Site icon Vistara News

ʼಅಧ್ಯಕ್ಷʼರ ಅವತಾರಪುರುಷ ಟ್ರೇಲರ್‌ ರಿಲೀಸ್‌..!: ಅಷ್ಟದಿಗ್ಬಂಧನ ಮಂಡಲಕ Part-1

ಬೆಂಗಳೂರು: ಸ್ಯಾಂಡಲ್‌ವುಡ್‌ ಅಧ್ಯಕ್ಷ ಖ್ಯಾತಿಯ ಶರಣ್‌ ಹಾಗೂ ಆಶಿಕಾ ರಂಗನಾಥ್‌ ಅಭಿನಯದ ʼಅವತಾರ ಪುರುಷ ಪಾರ್ಟ್‌ 1 ಸಿನಿಮಾ ಟ್ರೇಲರ್‌ ಬಿಡುಗಡೆಗೊಂಡಿದೆ. ಅಂದಹಾಗೇ ವಿಶೇಷ ಅಂದ್ರೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಟ್ರೇಲರ್‌ ರಿಲೀಸ್‌ ಮಾಡಿರುವುದು. ಎರಡು ಪಾರ್ಟ್‌ಗಳಲ್ಲಿ ಬಂದಿರುವ ಅವತಾರಪುರಷ ಅಷ್ಟದಿಗ್ಬಂಧನಮಂಡಲಕ ಎನ್ನುವ ಅಡಿಬರಹವೇ ಅಭಿಮಾನಿಗಳಿಗೆ ಕುತೂಹಲ ಸೃಷ್ಟಿ ಮಾಡುತ್ತಿದೆ.

ಸಿನಿಮಾವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದು, ಈ ಬಾರಿ ಬೇರೆಯೇ ಕಥೆಯೊಂದಿಗೆ ಈ ಸಿನಿಮಾವನ್ನು ʼಸಿಂಪಲ್‌ ಸುನಿ ʼ ನಿರ್ದೇಶನ ಮಾಡುತ್ತಿರುವುದು ಇನ್ನೂ ವಿಶೇಷ. ಇಲ್ಲಿಯವರೆಗೆ ಪೋಸ್ಟರ್‌ , ಟೀಸರ್‌, ಹಾಡುಗಳು, ಹೀಗೆ ವಿಭಿನ್ನ ಪ್ರಮೋಷನ್‌ಗಳಿಂದ ಗಮನ ಸೆಳೆದಿತ್ತು. ಇದೀಗ ಟ್ರೇಲರ್‌ ರಿಲೀಸ್‌ ಆಗಿದ್ದು, ಸುಮಾರು 4 ಲಕ್ಷ ವೀಕ್ಷಣೆ ಮಾಡಿ ಪ್ರೋತ್ಸಾಹಿಸಿದ್ದಾರೆ.

ಇದನ್ನೂ ಓದಿ | ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್‌ ಪದಾರ್ಪಣೆ ಘೋಷಣೆ

ಟ್ರೇಲರ್‌ ಅಲ್ಲಿ ಕೂಡ, ಸಂಭಾಷಣೆ ಆಕರ್ಷಕವಾಗಿದ್ದು, ಹಾಸ್ಯದ ಜತೆ, ವಿಭಿನ್ನ ಗೆಟಪ್‌ ಮೂಲಕ, ಮಾಟ ಮಂತ್ರದ ಸನ್ನಿವೇಶಗಳನ್ನಿಟ್ಟುಕೊಂಡು ಅಭಿಮಾನಿಗಳಿಗೆ ಇನ್ನೂ ಕೂತುಹಲವನ್ನ ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲದೇ ಅವತಾರ ಪುರುಷ ಶರಣ್‌ ಅವರ ವೃತ್ತಿ ಬದುಕಿನ ದುಬಾರಿ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ ಅವತಾರ ಪುರುಷ ರಿಲೀಸ್‌ ಆಗಿ ಜನರನ್ನ ರಂಜಿಸಲಿದೆ. ಇದರ ಮೊದಲ ಭಾಗ ಇದೇ ಮೇ 6 ಕ್ಕೆ ರಿಲೀಸ್‌ ಆಗುತ್ತಿದ್ದ, ಮೂರು ದಿನ ಮೊದಲು ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ.

ಇನ್ನು ಈ ಸಿನಿಮಾನದಲ್ಲಿ ಹಿರಿಯ ನಟರಾದ ಭವ್ಯಾ, ಸಾಯಿಕುಮಾರ್‌, ಬಿ. ಸುರೇಶ್‌, ಶ್ರೀನಗರ ಕಿಟ್ಟಿ ಜತೆಗೆ ವಿಜಯ್‌ ಚೆಂಡೂರು, ಅಶುತೋಷ್‌ ರಾಣಾ, ಸಾಧುಕೋಕಿಲಾ, ಬಾಲಾಜಿ ಮನೋಹರ್‌ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್‌ ಛಾಯಾಗ್ರಹಣ ಮತ್ತು ಮನು ಶೆಡ್ಗರ್‌ ಸಂಕಲನವಿದೆ.

ಟ್ರೇಲರ್‌ ನೋಡುವಾಗಲೇ, ವಿಭಿನ್ನ ಕಥಾ ಹಂದರ ಹಾಗೂ ಹೊಸ ಬಗೆಯ ಹೊಸ ಲುಕ್‌ ಮೂಲಕ ಶರಣ್‌ ಅವರು ಮೇ 6ರಂದು ತೆರೆ ಮೇಲೆ ಬರುತ್ತಾ ಇರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಇದಕ್ಕೆ ಸಾಥ್‌ ನೀಡುತ್ತಿರುವ ಸರ್ಜಾ ಹಾಗೂ ಶರಣ್‌ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದು, ಸಿನಿಮಾಗೇ ಕಾಯುತ್ತಿದ್ದಾರೆ ಪ್ರೇಕ್ಷಕರು.

ಇದನ್ನೂ ಓದಿ | ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ

Exit mobile version