಮೆಯಾಗುತ್ತಾ ಬಂದರೆ, ಇನ್ನೂ ಕೆಲವರಿಗೆ ತೂಕ ಹೆಚ್ಚಾಗುತ್ತದೆ. ಎಲ್ಲಕ್ಕಿಂತ ಹೆಚ್ಚು ೪೦ ದಾಟಿದ ತಕ್ಷಣ ಎಲುಬಿನ ತೊಂದರೆಗಳು, ಮೂಳೆಗಳಲ್ಲಿ ನೋವು, ಸೊಂಟ ನೋವು, ಮುಖದ ಚರ್ಮದ ಮೇಲಾಗುವ ಕಪ್ಪು ಚುಕ್ಕೆಗಳು, ಬೆಳ್ಳಗಾಗುವ ಕೂದಲು ಹೀಗೆ ಎಲ್ಲ ಸಮಸ್ಯೆಗಳೂ ಮುಖ್ಯವಾಹಿನಿಗೆ ಬಂದು ನಿಲ್ಲುತ್ತವೆ. ಹಾಗಾದರೆ ನೀವು ೪೦ರ ಆಸುಪಾಸಿನಲ್ಲಿದ್ದರೆ ಸದ್ಯ ಮಾಡಬೇಕಾದುದೇನು ಎಂಬುದನ್ನು ನೋಡೋಣ.‌

ಇದನ್ನೂ ಓದಿ: ಅವರು ಮಕ್ಕಳಂತಿರಲೇ ಇಲ್ಲ: Elon Musk ತಾಯಿ ಹೇಳಿದ್ದೇನು?

೧. ದಿನದಲ್ಲಿ ಅರ್ಧ ಗಂಟೆಯಾದರೂ ಕೈಕಾಲು ಆಡಿಸಿ ವ್ಯಾಯಾಮ ಮಾಡಿ. ನಲುವತ್ತು ದಾಟಿದ ಮಹಿಳೆಗೆ ಸುಸ್ತು, ತಲೆ ಸುತ್ತುವುದು ಮತ್ತಿತರ ಸಮಸ್ಯೆಗಳು ಇದ್ದಕ್ಕಿದ್ದಂತೆ ತಲೆದೋರಬಹುದು. ಅದಕ್ಕಾಗಿ, ನಿಮ್ಮ ದೇಹದ ಮೇಲೆ ಸ್ವಲ್ಪ ಗಮನ ಕೊಡಿ. ಇದರರ್ಥ ನೀವು ಜಿಮ್‌ಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ವ್ಯಾಯಾಮಗಳನ್ನು ಮಾಡಿ, ಅಥವಾ ಸೂರ್ಯ ನಮಸ್ಕಾರವೋ, ಒಂದಿಷ್ಟು ಆಸನಗಳನ್ನೋ ಮಾಡಬಹುದು. ಅಥವಾ ಅರ್ಧ ಗಂಟೆಯ ನಡಿಗೆಯಾದರೂ ಒಕೆ, ಮಾಡಿ. ಬಿಡಬೇಡಿ. ಈ ಅರ್ಧ ಗಂಟೆ ನಿಮ್ಮ ಇಡೀ ೨೪ ಗಂಟೆಗಳಿಗೆ ಬೇಕಾದ ಚೈತನ್ಯವನ್ನು ನೀಡುತ್ತದೆ.

೨. ಪ್ರೋಟೀನಿನಿಂದ ಶ್ರೀಮಂತವಾಗಿರುವ ಆಹಾರಗಳನ್ನು ತಿನ್ನಿ. ಬಾದಾಮಿ ಈ ನಿಟ್ಟಿನಲ್ಲಿ ಒಳ್ಳೆಯ ಆಯ್ಕೆ. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ ಬಾದಾಮಿ ತಿನ್ನಬಹುದು. ಅಥವಾ ಇನ್ನಾವುದಾದರೂ ಒಣಹಣ್ಣು, ಬೀಜಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಇದು ನಿಮ್ಮ ಮಾಂಸಖಂಡಗಳನ್ನು ಬಲಗೊಳಿಸುವುದಷ್ಟೇ ಅಲ್ಲ, ಹಸಿವನ್ನು ನಿಯಂತ್ರಣದಲ್ಲಿರಿಸುತ್ತದೆ. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ತಗ್ಗಿಸಿ, ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಿರುವ ಊಟ ಮಾಡಿದ್ದರ ಪರಿಣಾಮ ತಟ್ಟದಂತೆ ನೋಡಿಕೊಳ್ಳುತ್ತದೆ. ಬೆಳಗಿನ ಹೊತ್ತು ಉಪಹಾರದ ನಂತ ಒಂರದೆರಡು ಗಂಟೆ ಬಿಟ್ಟಿ ಬಾದಾಮಿ ತಿನ್ನುವುದರಿಂದ ಮಧ್ಯಾಹ್ನ ಅತಿಯಾಗಿ ತಿನ್ನುವುದು ತಪ್ಪುತ್ತದೆ. ಶಕ್ತಿ, ಚೈತನ್ಯ ಹಾಗೂ ಉಲ್ಲಾಸವನ್ನೂ ದೇಹಕ್ಕೆ ನೀಡುತ್ತದೆ.

