ಸಿನಿಮಾ
ʼಅಧ್ಯಕ್ಷʼರ ಅವತಾರಪುರುಷ ಟ್ರೇಲರ್ ರಿಲೀಸ್..!: ಅಷ್ಟದಿಗ್ಬಂಧನ ಮಂಡಲಕ Part-1
ಶರಣ್ ಅವರ ವೃತ್ತಿ ಬದುಕಿನ ದುಬಾರಿ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ ರಿಲೀಸ್ ಆಗಿ ಜನರನ್ನ ರಂಜಿಸಲಿದೆ. ಮೊದಲ ಭಾಗ ಮೇ 6ರಂದು ತೆರೆ ಕಾಣಲಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಅಧ್ಯಕ್ಷ ಖ್ಯಾತಿಯ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ʼಅವತಾರ ಪುರುಷ ಪಾರ್ಟ್ 1 ಸಿನಿಮಾ ಟ್ರೇಲರ್ ಬಿಡುಗಡೆಗೊಂಡಿದೆ. ಅಂದಹಾಗೇ ವಿಶೇಷ ಅಂದ್ರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಮಾಡಿರುವುದು. ಎರಡು ಪಾರ್ಟ್‌ಗಳಲ್ಲಿ ಬಂದಿರುವ ಅವತಾರಪುರಷ ಅಷ್ಟದಿಗ್ಬಂಧನಮಂಡಲಕ ಎನ್ನುವ ಅಡಿಬರಹವೇ ಅಭಿಮಾನಿಗಳಿಗೆ ಕುತೂಹಲ ಸೃಷ್ಟಿ ಮಾಡುತ್ತಿದೆ.
ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದು, ಈ ಬಾರಿ ಬೇರೆಯೇ ಕಥೆಯೊಂದಿಗೆ ಈ ಸಿನಿಮಾವನ್ನು ʼಸಿಂಪಲ್ ಸುನಿ ʼ ನಿರ್ದೇಶನ ಮಾಡುತ್ತಿರುವುದು ಇನ್ನೂ ವಿಶೇಷ. ಇಲ್ಲಿಯವರೆಗೆ ಪೋಸ್ಟರ್ , ಟೀಸರ್, ಹಾಡುಗಳು, ಹೀಗೆ ವಿಭಿನ್ನ ಪ್ರಮೋಷನ್‌ಗಳಿಂದ ಗಮನ ಸೆಳೆದಿತ್ತು. ಇದೀಗ ಟ್ರೇಲರ್ ರಿಲೀಸ್ ಆಗಿದ್ದು, ಸುಮಾರು 4 ಲಕ್ಷ ವೀಕ್ಷಣೆ ಮಾಡಿ ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ | ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್ ಪದಾರ್ಪಣೆ ಘೋಷಣೆ
ಟ್ರೇಲರ್ ಅಲ್ಲಿ ಕೂಡ, ಸಂಭಾಷಣೆ ಆಕರ್ಷಕವಾಗಿದ್ದು, ಹಾಸ್ಯದ ಜತೆ, ವಿಭಿನ್ನ ಗೆಟಪ್ ಮೂಲಕ, ಮಾಟ ಮಂತ್ರದ ಸನ್ನಿವೇಶಗಳನ್ನಿಟ್ಟುಕೊಂಡು ಅಭಿಮಾನಿಗಳಿಗೆ ಇನ್ನೂ ಕೂತುಹಲವನ್ನ ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲದೇ ಅವತಾರ ಪುರುಷ ಶರಣ್ ಅವರ ವೃತ್ತಿ ಬದುಕಿನ ದುಬಾರಿ ಸಿನಿಮಾ ಇದಾಗಿದ್ದು, ಎರಡು ಭಾಗಗಳಲ್ಲಿ ಅವತಾರ ಪುರುಷ ರಿಲೀಸ್ ಆಗಿ ಜನರನ್ನ ರಂಜಿಸಲಿದೆ. ಇದರ ಮೊದಲ ಭಾಗ ಇದೇ ಮೇ 6 ಕ್ಕೆ ರಿಲೀಸ್ ಆಗುತ್ತಿದ್ದ, ಮೂರು ದಿನ ಮೊದಲು ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಇನ್ನು ಈ ಸಿನಿಮಾನದಲ್ಲಿ ಹಿರಿಯ ನಟರಾದ ಭವ್ಯಾ, ಸಾಯಿಕುಮಾರ್, ಬಿ. ಸುರೇಶ್, ಶ್ರೀನಗರ ಕಿಟ್ಟಿ ಜತೆಗೆ ವಿಜಯ್ ಚೆಂಡೂರು, ಅಶುತೋಷ್ ರಾಣಾ, ಸಾಧುಕೋಕಿಲಾ, ಬಾಲಾಜಿ ಮನೋಹರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಮನು ಶೆಡ್ಗರ್ ಸಂಕಲನವಿದೆ.
