ಬೆಂಗಳೂರು: ಅತಿವೇಗ ಚಾಲನೆಯನ್ನು (Rash Driving) ಪ್ರಶ್ನಿಸಿದ್ದಕ್ಕೆ ಲಾರಿ ಚಾಲಕನೊರ್ವ ಅವಾಚ್ಯ ಶಬ್ಧಗಳಿಂದ ಬೈಯ್ದಿದ್ದ ಎಂದು ಬಿಗ್‌ಬಾಸ್ ಸ್ಪರ್ಧಿ (Bigg Boss contestant) ಆ್ಯಡಂ ಪಾಷ (Adam Pasha) ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಅವರು ನೀಡಿದ ದೂರೇ ಅವರಿಗೆ ಮುಳುವುದಾಗಿದೆ.
ಕಳೆದ ಫೆ.10ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆ್ಯಡಂ ಪಾಷ ತಮ್ಮ ಕಾರಿನಲ್ಲಿ ದೊಡ್ಡತೋಗೂರು ಮಾರ್ಗವಾಗಿ ವೆಲಾಂಕಣಿ ಜಂಕ್ಷನ್ ಕಡೆ ಹೋಗುತ್ತಿದ್ದರು. ಈ ವೇಳೆ ದೊಡ್ಡತೋಗೂರು ರಸ್ತೆಯ ತಿರುವಿನಲ್ಲಿ ವಾಟರ್ ಟ್ಯಾಂಕ್ ಚಾಲಕನೊಬ್ಬ ವಾಹವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದ. ಇದನ್ನೂ ಪ್ರಶ್ನಿಸಿದ್ದಕ್ಕೆ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎಂದು ಆರೋಪಿಸಿ ಬಿಗ್ ಬಾಸ್ ಸ್ಪರ್ಧಿ ಆ್ಯಡಂ ಪಾಷ ಎಫ್‌ಐಆರ್ ದಾಖಲು ಮಾಡಿದ್ದರು.
ಇದನ್ನೂ ಓದಿ:Crematorium Problem : ಬೆಳಗಾವಿಯಲ್ಲಿ ಮಹಿಳೆಯರಿಂದಲೇ ನಡೀತು ಅಂತ್ಯ ಸಂಸ್ಕಾರ!
ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ವ್ಯಾಲಂಕೇಣಿ ಬ್ರಿಡ್ಜ್ ಬಳಿ ಘಟನೆ ನಡೆದಿದೆ ಎಂದು ದೂರು ನೀಡಿದ್ದರು. ಆ್ಯಡಂ ಪಾಷ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗಿಳಿದಿದ್ದರು. ಈ ವೇಳೆ ಆ್ಯಡಂಪಾಷ ಎಫ್‌ಐಆರ್ ದಾಖಲಿಸುವ ವೇಳೆ ರಾಂಗ್ ನಂಬರ್ ಕೊಟ್ಟಿದ್ದಾರೆ. ಮಾತ್ರವಲ್ಲ ಹಲ್ಲೆ ಮಾಡದೇ ಇದ್ದರೂ, ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡಿದ್ದಾರೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಆ್ಯಡಂ ಪಾಷ ಕಳ್ಳಾಟ ಬಯಲಾಗಿದ್ದು, ಲಾರಿ ಚಾಲಕನ ವಿರುದ್ಧ ನೀಡಿದ ದೂರೇ ತಿರುಗುಬಾಣವಾಗಿದೆ.
ಆ್ಯಡಂ ಪಾಷ ಸುಳ್ಳು ದೂರು ಕೊಟ್ಟಿರುವುದು ಸಾಬೀತಾಗಿದೆ. ಇದೀಗ ಸಿಸಿಟಿವಿಯ ಒರಿಜಿನಾಲಿಟಿ ರಿಪೋರ್ಟ್‌ಗೆ ಕಳಿಸಿದ್ದಾರೆ. ಸುಳ್ಳು ದೂರು ಕೊಟ್ಟ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