೩. ಮಾಡುವ ಊಟದ ಬಗ್ಗೆ ಗಮನ ಇರಲಿ. ಸಿಕ್ಕಸಿಕ್ಕ ಟೈಮಲ್ಲಿ ಸಿಕ್ಕಿದ್ದನ್ನು ತಿನ್ನುವ ಗುಣ ಬಿಡಿ. ಈಗ ನೀವು ೪೦ರ ಆಸುಪಾಸಿನಲ್ಲಿದ್ದೀರಿ ಎಂದರೆ, ಆರೋಗ್ಯ- ಆಹಾರ ಎರಡರ ಸಮತೋಲನ ಬಹಳ ಮುಖ್ಯ. ಪೋಷಕಾಂಶಯುಕ್ತ, ಪ್ರೋಟೀನ್‌, ಕ್ಯಾಲ್ಶಿಯಂಗಳಿಂದ ಸಮೃದ್ಧ ಆಹಾರದ ಅಗತ್ಯ ಹೆಚ್ಚಿದೆ ಎಂದು ನೆನಪಿಡಿ. ಹಸಿವಿಲ್ಲದಿರುವುದು, ಅಥವಾ ಹೆಚ್ಚಾದ ಬಾಯಿ ಚಪಲ ಇವೆರಡೂ ಈ ವಯಸ್ಸಿನಲ್ಲಿ ಹಲವರನ್ನು ಕಾಡುತ್ತದೆ. ಅದಕ್ಕಾಗಿಯೇ, ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಶಿಸ್ತಿರಲಿ. ಗೆಂದುಕೊಂಡು ತೂಕ ಇಳಿಸಿಕೊಳ್ಳುವ ಹುಚ್ಚಿನಲ್ಲಿ ಊಟ ಬಿಡುವ ಸಾಹಸಗಳನ್ನೆಲ್ಲ ಮಾಡಬೇಡಿ. ತನ್ನ ತಟ್ಟೆಯಲ್ಲಿ ಏನಿರಬೇಕು ಎಂಬುದು ಗೊತ್ತಿರಲಿ. ಸೊಪ್ಪು, ಬೇಳೆ, ಮೊಳಕೆ ಕಾಳುಗಳು, ತರಕಾರಿಗಳು ಎಲ್ಲವೂ ನಿಮ್ಮ ದಿನನಿತ್ಯದ ಆಹಾರದಲ್ಲಿ ಸಮತೂಕದಲ್ಲಿರಲಿ. 

ಇದನ್ನೂ ಓದಿ: Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಹಿಳೆ

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

ಭಾರತೀಯ ರೈಲ್ವೇಯ (Indian Railway) ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Indian Railway
Koo

ಮನೆಯ ಮಗಳು ರೈಲಿನಲ್ಲಿ (Indian Railway) ಒಬ್ಬಳೇ ಪ್ರಯಾಣ (Solo trip) ಮಾಡಬೇಕಾದ ಅನಿವಾರ್ಯತೆ ಬಂದಾಗ ಪೋಷಕರಿಗೆ ಒಂದು ಕ್ಷಣ ಗಾಬರಿಯಾಗುವುದು ಸಹಜ. ಇನ್ನು ಮಹಿಳೆಯರಿಗೂ ಅಷ್ಟೇ.. ಏಕಾಂಗಿಯಾಗಿ ರೈಲು ಪ್ರಯಾಣ (solo women travellers) ಮಾಡಬೇಕಾದ ಸಂದರ್ಭ ಬಂದರೆ ಕೊಂಚ ಆತಂಕವಂತೂ ಮನದಲ್ಲಿ ಇದ್ದೇ ಇರುತ್ತದೆ. ಆದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಬೇಕಾದರೆ ಈ ಚಿಂತೆ ಬೇಕಾಗಿಲ್ಲ.