ಟ್ರೇಲರ್ ನೋಡುವಾಗಲೇ, ವಿಭಿನ್ನ ಕಥಾ ಹಂದರ ಹಾಗೂ ಹೊಸ ಬಗೆಯ ಹೊಸ ಲುಕ್ ಮೂಲಕ ಶರಣ್ ಅವರು ಮೇ 6ರಂದು ತೆರೆ ಮೇಲೆ ಬರುತ್ತಾ ಇರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಇದಕ್ಕೆ ಸಾಥ್ ನೀಡುತ್ತಿರುವ ಸರ್ಜಾ ಹಾಗೂ ಶರಣ್ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದು, ಸಿನಿಮಾಗೇ ಕಾಯುತ್ತಿದ್ದಾರೆ ಪ್ರೇಕ್ಷಕರು.
ಇದನ್ನೂ ಓದಿ | ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ
ಕ್ರಿಕೆಟ್
ಸೋಶಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್ಫಾಲೊ ಮಾಡಿಕೊಂಡ ಶುಭ್ಮನ್, ಸಾರಾ! ಏನಾಯಿತು ಅವರಿಗೆ?
ಶುಭ್ಮನ್ ಮತ್ತು ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್ಫಾಲೊ ಮಾಡುವ ಮೂಲಕ ಬೇರ್ಪಟ್ಟಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ಮುಂಬಯಿ: ಶುಭ್ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ನಡುವಿನ ಹೆಸರು ಕಳೆದ ಕೆಲವು ತಿಂಗಳಿಂದ ವದಂತಿಯ ವಿಷಯವಾಗಿದೆ. ಅವರು ಆಗಾಗ ಅಲ್ಲಿಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದೆ ಅದಕ್ಕೆ ಕಾರಣ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದರೂ. ಅವರು ತಮ್ಮ ಸಂಬಧವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಅಥವಾ ನಿರಾಕರಿಸಿರಲಿಲ್ಲ. ಅದೇನೇ ಇದ್ದರೂ, ಇತ್ತೀಚಿನ ವರದಿಗಳ ಪ್ರಕಾರ ಶುಬ್ಮನ್ ಮತ್ತು ಸಾರಾ ಪ್ರತ್ಯೇಕಗೊಂಡಿದ್ದಾರೆ. ಅದೇ ರೀತಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿದೆ.
ಅವರಿಬ್ಬರು ಯಾಕೆ ಅನ್ಫಾಲೊ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಊಹಾಪೋಹ ಸುದ್ದಿಗಳ ಪ್ರಕಾರ ಅವರಿಬ್ಬರೂ ಬ್ರೇಕ್ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರಾ ಎಂಬ ಹೆಸರು ಶುಭ್ಮನ್ ಗಿಲ್ ಹೆಸರಿನ ಜತೆ ತಳುಕು ಹಾಕಿಕೊಂಡಿತತ್ತು. ಅವರು ಐಪಿಎಲ್ ಪಂದ್ಯವಾಡುವ ವೇಳೆ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಮೈದಾನಕ್ಕೆ ಇಳಿಯುವ ಸಂದರ್ಭದಲ್ಲಿ ಪ್ರೆಕ್ಷಕರು ಸಾರಾ, ಸಾರ ಎಂದು ಕೂಗುವ ಮೂಲಕ ಹುರಿದುಂಬಿಸುತ್ತಿದ್ದರು.
