ಬೆಂಗಳೂರು: ಸೆಂಟ್ರಲ್ ಜೈಲಿನಲ್ಲಿ ನಟ ದರ್ಶನ್ (Actor Darshan) ಫೋಟೊ ವೈರಲ್ ಆಗಿದ್ದೆ ತಡ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಇಷ್ಟಕ್ಕೂ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತಿದ್ದ ದರ್ಶನ್, ಬಳಿಕ ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಇನ್ನು ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್‌ಗೆ ತೆರಳಿ ಎಂದು ಸೂಚಿಸುತ್ತಿದ್ದರಂತೆ. ಈ ವೇಳೆ ಫಿಲ್ಮಿ ಸ್ಟೈಲ್‌ನಲ್ಲೇ ದರ್ಶನ್ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೆ ಸತ್ಯ ಹೊರಗೆ ಬರುತ್ತಿದೆ.
ಬದಲಾದ ಬೆಂಗಳೂರು ಸೆಂಟ್ರೆಲ್ ಜೈಲ್ ಚಿತ್ರಣ
ಬೆಂಗಳೂರು: ದರ್ಶನ್ ಸಿಗರೇಟ್ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ನಿನ್ನೆ ಶನಿವಾರ ಪ್ರತಿಭಟಿಸಿದ್ದಾರೆ. ಫೋಟೊ ವೈರಲ್ ಬಳಿಕ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ.
ಇದನ್ನೂ ಓದಿ: Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್ ಮಾಡಿದ ಖಾಕಿ
ಹಿಂಡಲಗಾ ಜೈಲಿನಲ್ಲಿ ಸಿಗರೇಟ್‌ಗಾಗಿ ಕೈದಿಗಳಿಂದಲ್ಲೂ ಡಿಮ್ಯಾಂಡ್
ಬೆಂಗಳೂರು ಜೈಲಲ್ಲಿ ದರ್ಶನ್ ಸಿಗರೇಟ್ ಸೇದಿದ ಎಫೆಕ್ಟ್ ಇತರ ಕೈದಿಗಳಿಂದಲೂ ಡಿಮ್ಯಾಂಡ್ ಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿಗಳ ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದೆ. ಬೀಡಿ, ಸಿಗರೇಟ್, ತಂಬಾಕು ಕೊಡುವವರಗೆ ನಾವು ತಿಂಡಿ ತಿನ್ನಲ್ಲ ಎನ್ನುತ್ತಿದ್ದಂತೆ. ಬೆಳಗಿನ ಉಪಹಾರ ಮಾಡದೆ ಪ್ರೊಟ್ಟೆಸ್ಟ್ ಮಾಡುತ್ತಿದ್ದರಂತೆ. ಇದೀಗ ಈ ಬೇಡಿಕೆ ಜೈಲಧಿಕಾರಿಗಳಿಗೆ ತಲೆ ನೋವಾಗಿದೆ. ಸದ್ಯ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಜೈಲಾಧಿಕಾರಿಗಳು ಇದ್ದಾರೆ. ಬೀಡಿ ಸಿಗರೇಟ್ ನೀಡದಿದ್ದರೆ ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಬೆದರಿಕೆ ಹಾಕುತ್ತಿದ್ದರಂತೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