ಭಾರತೀಯ ರೈಲ್ವೇಯ ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

1989ರಲ್ಲಿ ಜಾರಿಗೆ ಬಂದ ಈ ವಿಶೇಷ ಕಾನೂನು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 139 ರಲ್ಲಿ ವಿವರಿಸಲಾಗಿದೆ. ಒಂಟಿ ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಮಕ್ಕಳೊಂದಿಗೆ ಇರುವವರಿಗೆ ಇದು ರಕ್ಷಣೆ ನೀಡುತ್ತದೆ. ಉದಾಹರಣೆಗೆ ಈ ವಿಭಾಗದ ಪ್ರಕಾರ ಒಬ್ಬ ಮಹಿಳೆ ಪುರುಷ ಪ್ರಯಾಣಿಕರಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಆಕೆ ತನ್ನ ಮಗುವಿನೊಂದಿಗೆ ಇದ್ದರೆ ಅವಳು ರೈಲು ಪಾಸ್ ಅಥವಾ ಟಿಕೆಟ್ ಇಲ್ಲದೆ ಕಂಡುಬಂದರೆ ರಾತ್ರಿಯಲ್ಲಿ ರೈಲಿನಿಂದ ಇಳಿಯಲು ಆದೇಶಿಸಲಾಗುವುದಿಲ್ಲ.

ಹದಿಹರೆಯದ ಹುಡುಗಿ ಅಥವಾ ಮಹಿಳೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಟಿಕೆಟ್ ಹೊಂದಿಲ್ಲದಿದ್ದರೆ ಟಿಟಿಇ ಅವರನ್ನು ರೈಲಿನಿಂದ ಹೊರಹಾಕಲು ಅನುಮತಿ ಇಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ.

ಮಹಿಳೆಯ ಬಳಿ ಹಣವಿದ್ದರೆ ದಂಡ ಪಾವತಿಸಿ ಪ್ರಯಾಣ ಮುಂದುವರಿಸಬಹುದು. ಮಹಿಳೆಗೆ ಹಣದ ಕೊರತೆಯಿರುವ ಸಂದರ್ಭಗಳಲ್ಲಿ ಸಹ ಟಿಟಿಇ ಅವರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲು ಅನುಮತಿ ಇಲ್ಲ. ಆದರೆ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ಒಂಟಿಯಾಗಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕಾದ ಪ್ರಮುಖ ಪ್ರಯಾಣಿಕರ ನಿಯಮಗಳಲ್ಲಿ ಇದು ಒಂದು. ಮಹಿಳಾ ಪ್ರಯಾಣಿಕರಿಗಾಗಿ ಅಧಿಕಾರಿಗಳು ಜಾರಿಗೆ ತಂದಿರುವ ಇನ್ನೂ ಕೆಲವು ನಿಯಮಗಳನ್ನು ಇಲ್ಲಿವೆ.


ಮಹಿಳಾ ಸುರಕ್ಷತೆಗಾಗಿ ಭಾರತೀಯ ರೈಲ್ವೇಯಲ್ಲಿ ಹಲವು ನಿಯಮಗಳು ಜಾರಿಯಲ್ಲಿವೆ
1. ಭಾರತೀಯ ರೈಲ್ವೆ ಕಾಯಿದೆ 1989 ರ ಸೆಕ್ಷನ್ 311 ರ ಅಡಿಯಲ್ಲಿ ಮಿಲಿಟರಿ ಸಿಬ್ಬಂದಿಗೆ ಮಹಿಳಾ ಕಂಪಾರ್ಟ್‌ಮೆಂಟ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

2. ಅಧಿಕಾರಿಗಳೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಇದ್ದಾಗ ಮಾತ್ರ ಮಹಿಳೆಯನ್ನು ಹೊರಹೋಗುವಂತೆ ಹೇಳಬಹುದು.

3. ಸೆಕ್ಷನ್ 162 ರ ಪ್ರಕಾರ 12 ವರ್ಷದೊಳಗಿನ ಹುಡುಗರು ಮಹಿಳಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು.

4. ಮಹಿಳಾ ಕೋಚ್‌ಗೆ ಪ್ರವೇಶಿಸುವ ಯಾವುದೇ ಪುರುಷ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

5. ಮಹಿಳೆಯರಿಗಾಗಿ ದೂರದ ಮೇಲ್/ ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ವರ್ಗದಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಗರೀಬ್ ರಥ/ರಾಜಧಾನಿ/ ದುರೊಂಟೊ/ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಹಂತದ AC (3AC) ಕೋಚ್‌ಗಳಲ್ಲಿ ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ. ಅವರ ವಯಸ್ಸನ್ನು ಲೆಕ್ಕಿಸದೆ ಅಥವಾ ಅವರು ಏಕಾಂಗಿಯಾಗಿ ಅಥವಾ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಇದನ್ನು ಮಾಡಲಾಗುತ್ತದೆ.

6. ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಸಿಸಿಟಿವಿಗಳು ಮತ್ತು ಮೇಲ್ವಿಚಾರಣಾ ಕೊಠಡಿಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಿದೆ.

7. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) 2020ರ ಅಕ್ಟೋಬರ್ 17ರಂದು ‘ಮೇರಿ ಸಹೇಲಿ’ ಎಂಬ ಪ್ಯಾನ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

8. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಬೋರ್ಡಿಂಗ್‌ನಿಂದ ಡಿ-ಬೋರ್ಡಿಂಗ್‌ವರೆಗಿನ ಸಂಪೂರ್ಣ ಪ್ರಯಾಣಕ್ಕಾಗಿ ವರ್ಧಿತ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

9. ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವವರಿಗೆ ಭದ್ರತೆಯನ್ನು ಒದಗಿಸುವುದು ಉಪಕ್ರಮದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

Continue Reading

ದೇಶ

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Isha Ambani: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಮಾಹಿತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಹೆಣ್ಣುಮಕ್ಕಳು ತಂತ್ರಜ್ಞಾನ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಹಾಗೂ ಪುರುಷರ ಪಾಲ್ಗೊಳ್ಳುವಿಕೆ ಅನುಪಾತವು ಸಮಾನವಾಗಿ ಇರಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ ತಿಳಿಸಿದ್ದಾರೆ.

VISTARANEWS.COM


on

Isha Ambani
Koo

ನವದೆಹಲಿ: ನಾಲ್ಕನೇ ಕೈಗಾರಿಕೆ ಕ್ರಾಂತಿಯಾದ ಈ ಡಿಜಿಟಲ್ ಯುಗದಲ್ಲಿ ಭಾರತ ದೇಶವು ವಿಶ್ವನಾಯಕ ಆಗಿ ಹೊರಹೊಮ್ಮಲು ಹೆಣ್ಣು ಮಕ್ಕಳನ್ನು ಮುಂದೆ ತರಬೇಕು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಮಾಹಿತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ (Isha Ambani) ಅಭಿಪ್ರಾಯಪಟ್ಟರು.

ದೂರಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಗರ್ಲ್ಸ್ ಇನ್ ಐಸಿಟಿ ಇಂಡಿಯಾ– 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ತಂತ್ರಜ್ಞಾನ ಕ್ಷೇತ್ರವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಹಾಗೂ ಪುರುಷರ ಪಾಲ್ಗೊಳ್ಳುವಿಕೆ ಅನುಪಾತವು ಸಮಾನವಾಗಿ ಇರಬೇಕು. ಇದಕ್ಕಾಗಿ ನಾವು ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather: ಇಂದು, ನಾಳೆ ಗುಡುಗು, ಮಿಂಚು ಸಹಿತ ಭಾರಿ ಮಳೆ; ಉತ್ತರ ಒಳನಾಡಿನಲ್ಲಿ ಆರೆಂಜ್ ಅಲರ್ಟ್

ಭಾರತ ಸರ್ಕಾರ, ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ದಕ್ಷಿಣ ಏಷ್ಯಾ), ಇನ್ನೋವೇಶನ್ ಸೆಂಟರ್ – ದೆಹಲಿ ಮತ್ತು ಇತರ ಯುಎನ್ ಏಜೆನ್ಸಿಗಳ ದೂರಸಂಪರ್ಕ ಇಲಾಖೆ ಜಂಟಿಯಾಗಿ ‘ಗರ್ಲ್ಸ್ ಇನ್ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ (ಜಿಐಸಿಟಿ) ಇಂಡಿಯಾ – 2024’ ಅನ್ನು ಆಯೋಜಿಸಿವೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಇಶಾ ಅಂಬಾನಿ, ಸರ್ಕಾರವು ಅಗತ್ಯ ಸುಧಾರಣೆಗಳನ್ನು ಮಾಡುತ್ತಿದೆ ಮತ್ತು ಅದರ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಕಳೆದ ಒಂದು ದಶಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರನ್ನು ಗಮನಿಸಿದರೆ ಮಹಿಳಾ ಪ್ರಾತಿನಿಧ್ಯವು ಶೇ. 6ರಷ್ಟು ಹೆಚ್ಚಾಗಿದೆ. ಆದರೆ ಉದ್ಯಮವು ತನ್ನ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಮಹಿಳೆಯರ ವೃತ್ತಿ ಜೀವನದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ವಿಧಾನಗಳು ಮತ್ತು ಸಾಧನಗಳನ್ನು ಸಿದ್ಧಪಡಿಸಬೇಕು. ಒಟ್ಟಾರೆಯಾಗಿ, ನಮ್ಮ ಹೆಣ್ಣುಮಕ್ಕಳು ನಾಳಿನ ನಾಯಕತ್ವ ವಹಿಸುವುದಕ್ಕೆ ಸಮಾನ ಅವಕಾಶಗಳನ್ನು ಹೊಂದಿರುವ ಭವಿಷ್ಯವನ್ನು ನಾವು ರೂಪಿಸಬಹುದು ಎಂದು ಹೇಳಿದರು.

