ಕೆಲವೊಮ್ಮೆ ಸಮೀಕ್ಷೆಗಳಿಂದ ಎಂತೆಂಥ ರಹಸ್ಯಗಳು ಬಯಲಾಗುತ್ತವೆ ಎಂದರೆ, ಬಹಳ ಸಾರಿ ವಿಚಿತ್ರವಾಗಿಯೂ, ಇನ್ನೂ ಕೆಲವು ಸಾರಿ ತಮಾಷೆಯಾಗಿಯೂ ಇರುತ್ತವೆ. ಸಮೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳೂ ಅಷ್ಟೇ ತಮಾಷೆಯಾಗಿರುತ್ತವೆ. ಕೆಲವೊಮ್ಮೆ ಪ್ರಶ್ನೆ ಸರಿಯಾದ ತಮಾಷೆಯ ಉತ್ತರಗಳು ದಕ್ಕಿದರೆ ಇನ್ನೂ ಕೆಲವೊಮ್ಮ ಕಟುಸತ್ಯವನ್ನೇ ಹರವಿಬಿಡುತ್ತವೆ..
ಇಲ್ಲೊಂದು ಇಂಥದ್ದೇ ತಮಾಷೆಯಾದ ಸಮೀಕ್ಷೆಯಲ್ಲಿ ೩೫ ಗಂಡಸರನ್ನು ಒಂದೆಡೆ ಕಲೆ ಹಾಕಿ ಒಂದೇ ಪ್ರಶ್ನೆ ಎಸೆಯಲಾಗಿದೆ. ಕೇಳಿದ ಪ್ರಶ್ನೆಯೇನೆಂದರೆ, ʻಮಹಿಳೆಯರಲ್ಲಿ ಸಾಮಾನ್ಯವಾಗಿ ಸೌಂದರ್ಯಕ್ಕೆ ಸಂಬಂಧಿಸಿದಂತೆ ನೀವು ಇಷ್ಟಪಡದ ವಿಚಾರಗಳು ಯಾವುವು?ʼ
ಬಹಳ ಮಂದಿಗೆ ಸಾಮಾನ್ಯವಾಗಿ ಗಂಡಸರು ಮಹಿಳೆಯರಲ್ಲಿ ಯಾವ ವಿಚಾರವನ್ನು ಇಷ್ಟಪಡದಿರಬಹುದು ಎಂಬ ತಿಳುವಳಿಕೆ ಇದ್ದರೂ, ಈ ೩೫ ಮಂದಿ ತಮಗೇನು ಸಾಮಾನ್ಯವಾಗಿ ಇಷ್ಟವಾಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇದನ್ನು ಎಲ್ಲ ಗಂಡುಜಾತಿಯವರ ಸಾಮಾನ್ಯ ಉತ್ತರ ಎಂದೂ ನೀವು ಪರಿಗಣಿಸಬಹುದು. ಕೆಲವರು ಈ ಉತ್ತರದಿಂದ ಲಾಭ ಪಡೆದುಕೊಂಡು ಮುಂದುವರಿಯಲು ಸಲಹೆ ಎಂದಾದರೂ ತಿಳಿದುಕೊಳ್ಳಬಹುದು.
೧. ಅತಿಯಾದ ಮೇಕಪ್: ಮುಖ ನೋಡಿದ ತಕ್ಷಣ ಎಷ್ಟು ಮೇಕಪ್ ಮಾಡಿದ್ದಾಳೆಂದು ಸುಲಭವಾಗಿ ಹೇಳಬಹುದು. ಹಾಗಾಗಿ, ಗಂಡಸರಿಗೆ ಸಹಜವಾಗಿ ಕಾಣುವ ಸರಳ ನೈಜ ಸೌಂದರ್ಯ ಹೊಂದಿರುವ ಮಹಿಳೆಯರೇ ಹೆಚ್ಚು ಇಷ್ಟವಾಗುತ್ತಾರಂತೆ. ಅತಿಯಾದ ಬಣ್ಣ ಮುಖಕ್ಕೆ ಬಳಿದವರನ್ನು ಅಷ್ಟಾಗಿ ಇಷ್ಟಪಡುವುದಿಲ್ಲವಂತೆ!
