Site icon Vistara News

ಸಂಸ್ಕೃತ, ಕೊಂಕಣಿಯೂ ಆಗಲಿದೆ Google ಅನುವಾದ

google ಅನುವಾದ

ಬೆಂಗಳೂರು: ಗೂಗಲ್‌ ಎಂದ ತಕ್ಷಣ Google ಗುರು ಎನ್ನುವವರು ಅನೇಕರು. ಇದೀಗ ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತ ಹಾಗೂ ಕರ್ನಾಟಕದ ಕರಾವಳಿ ಭಾಷೆಯನ್ನೂ Google ಅನುವಾದ ಮಾಡಲಿದೆ. ಜಗತ್ತಿನ ಅತಿ ದೊಡ್ಡ ಸರ್ಚ್‌ ಇಂಜಿನ್‌ Google ಇತ್ತೀಚೆಗೆ ಅನುವಾದ ಭಾಷೆಗಳ ಪಟ್ಟಿಯನ್ನು ವಿಸ್ತರಿಸಿದೆ. ಹೊಸ ಪಟ್ಟಿಗೆ 24 ಭಾಷೆಗಳನ್ನು ಸೇರಿಸಲಾಗಿದೆ. ಇದೀಗ ಜಗತ್ತಿನ 133 ಭಾಷೆಗಳು ಅನುವಾದ ಅಗಲಿವೆ. ಸಂಸ್ಕೃತ ಭಾಷೆಯನ್ನು ಹೊಸದಾಗಿ ಸೇರಿಸಲಾಗಿದೆ. 24 ಭಾಷೆಗಳಲ್ಲಿ ಇತರ ಭಾರತೀಯ ಭಾಷೆಗಳಾದ ಅಸ್ಸಾಮಿ, ಮೈಥಿಲಿ, ಕೊಂಕಣಿ, ಮಿಜೋ, ಡೋಗ್ರಿ, ಮಣಿಪುರಿ, ಮೈಟಿಲೋನ್ ಮತ್ತು ಭೋಜ್‌ಪುರಿ ಸಹ ಇವೆ. ಇದೀಗ ಈಗ ಒಟ್ಟು 19 ಭಾರತೀಯ ಭಾಷೆಗಳು ಗೂಗಲ್‌ ಅನುವಾದದಲ್ಲಿ ಲಭ್ಯವಿವೆ.

ಸಂಸ್ಕೃತ ಭಾಷೆಗೆ Google ಅನುವಾದ ಬೇಕು ಎಂದು ಅತಿ ಹೆಚ್ಚು ಜನರು ವಿನಂತಿ ಮಾಡಿದ್ದರು ಎನ್ನಲಾಗಿದೆ. ಅದಕ್ಕಾಗಿಯೇ ಸಂಸ್ಥೆ ಇದೀಗ ಸೇರ್ಪಡೆ ಮಾಡಿದೆ. ಈದೀಗ ಸೇರ್ಪಡೆ ಮಾಡಿರುವ ಭಾಷೆಗಳಲ್ಲಿ ಅನುವಾದ ಲಭಿಸುತ್ತದೆ. ಆದರೆ ಅದು ತೀರಾ ಸಹಜವಾಗಿರುವುದಿಲ್ಲ ಗೂಗಲ್‌ ಅಲ್ಗಾರಿದಂಗಳಿಗೆ ಭಾಷೆಯನ್ನು ಕಲಿಸಬೇಕಾಗುತ್ತದೆ.

ಇದನ್ನೂ ಓದಿ | ಇಂಗ್ಲಿಷ್‌ ಮಾತಿನ ಅಪಾರ್ಥ, ಮೈಮೇಲೆ ಎರಗಿದ ಪಿಟ್‌ಬುಲ್‌ ನಾಯಿ!

ಈ ಕುರಿತು ಸ್ವತಂತ್ರ ವಿಜ್ಞಾನಿ ಸುಭಾಷ್‌ ಕಾಕ್‌ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. Its future is great ಎಂಬ ವಾಕ್ಯವನ್ನು ಅವರು ಗೂಗಲ್‌ ಅನುವಾದಕ್ಕೆ ಹಾಕಿದ್ದಾರೆ. ಗೂಗಲ್‌ ಅದನ್ನು अस्य भविष्यं महत् अस्ति ಎಂದು ಅನುವಾದ ಮಾಡಿದೆ. “ಇದು ಕೇವಲ ಆರಂಭ ಅಷ್ಟೆ. ಗೂಗಲ್‌ ಅನುವಾದದ ದತ್ತಾಂಶ ಸಂಗ್ರಹ ವಿಸ್ತಾರವಾಗಬೇಕಿದೆ. ಭವಿಷ್ಯದಲ್ಲಿ ಈ ಅನುವಾದದ ಗುಣಮಟ್ಟ ಹೆಚ್ಚುತ್ತಲೇ ಸಾಗುತ್ತದೆ” ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ

ಒಂದು ಅಂದಾಜಿನಂತೆ ಭಾರತದಲ್ಲಿ ಸುಮಾರು 20,000 ಜನರು ಸಂಸ್ಕೃತವನ್ನು ಬಳಸುತ್ತಾರೆ. ಆದಾಗ್ಯೂ, ಸಂಸ್ಕೃತವು ಇಂಡೋ-ಯುರೋಪಿಯನ್ ವರ್ಗದ ಹೆಚ್ಚಿನ ಭಾಷೆಗಳ ಮೂಲವಾಗಿರುವುದರಿಂದ, ಇದನ್ನು Google ಅನುವಾದ ವೇದಿಕೆಗೆ ತರುವುದು ಪ್ರಾಮುಖ್ಯತೆಯನ್ನು ಹೊಂದಿದೆ. ಉಳಿದಂತೆ ಅಂದಾಜು 2.5 ಕೋಟಿ ಜನರು ಅಸ್ಸಾಮಿ ಬಳಸುತ್ತಾರೆ. 5 ಕೋಟಿ ಜನರು ಭೋಜ್‌ಪುರಿ ಮಾತನಾಡುತ್ತಾರೆ. 30 ಲಕ್ಷ ಜನರು ಡೋಗ್ರಿ, 20 ಲಕ್ಷ ಜನರು ಕೊಂಕಣಿ ಮಾತೃಭಾಷೆ ಹೊಂದಿದ್ದಾರೆ. 3.4 ಕೋಟಿ ಜನರು ಮೈಥಿಲಿ, 20 ಲಕ್ಷ ಜನರು ಮಣಿಪುರಿ ಮತ್ತು 8.3 ಲಕ್ಷ ಜನರು ಮಿಜೋ ಭಾಷೆಯನ್ನು ಬಳಸುತ್ತಾರೆ.

ಇದನ್ನೂ ಓದಿ| ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

Exit mobile version