ಇದನ್ನೂ ಒದಿ: Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

ಇಶಾ ಅವರು ತಮ್ಮ ತಾಯಿ ನೀತಾ ಅಂಬಾನಿಯವರ ಮಾತನ್ನು ಉಲ್ಲೇಖಿಸಿ, “ಒಬ್ಬ ಪುರುಷನನ್ನು ಸಬಲಗೊಳಿಸಿದರೆ ಆತ ತನ್ನ ಕುಟುಂಬವನ್ನು ಪೋಷಿಸುತ್ತಾನೆ, ಆದರೆ ಮಹಿಳೆ ಸಬಲಳಾಗಿದ್ದರೆ, ಅವಳು ಇಡೀ ಗ್ರಾಮವನ್ನು ಪೋಷಿಸುತ್ತಾಳೆ” ಎಂದು ಅವರು ಪದೇ ಪದೇ ಹೇಳುತ್ತಾರೆ. “ನನಗೆ ಅಮ್ಮ ಹೇಳುವ ಮಾತಿನಲ್ಲಿ ಸಂಪೂರ್ಣ ವಿಶ್ವಾಸವಿದೆ. ಮಹಿಳೆಯರು ಹುಟ್ಟಿನಿಂದಲೇ ನಾಯಕಿಯರು. ಅವರಲ್ಲಿರುವ ಸಹಜವಾದ ನಿಸ್ವಾರ್ಥತೆಯು ಅತ್ಯುತ್ತಮ ನಾಯಕರನ್ನಾಗಿ ಮಾಡುತ್ತದೆ. ಮಹಿಳಾ ಉದ್ಯೋಗಿಗಳನ್ನು ಅವರ ವೃತ್ತಿ ಜೀವನದ ಆರಂಭದಿಂದಲೂ ಪ್ರೋತ್ಸಾಹಿಸಬೇಕು ಮತ್ತು ಕೇವಲ ಕಾಗದದ ಮೇಲೆ ಮಾತ್ರ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ತೋರಿಸುವುದರಿಂದ ಯಾವುದೇ ಬದಲಾವಣೆಯನ್ನು ಆಗುವುದಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದರು.

Continue Reading

ಬೆಂಗಳೂರು

Bengaluru News: ಮಹಿಳೆಯರು ಸೋಷಿಯಲ್‌ ಮೀಡಿಯಾ ಬಳಸುವಾಗ ಎಚ್ಚರ ವಹಿಸಬೇಕು ಎಂದ ಮಹಿಳಾ ಆಯೋಗದ ಅಧ್ಯಕ್ಷೆ

Bengaluru News: ಬೆಂಗಳೂರಿನ ಎಎಂಸಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪ್ರತಿಷ್ಠಿತ ಸೈಬರ್‌ ಸೆಕ್ಯುರಿಟಿ ಸಂಸ್ಥೆಯಾದ ಜೆಸ್ಕೇಲರ್‌ ಪ್ರಾಯೋಜಕತ್ವದೊಂದಿಗೆ ಸೈಬರ್‌ ದಾಳಿಗಳಿಂದ ಪಾರಾಗಲು ವಿಶಿಷ್ಟ ತಂತ್ರಜ್ಞಾನದೊಂದಿಗೆ ರೂಪಿಸಿರುವ ದೇಶದಲ್ಲೇ ಮೊಟ್ಟಮೊದಲ ವ್ಯವಸ್ಥೆಯಾದ ಕಾಪ್‌ಕನೆಕ್ಟ್‌ (ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ) ಎಂಬ ಸೈಬರ್‌ ಸೆಕ್ಯುರಿಟಿ ಕೆಫೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು.

VISTARANEWS.COM


on

CopConnect cyber security caffe inauguration by Dr Nagalakshmi Chaudhary at bengaluru
Koo

ಬೆಂಗಳೂರು: ಮಹಿಳೆಯರಿಗೆ ತಂತ್ರಜ್ಞಾನದ (Technology) ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ಅವರೂ ಕೂಡ ತಾಂತ್ರಿಕವಾಗಿ ಸಾಕಷ್ಟು ತಿಳುವಳಿಕೆ ಹೊಂದಬೇಕು. ಇಲ್ಲವಾದಲ್ಲಿ ಅನಗತ್ಯ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಎದುರಾಗಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ (Bengaluru News) ಎಚ್ಚರಿಸಿದರು.

ನಗರದ ಎಎಂಸಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪ್ರತಿಷ್ಠಿತ ಸೈಬರ್‌ ಸೆಕ್ಯುರಿಟಿ ಸಂಸ್ಥೆಯಾದ ಜೆಸ್ಕೇಲರ್‌ ಪ್ರಾಯೋಜಕತ್ವದೊಂದಿಗೆ ಸೈಬರ್‌ ದಾಳಿಗಳಿಂದ ಪಾರಾಗಲು ವಿಶಿಷ್ಟ ತಂತ್ರಜ್ಞಾನದೊಂದಿಗೆ ರೂಪಿಸಿರುವ ದೇಶದಲ್ಲೇ ಮೊಟ್ಟಮೊದಲ ವ್ಯವಸ್ಥೆಯಾದ ಕಾಪ್‌ಕನೆಕ್ಟ್‌ (ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ) ಎಂಬ ಸೈಬರ್‌ ಸೆಕ್ಯುರಿಟಿ ಕೆಫೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ:Yadgiri News: ಬರಡು ಭೂಮಿಯಲ್ಲಿ ಈ ರೈತ ಬಂಪರ್ ಮಾವು ಬೆಳೆದಿದ್ದು ಹೇಗೆ?