೨. ಸಣ್ಣ ಅಂಗಿ: ತೀರಾ ಚಿಕ್ಕ ಡ್ರೆಸ್ ಹಾಕಿರುವ, ಶಾರ್ಟ್ಸ್‌ನಲ್ಲಿರುವ ಮಹಿಳೆಯರನ್ನು ಕಂಡರೆ ಗಂಡಸರಿಗೆ ಅಷ್ಟಕ್ಕಷ್ಟೆ ಅಂತೆ.
೩. ಸಿಕ್ಕಾಪಟ್ಟೆ ಸುಗಂಧ: ಯಾರಿಗೂ ದುರ್ಗಂಧ ಇಷ್ಟವಾಗುವುದಿಲ್ಲ ನಿಜ. ಆದರೆ, ಅತಿಯಾಗಿ ಸುಗಂಧಗಳನ್ನು ಮೈಯಿಡೀ ಲೇಪಿಸಿಕೊಳ್ಳುವ ಮಹಿಳೆಯರನ್ನೂ ಗಂಡಸರಿಗೆ ಇಷ್ಟವಾಗುವುದಿಲ್ಲವಂತೆ.
ಇದನ್ನೂ ಓದಿ: 63 ವರ್ಷದ ಮಹಿಳೆಯ ಪ್ರಾಣ ಛತ್ರಿಯಿಂದ ಹೋಯ್ತು; ಕಡಲ ತೀರದ ಗಾಳಿಯಿಂದ ದುರಂತ !
೪. ಕೃತಕ ರೆಪ್ಪೆಗಳು: ನೈಸರ್ಗಿಕ ಕಣ್ರೆಪ್ಪೆಗಳ ಮೇಲೆ ಕೃತಕ ರೆಪ್ಪೆಗಳನ್ನೂ ಕೂರಿಸಿಕೊಂಡು, ನಿಜವಾದದ್ದು ಏನಿದೆ ಎಂಬ ಬಗ್ಗೆಯೇ ಸಂಶಯ ಹುಟ್ಟಿಕೊಳ್ಳುವಂತೆ ಮಾಡುವ ಮಹಿಳೆಯರೆಂದರೆ ಹುಡುಗರಿಗೆ ಊಹೂಂ, ಇಷ್ಟವೇ ಇಲ್ಲವಂತೆ.
೫.ಇನ್ನೂ ಕೆಲವು ಮಹಿಳೆಯರಿರುತ್ತಾರೆ, ಕುತ್ತಿಗೆಯಲ್ಲಿ ಒಂದಿಷ್ಟು, ಕಿವಿಯೇ ಹರಿದು ಹೋಗುವಂತೆ ನೇತಾಡುವ ಇನ್ನೊಂದಿಷ್ಟು, ಕೈಯಲ್ಲಿ ಮತ್ತೊಂದಿಷ್ಟು ಫಂಕಿ ಆಭರಣಗಳನ್ನು ಹಾಕಿಕೊಂಡೇ ಇರುತ್ತಾರೆ. ಅಂತಹ ಮಹಿಳೆಯರನ್ನೂ ಪುರುಷರಿಗೆ ಅಷ್ಟಾಗಿ ಇಷ್ಟವಾಗುವುದಿಲ್ಲವಂತೆ.
೬. ಎಲ್ಲೇ ಹೋದರೂ ಬಂದರೂ ಬಾತುಕೋಳಿಯಂತೆ ತುಟಿಗಳನ್ನು ಪೌಟ್ ಮಾಡಿ ಸೆಲ್ಫೀ ಹಾಕುವ ಮಹಿಳೆಯರತ್ತ ಪುರುಷರು ಆಕರ್ಷಿತರಾಗುವುದಿಲ್ಲವಂತೆ.
೮. ಹೈಹೀಲ್ ಚಪ್ಪಲಿಗಳನ್ನು ಮೆಟ್ಟಿಕೊಂಡು ತುಂಬ ಕಷ್ಟಪಟ್ಟು ನಡೆಯುತ್ತ ಸಹಜವಾಗಿರಲು ಆಗದೆ ಇರುವ ಮಹಿಳೆಯರನ್ನು ಪುರುಷರು ಇಷ್ಟಪಡುವುದಿಲ್ಲವಂತೆ.
