Site icon Vistara News

Sumalatha Ambareesh PC: ನಾನು ರಾಜಕೀಯದಲ್ಲಿ ಇರುವವರೆಗೂ ಅಭಿಷೇಕ್‌ ರಾಜಕೀಯ ಮಾಡಲ್ಲ: ಸುಮಲತಾ ಅಂಬರೀಶ್‌ ಘೋಷಣೆ

Sumalatha Ambareesh PC

#image_title

ಮಂಡ್ಯ: ತಾವು ಯಾವುದೇ ಕಾರಣಕ್ಕೆ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ತಿಳಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌, ತಾವು ರಾಜಕೀಯದಲ್ಲಿ ಇರುವವರೆಗೂ ಪುತ್ರ ಅಭಿಷೇಕ್‌ ಅಂಬರೀಶ್‌ ರಾಜಕಾರಣಕ್ಕೆ ಬರುವುದಿಲ್ಲ ಎಂದು ಘೋಷಣೆ ಮಾಡಿದರು. ತಾವು ಬಿಜೆಪಿಗೆ ಸೇರ್ಪಡೆ ಆಗುತ್ತಿರುವುದನ್ನು ಘೋಷಿಸಲು ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸುಮಲತಾ ಮಾತನಾಡಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುವ ನಾಯಕತ್ವ ನನಗೆ ಬೇಕು. ಅಂತಹ ಆಶ್ವಾಸನೆ ನೀಡಿರುವವರು ಬಿಜೆಪಿ ನಾಯಕರು ಎಂದರು. ನಾನು ಕೊನೆಯವರೆಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ. ನಾನು ಪಕ್ಷಕ್ಕೆ ಸೇರ್ಪಡೆ ಆಗಬೇಕೆಂದರೆ ಅಭಿಷೇಕ್‌ ಅಂಬರೀಶ್‌ಗೆ ಟಿಕೆಟ್‌ ನೀಡಬೇಕು ಎಂದು ಕೇಳಿದ್ದರೆ ನಾನು ಅಂಬರೀಶ್‌ ಪತ್ನಿ ಎಂದು ಹೇಳಿಕೊಳ್ಳಲು ಅರ್ಹಳಲ್ಲ. ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್‌ ರಾಜಕಾರಣಕ್ಕೆ ಬರುವುದಿಲ್ಲ.

ಮದ್ದೂರು ಅಥವಾ ಮಂಡ್ಯದಿಂದ ಟಿಕೆಟ್‌ ಕೊಡುತ್ತೇವೆ ಎಂದು ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದರೆ ಅಭಿಷೇಕ್‌ ಅದಕ್ಕೆ ಒಪ್ಪಿಲ್ಲ. ಹಾಗೇನಾದರೂ ಟಿಕೆಟ್‌ ಪಡೆಯಬೇಕೆಂದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ, ಟಿಕೆಟ್‌ ಪಡೆಯುತ್ತೇನೆ. ನಾನು ಇಂಥವರ ಮಗ ಎಂದು ಹೇಳಿಕೊಂಡು ಟಿಕೆಟ್‌ ಪಡೆಯುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಎಂದರು.

ಇದನ್ನೂ ಓದಿ: Sumalatha Ambareesh PC: ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ: ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅಂಬರೀಶ್‌

ನಾವು 40-45 ವರ್ಷ ಸಿನಿಮಾ ಕ್ಷೇತ್ರದಲ್ಲಿದ್ದರೂ ಅಭಿಷೇಕ್‌ ಸಿನಿಮಾ ನಿರ್ಮಿಸಲು ನಾವೇ ಮುಂದಾಗಿಲ್ಲ. ಬೇರೆ ನಿರ್ಮಾಪಕರು ಅವರಾಗಿಯೇ ಬಂದು ಕೇಳಿದಾಗ ಸಿನಿಮಾ ಮಾಡಿದ್ದಾರೆ. ಅಂತಹದ್ದರಲ್ಲಿ ರಾಜಕೀಯವಾಗಿ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.

Exit mobile version