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ವೈಯಕ್ತಿಕ ವಿವರ, ಪೋಟೋಗಳನ್ನು ಹಂಚಿಕೊಳ್ಳುವ ಮೊದಲು ಗಂಭೀರವಾಗಿ ಯೋಚಿಸಬೇಕು. ಇಂದು ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಂಡು ಅನೇಕ ಮಹಿಳೆಯರು ಹಾಗೂ ಮಕ್ಕಳನ್ನು ಗುರಿ ಮಾಡಿಕೊಳ್ಳುವ ಜಾಲವೇ ಬೆಳೆದುಬಿಟ್ಟಿದೆ. ಈ ಕಾರಣದಿಂದ ಸೈಬರ್‌ ಕ್ರೈಂಗೆ ಗುರಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಹಿಳೆಯರು ಇದನ್ನೆಲ್ಲಾ ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಿಲ್ಲ. ಮಹಿಳಾ ಆಯೋಗ ನಿಮ್ಮ ನೆರವಿಗಿದೆ. ಪೊಲೀಸರು ಕೂಡಾ ನೆರವು ನೀಡುತ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಾಪ್‌ ಕನೆಕ್ಟ್‌ ನಂತಹ ಈ ಉಪಕ್ರಮ ಕೂಡಾ ನಿಮ್ಮನ್ನು ಎಚ್ಚರಿಸುವಲ್ಲಿ ಸಹಾಯ ಮಾಡಲಿದೆ. ಇಂತಹ ಪ್ರಯತ್ನಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.

ಎಎಂಸಿ ಸಂಸ್ಥೆಯ ನಿರ್ದೇಶಕ ಡಾ. ಜಿ.ಎನ್‌. ಮೋಹನ್‌ ಬಾಬು ಮಾತನಾಡಿ, ದಿನದಿಂದ ದಿನಕ್ಕೆ ಸೈಬರ್‌ ದಾಳಿಗಳು ಹೆಚ್ಚಾಗುತ್ತಿವೆ. ಜಾಗತಿಕವಾಗಿ ನೋಡಿದಾಗ ಕಳೆದ ಐದಾರು ವರ್ಷಗಳಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆಯೇ ಅತಿ ಹೆಚ್ಚಿರುವುದು. ಮುಂದಿನ ಇನ್ನೂ ಎರಡು ದಶಕಗಳ ಕಾಲ ಸೈಬರ್‌ ಕ್ರೈಂಗಳೇ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ. ಪ್ರಸ್ತುತ ಸರಿ ಸುಮಾರು 40 ಬಿಲಿಯನ್‌ ಉಪಕರಣಗಳು ಇಂಟರ್‌ನೆಟ್‌ಗೆ ಕನೆಕ್ಟ್‌ ಆಗಿವೆ. ಖಂಡ, ಖಂಡಗಳ ನಡುವೆಯೇ ಸೂಪರ್ ಇಂಟರ್‌ನೆಟ್‌ ರಹದಾರಿ ನಿರ್ಮಿಸಿದೆ. ಇಂತಹ ಸನ್ನಿವೇಶದಲ್ಲಿ ಸೈಬರ್‌ ದಾಳಿಯಿಂದ ತಪ್ಪಿಸಿಕೊಳ್ಳಲು ಎಐ ಅಪ್ಲಿಕೇಶನ್‌ಗಳ ಮೊರೆ ಹೋಗುವ ತುರ್ತು ಅಗತ್ಯವಿದೆ ಎಂದರು.