೯. ಪ್ಲಾಸ್ಟಿಕ್ ಸರ್ಜರಿಗಳ ಮೂಲಕ ನೈಸರ್ಗಿಕ ಸೌಂದರ್ಯವನ್ನು ಬಿಟ್ಟು ದೇಹದ ಭಾಗಗಳ ಮೇಲೆ ಕತ್ತರಿ ಪ್ರಯೋಗ ಮಾಡುವುದೂ ಸಾಮಾನ್ಯವಾಗಿ ಪುರುಷರಿಗೆ ಆಗಿ ಬರುವುದಿಲ್ಲವಂತೆ.
೧೦. ನೀಲಿ, ಕಂದು, ಕಡುನೇರಳೆ ಮತ್ತಿತರ ಢಾಳಾಗಿ ಕಾಣುವ ಬಣ್ಣಗಳ ಲಿಪ್‌ಸ್ಟಿಕ್ ಹಚ್ಚುವ ಮಹಿಳೆಯರಿಂದ ತಾವು ಇಂಪ್ರೆಸ್ ಆಗುವುದಿಲ್ಲ ಎನ್ನುತ್ತಾರೆ ಪುರುಷರು.
ಇದನ್ನೂ ಓದಿ: ನನ್ನ ಗೆಳೆಯ ಸ್ವಿಜರ್ಲ್ಯಾಂಡ್ಗೆ ಹೋದರೆ ಉಳಿಯೋದಿಲ್ಲ, ಅವನನ್ನು ತಡೆಯಿರಿ: ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ
೧೧. ನೈಸರ್ಗಿಕ ಬಣ್ಣವಲ್ಲದ ನೀಲಿ, ನೇರಳೆ, ಪಿಂಕ್ ಮತ್ತಿತರ ಬಣ್ಣಗಳ ಹೇರ್ ಕಲರ್ ಮಾಡಿಸಿಕೊಳ್ಳುವ ಮಹಿಳೆಯರು ಪುರುಷರಿಗೆ ಇಷ್ಟವಾಗುವುದಿಲ್ಲ.
೧೨. ಜಿಮ್, ಸ್ವಿಮಿಂಗ್ ಪೂಲ್, ಜಾಗಿಂಗ್ ಸಂದರ್ಭವೂ ಮೇಕಪ್ ಧರಿಸಿಕೊಂಡು ಮನೆಯಿಂದ ಹೊರಬೀಳುವ ಮಹಿಳೆಯರನ್ನು ಕಂಡರೆ ಪುರುಷರಿಗೆ ಅಲರ್ಜಿ.
೧೩. ದೊಡ್ಡ ದೊಡ್ಡ ಟ್ಯಾಟೂಗಳನ್ನು ಮೈತುಂಬ ಹಾಕಿಸಿಕೊಳ್ಳುವ ಮಹಿಳೆಯರ ಕಡೆಯೂ ಪುರುಷರಿಗೆ ಆಕರ್ಷಣೆ ಉಂಟಾಗುವುದಿಲ್ಲವಂತೆ.
೧೪. ತೀರಾ ಚಿಕ್ಕದಾಗಿ ಹುಡುಗರಂತೆ ಹೇರ್ ಕಟ್ ಮಾಡಿಸಿಕೊಂಡ ಹುಡುಗಿಯರ ಕಡೆಯೂ ಆಕರ್ಷಣೆ ಕಮ್ಮಿಯಂತೆ.
೧೫. ತೀರಾ ಟೈಟ್ ಆದ, ದೇಹಕ್ಕೆ ಸೂಟ್ ಆಗದ, ಪರಿಸ್ಥಿತಿಗೆ ಹೊಂದದ ದಿರಿಸುಗಳನ್ನು ಧರಿಸುವ ಮಹಿಳೆಯರನ್ನು ಕಂಡರೂ ಆಗುವುದಿಲ್ಲವಂತೆ.