Site icon Vistara News

Varthur Santhosh Arrest : ವರ್ತೂರು ಸಂತೋಷ್‌ ಹುಲಿಯ ಉಗುರು ಖರೀದಿಸಿದ್ದು ಎಲ್ಲಿ?

Varthuru Santhosh in jail

ಬೆಂಗಳೂರು: ಅರಣ್ಯಾಧಿಕಾರಿಗಳಿಂದ ಬಂಧಿತರಾಗಿರುವ ಬಿಗ್‌ ಬಾಸ್‌ ಸ್ಪರ್ಧಿ (BBK Season 10) ವರ್ತೂರು ಸಂತೋಷ್‌ (Varthur Santhosh Arrest) ಅವರು ಹುಲಿಯ ಉಗುರು ಖರೀದಿಸಿದ್ದು ಎಲ್ಲಿಂದ ಎಂಬ ಇನ್ನೂ ಸ್ಪಷ್ಟತೆ ಮೂಡಿಲ್ಲ. ಯಾಕೆಂದರೆ ಬಂಧಿತ ಸಂತೋಷ್‌ ಅವರು ಒಂದು ಹೇಳುತಿದ್ದರೆ ಅವರ ಮನೆಯವರು ಇನ್ನೊಂದು ಹೇಳುತ್ತಿದ್ದಾರೆ. ಸಂತೋಷ್‌ ಅವರು ಕೂಡಾ ಒಮ್ಮೆ ಒಂದು ಹೇಳಿದರೆ ಇನ್ನೊಮ್ಮೆ ಮತ್ತೊಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ಬಿಗ್‌ ಬಾಸ್‌ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್‌ ಅವರು ಶೋ ಸಂದರ್ಭದಲ್ಲಿ ಧರಿಸಿದ್ದ ಹುಲಿಯುಗುರಿನ ಲಾಕೆಟ್‌ ಮೇಲೆ ಅರಣ್ಯ ಅಧಿಕಾರಿಗಳ (Forest Officials) ಕಣ್ಣುಬಿದ್ದಿತ್ತು. ಹಲವು ಸುತ್ತಿನ ಪರಿಶೀಲನೆ ಬಳಿಕ ಭಾನುವಾರ ರಾತ್ರಿ ಅವರು ರಾಜರಾಜೇಶ್ವರಿ ನಗರದ ಸಮೀಪ ಇರುವ ಬಿಗ್‌ ಬಾಸ್‌ ನಿವಾಸದಿಂದ ಸಂತೋಷ್‌ ಅವರನ್ನು ಬಂಧಿಸಿದ್ದರು. ಅಲ್ಲಿ ನೇರವಾಗಿ ಅವರಲ್ಲಿರುವ ಉಗುರಿನ ಪರಿಶೀಲನೆ ಬಳಿಕ ಬಂಧನ ನಡೆಸಲಾಯಿತು.

ಸಂತೋಷ್‌ ಅವರ ವಿಚಾರಣೆಯ ವೇಳೆ ಒಮ್ಮೆ ಅವರು ಧರ್ಮಪುರಿಯಿಂದ ಖರೀದಿ ಮಾಡಿರುವ ಬಗ್ಗೆ ಹೇಳಿಕೆ ನೀಡಿದರೆ ಮಗದೊಮ್ಮೆ ಯಾರೋ ಗಿಫ್ಟ್ ಕೊಟ್ಟಿದ್ದಾರೆಂದು ಹೇಳಿದ್ದರು. ಇನ್ನೊಮ್ಮೆ ಹೊಸೂರಿನಲ್ಲಿ ಖರೀದಿಸಿದ್ದಾಗಿ ಹೇಳಿದ್ದರು. ಅವರ ಬಳಿ ಎಷ್ಟ ಕಾಲದಿಂದ ಹುಲಿಯುಗುರು ಇದೆ ಎನ್ನುವ ಬಗ್ಗೆಯೂ ಸ್ಪಷ್ಟತೆ ಇಲ್ಲ. ಸಂತೋಷ್‌ ಅವರು ಹತ್ತು ವರ್ಷದಿಂದ ಅಂದರೆ, ಮನೆಯವರು ಮೂರು ವರ್ಷದಿಂದ ಎಂದು ಹೇಳುತ್ತಿದ್ದಾರೆ.

ಈ ನಡುವೆ ಅವರ ತಾಯಿಯ ಹೇಳಿಕೆ ಪ್ರಕಾರ ಇದೆಲ್ಲವೂ ಬೇರೆಯವರ ಪಿತೂರಿಯಾಗಿದೆ. ಬಿಗ್ ಬಾಸ್ ನಲ್ಲಿ ಗೆದ್ದು ಬರ್ತೀನಿ ಎಂದಿದ್ದ. ಹೀಗಾಗಿ ಯಾರೋ ಬೇಕೆಂದೇ ದೂರು ನೀಡಿದ್ದಾರೆ . ನಾವು ಕೂಡ ಪ್ರಾಣಿ ಪ್ರಿಯರು ಹುಲಿ ಉಗುರು ಎಂದು ಗೊತ್ತಾಗಿದ್ದರೆ ಹಾಕಿಕೊಳ್ತಿರ್ಲಿಲ್ಲ ಎಂದು ಹೇಳಿದ್ದಾರೆ.

ಹುಲಿ ಉಗುರನ್ನು ಈಗಾಗಲೇ ಡಿಎನ್ಎ ಟೆಸ್ಟ್ ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವಕೀಲ ನಟರಾಜ್‌ ಅವರ ಪ್ರಕಾರ ಸಂತೋಷ್ ಹುಲಿ ಉಗುರನ್ನು ಖರೀದಿ ಮಾಡಿದ್ದಾರೆಯೇ ಹೊರತು, ಯಾವುದೇ ಪ್ರಾಣಿಯ ಹತ್ಯೆ ನಡೆಸಿಲ್ಲ.

ಇದನ್ನೂ ಓದಿ : Varthur santhosh arrest : ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ, ಜಾಮೀನು ಸಿಗುತ್ತಾ?

ಕಾನೂನು ಪ್ರಕಾರ ಕ್ರಮ ಎಂದ ಈಶ್ವರ ಖಂಡ್ರೆ

ಬೀದರ್: ಈ ನಡುವೆ ವರ್ತೂರ್ ಸಂತೋಷ ಲಾಕೆಟ್ ನಲ್ಲಿ ಹುಲಿಯ ಉಗುರು ಪತ್ತೆ ಪ್ರಕರಣದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೀದರ್‌ನ ಭಾಲ್ಕಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡಿದಾರೆಂಬ ದೂರು ಇತ್ತು. ದೂರಿನ ಆಧಾರದ ಮೇಲೆ ಸಂತೋಷರನ್ನ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ವನ್ಯ ಜೀವಿಗಳ ಸಂರಕ್ಷಣೆ ಕಾನೂನಿನ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ. ನನಗೆ ನಮ್ಮ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು ಹೇಳಿದರು.

ಅರಣ್ಯ ಇಲಾಖೆ ಇಂತಹ ಯಾವುದೇ ಅಕ್ರಮಕ್ಕೆ ಅವಕಾಶ ನೀಡೋದಿಲ್ಲ. ಅಧಿಕಾರಿಗಳಿಗೆ ಸಂಪೂರ್ಣವಾದ ಅಧಿಕಾರ ಕೊಡಲಾಗಿದೆ. ಯಾವುದೇ ರೀತಿಯ ಒತ್ತಡಕ್ಕೊಳಗಾಗದೇ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

Exit mobile version