ಇದನ್ನೂ ಓದಿ: Song Release: ‘ಇದು ನಮ್ ಶಾಲೆ’ ಚಿತ್ರದ ಹಾಡಿನ ಅನಾವರಣ

ಕಾಪ್‌ ಕನೆಕ್ಟ್‌ ಉಪಕ್ರಮದ ಕುರಿತಂತೆ ಮಾಹಿತಿ ಹಂಚಿಕೊಂಡ ಸಂಸ್ಥೆಯ ಪ್ರಾಂಶುಪಾಲ ಡಾ ಕೆ. ಕುಮಾರ್‌ ಮಾತನಾಡಿ, ಇದೊಂದು ಸೈಬರ್‌ ಕುರಿತಾದ ಉಚಿತ ಕಾರ್ಯಕ್ರಮವಾಗಿದ್ದು, ಸೈಬರ್‌ ದಾಳಿಗಳ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿದೆ. ಸೈಬರ್‌ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಆಪ್‌ವೊಂದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ಇನ್‌ಸ್ಟಾಲ್‌ ಮಾಡಿಕೊಂಡಲ್ಲಿ ನಿಮ್ಮ ಮೊಬೈಲ್‌ಗೆ ಯಾವುದಾದರು ಸೈಬರ್‌ ದಾಳಿಗಳಾದರೆ, ಅಪಾಯಕಾರಿ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಲು ಪ್ರಯತ್ನಿಸಿದರೆ ಅದರಿಂದ ಇದು ರಕ್ಷಣೆ ನೀಡುತ್ತದೆ. ಈ ಆಪ್‌ ನೇರವಾಗಿ ಹಾಂಕ್‌ ಮಷೀನ್‌ಗೆ ಕನೆಕ್ಟ್‌ ಆಗಿದ್ದು, ಅದೇ ರೀತಿಯಲ್ಲಿ ಈ ತಂತ್ರಜ್ಞಾನವು ಕೂಡಾ ಅನಿರೀಕ್ಷಿತ ಸೈಬರ್‌ ದಾಳಿಗಳಿಂದ ಜನರನ್ನು ರಕ್ಷಿಸುತ್ತದೆ.

ಹಣ ಪಾವತಿಸುವುದು, ಗೊತ್ತಿರದ ಆಪ್‌ಗಳ ಬಳಕೆಗೆ ಅನುಮತಿ ನೀಡುವುದು ಸೇರಿದಂತೆ ಅನೇಕ ವಿಷಯಗಳನ್ನ ಎಚ್ಚರಿಸುವ ಕೆಲಸವನ್ನು ಮಾಡುತ್ತದೆ. ಮುಖ್ಯವಾಗಿ ಜನ ಐಟಿ ಕಾಯ್ದೆಗಳ ಮೊರೆ ಹೋಗಬೇಕಾದದ್ದು ಅಗತ್ಯ. ಐಟಿ ಕಾಯ್ದೆ 2000ರ 66ಎ ಅನಿರೀಕ್ಷಿತ ಸೈಬರ್‌ ದಾಳಿಗಳಿಗೆ ನೆರವಾಗುವುದಲ್ಲದೆ, ಸೈಬರ್‌ ಅಪರಾಧಿಗಳನ್ನು ಶಿಕ್ಷಿಸುವಲ್ಲಿಯೂ ಸಹಾಯಕ್ಕೆ ಬರಲಿದೆ. ಒಟ್ಟಾರೆಯಾಗಿ ಎಎಂಸಿ ಸಂಸ್ಥೆಯು ಇಂಥದ್ದೊಂದು ವಿಶೇಷ ಉಪಕ್ರಮ ಆರಂಭಿಸಿದ್ದು, ಇದರ ಕಾರಣೀಕರ್ತರಾದ ಸಂಸ್ಥೆಯ ಸಂಸ್ಥಾಪಕ ಡಾ ಕೆ.ಆರ್.‌ ಪರಮಹಂಸ ಮತ್ತು ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಹುಲ್ ಕಲ್ಲೂರಿ ಅವರ ಪ್ರಯತ್ನ ನೆನೆಯಲೇಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕರ್ನಾಟಕ ಡಿಜಿಟಲ್‌ ಎಕಾನಮಿ ಸಿಇಒ ಸಂಜೀವ್‌ ಗುಪ್ತಾ, ಕಾಪ್‌ಕನೆಕ್ಟ್‌ನ ಸಂಸ್ಥಾಪಕ ನಿರ್ದೇಶಕ ಪಿ. ಆನಂದ ನಾಯ್ಡು, ಜೆಸ್ಕೇಲರ್‌ನ ಮಾರ್ಕೆಟಿಂಗ್‌ ವಿಭಾಗದ ಪ್ರಾದೇಶಿಕ ನಿರ್ದೇಶಕ ಕಾರ್ತಿಕ್‌ ಕಿಶೋರ್ ಉಪಸ್ಥಿತರಿದ್ದರು.

Continue Reading

ಮಹಿಳೆ

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

ಫ್ರಾನ್ಸ್ ನ 101 ವರ್ಷದ ಯೋಗ ಶಿಕ್ಷಕಿಯೊಬ್ಬರು (French Yoga Teacher) ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪುರಸ್ಕಾರ ಪಡೆದಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

VISTARANEWS.COM


on

By

French Yoga Teacher
Koo

ನವದೆಹಲಿ: ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಇದೀಗ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿ (French Yoga Teacher) ಸಾಬೀತು ಪಡಿಸಿದ್ದಾರೆ. ವಯಸ್ಸಿನ ಮಿತಿ ನಿಯಮಗಳನ್ನು ಮೀರಿ ಸುಮಾರು ನಾಲ್ಕು ದಶಕಗಳ ಕಾಲ ಯೋಗಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಶಾರ್ಲೆಟ್ ಚಾಪಿನ್ (Charlotte Chopin) ಅವರಿಗೆ ಭಾರತದ (India) ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ( Padma Shri award) ಅನ್ನು ನೀಡಿ ಗೌರವಿಸಲಾಯಿತು.

ನವದೆಹಲಿಯ (new delhi) ರಾಷ್ಟ್ರಪತಿ ಭವನದಲ್ಲಿ ( Rashtrapati Bhawan) ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಸಿರು ಸೀರೆಯನ್ನು ಧರಿಸಿದ ಶಾರ್ಲೆಟ್ ಚಾಪಿನ್ ವೇದಿಕೆಯತ್ತ ನಡೆದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಯೋಗ ಕ್ಷೇತ್ರದಲ್ಲಿ ಶಾರ್ಲೆಟ್ ಚಾಪಿನ್ ಅವರ ಪ್ರಯತ್ನವನ್ನು ಶ್ಲಾಘಿಸಿ ರಾಷ್ಟ್ರಪತಿಯವರ ಕಚೇರಿಯು ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯೋಗ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಶಾರ್ಲೆಟ್ ಚಾಪಿನ್ ಅವರಿಗೆ ಪ್ರದಾನ ಮಾಡಿದರು. ಅವರು ಪ್ರಸಿದ್ಧ ಫ್ರೆಂಚ್ ಯೋಗ ಶಿಕ್ಷಕಿಯಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯೋಗವನ್ನು ಕಲಿಸುತ್ತಿದ್ದಾರೆ ಮತ್ತು 101ನೇ ವಯಸ್ಸಿನಲ್ಲಿ ಯೋಗ ಶಿಕ್ಷಕರಾಗಿ ಸಕ್ರಿಯರಾಗಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.


ಶಾರ್ಲೆಟ್ ಚಾಪಿನ್ ಯಾರು?

ಚಾಪಿನ್ ಫ್ರಾನ್ಸ್ ಮೂಲದವರಾಗಿದ್ದು, ಪ್ರಸ್ತುತ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ವಯಸ್ಸಿನ ಮಿತಿಯ ಮಾನದಂಡಗಳನ್ನು ಮೀರಿ ಚಾಪಿನ್ ಅವರು 50 ವರ್ಷ ವಯಸ್ಸಿನ ಅನಂತರ ಯೋಗವನ್ನು ಕಲಿತರು. 1982 ರಲ್ಲಿ ಫ್ರಾನ್ಸ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಅವರು ದೇಶದಲ್ಲಿ ಯೋಗದ ಅಲೆಯನ್ನು ಸೃಷ್ಟಿಸಿದರು. ಇದು ಪ್ರಸಿದ್ಧ ಫಿಟ್ನೆಸ್ ಅಭ್ಯಾಸವನ್ನು ಮಾಡಿದರು. ಅವರು ಫ್ರೆಂಚ್ ಟಿವಿ ಶೋ, ‘ಫ್ರಾನ್ಸ್ ಗಾಟ್ ಇನ್‌ಕ್ರೆಡಿಬಲ್ ಟ್ಯಾಲೆಂಟ್’ ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

2023ರ ಜುಲೈನಲ್ಲಿ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಪ್ರವಾಸದಲ್ಲಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಭೇಟಿಯಾದರು. ಯೋಗ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೆಲಸದಿಂದ ಪ್ರಭಾವಿತರಾದ ಪ್ರಧಾನಿ, ಯೋಗದಲ್ಲಿ ಚಾಪಿನ್ ಅವರ ಆಳವಾದ ನಂಬಿಕೆ ಮತ್ತು ಫ್ರಾನ್ಸ್‌ನಲ್ಲಿ ಯೋಗವನ್ನು ಉತ್ತೇಜಿಸಲು ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಯೋಗವು ಸಂತೋಷವನ್ನು ತರುತ್ತದೆ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಜುಲೈನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಚಾಪಿನ್ ಹೇಳಿದ್ದರು.

Continue Reading
Advertisement
Karnataka weather Forecast
ಮಳೆ16 mins ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ2 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Pakistan
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ7 hours ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

MS Dhoni
ಕ್ರೀಡೆ7 hours ago

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

cauvery dispute
ಕರ್ನಾಟಕ7 hours ago

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

MS Dhoni
ಪ್ರಮುಖ ಸುದ್ದಿ7 hours ago

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

Sri Vedavyasa Jayanti programme at Bengaluru
ಬೆಂಗಳೂರು7 hours ago

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Opposition party leader r ashok latest statement in Mysuru
ಪ್ರಮುಖ ಸುದ್ದಿ7 hours ago

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 mins ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ17 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು20 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