ಸಾರಾ ಅಲಿಖಾನ್ ಮತ್ತು ಗಿಲ್ ಎಂದಿಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಮಾಷೆಗಳಲ್ಲಿ ಭಾಗಿಯಾಗುವುದು ಅಥವಾ ಪ್ರತಿಕ್ರಿಯಿಸುವು ನಡೆದಿರಲಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪರಸ್ಪರ ಅನುಸರಿಸುತ್ತಿದ್ದರು. ಇದೀಗ ಅವರಿಬ್ಬರ ಪಾಯೋಯರ್ಗಳ ಪಟ್ಟಿಯಲ್ಲಿ ಪರಸ್ಪರ ಹೆಸರುಗಳು ಕಾಣಿಸುತ್ತಿಲ್ಲ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬುದಾಗಿ ಅಭಿಮಾನಿಗಳು ಊಹಿಸುತ್ತಿದ್ದಾರೆ.
ಸಾರಾ ಅಲಿ ಖಾಣ್ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಶುಬ್ಮನ್ ಗಿಲ್ ಅಥವಾ ಬೇರೆ ಯಾರೊಂದಿಗಾದರೂ ತನ್ನ ಸಂಬಂಧದ ಕುರಿತು ನಟಿ ಎಂದಿಗೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮತ್ತೊಂದೆಡೆ, ಗಿಲ್ ತಮ್ಮ ತಂಡ ಗುಜರಾತ್ ಟೈಟನ್ಸ್ ಪರ ಐಪಿಎಲ್ ಪಂದ್ಯಗಳಲ್ಲಿ ಒಂದರ ನಂತರ ಒಂದರಂತೆ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗ ಸಂಖ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ.
ಸುಳಿವು ಕೊಟ್ಟಿದ್ದ ಗಿಲ್
ಶುಭ್ಮನ್ ಗಿಲ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವರು. ಬಳಿಕ ಅವರಿಬ್ಬರೂ ಬೇರ್ಪಟ್ಟಿದ್ದರು ಎನ್ನಲಾಗಿದೆ. ಇದಾದ ಬಳಿಕ ನಟಿ ಸಾರಾ ಅಲಿ ಖಾನ್ ಜತೆ ಡಿನ್ನರ್ಗೆ ಶುಭ್ಮನ್ ಹೋಗಿದ್ದು ಸುದ್ದಿಯಾಗಿತ್ತು. ಜತೆಗೆ ವಿಮಾನವೊಂದರಲ್ಲಿ ಜತೆಯಾಗಿ ಪ್ರಯಾಣ ಮಾಡಿದ್ದರ ವಿಡಿಯೊಗಳು ಬೆಳಕಿಗೆ ಬಂದಿದ್ದವು.
ಕೆಲವು ತಿಂಗಳ ಹಿಂದೆ, ಸೋನಮ್ ಬಜ್ವಾ ಅವರೊಂದಿಗಿನ ಸಂದರ್ಶನದ ಸಮಯದಲ್ಲಿ ಮಾತನಾಡಿದ ಗಿಲ್, ಸಾರಾ ಜತೆಗಿನ ಡೇಟಿಂಗ್ ಸತ್ಯವೂ ಇರಬಹುದು, ಇಲ್ಲದೆಯೂ ಇರಬಹುದು ಎಂದು ಹೇಳಿದ್ದರು. ಈ ಮೇಲೆ ಅಭಿಮಾನಿಗಳ ಅನುಮಾನ ಹೆಚ್ಚಾಗಿತ್ತು.
ಇದನ್ನೂ ಓದಿ : Shubhman Gill | ಶುಭ್ಮನ್ ಗೆಳತಿ ಯಾರು? ಸಾರಾ ಅಲಿಖಾನ್ ಅಥವಾ ಸಾರಾ ತೆಂಡೂಲ್ಕರ್?
“ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?” ಸೋನಮ್ ಬಾಜ್ವಾ, ಶುಭ್ಮನ್ ಗಿಲ್ ಅವರನ್ನು ಕೇಳಿದ್ದರು. ಅದಕ್ಕೆ ಗಿಲ್ ನಾಚಿಕೆಪಟ್ಟು “ಇರಬಹುದು, ಇಲ್ಲದಿರಬಹುದು” ಎಂದು ಉತ್ತರಿಸಿದ್ದರು.
ಆದರೆ ಸಾರಾ ಯಾರೆಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ತೆಂಡೂಲ್ಕರ್ ಅವರ ಮಗಳು ಸಾರಾ ಅಥವಾ ಪಟೌಡಿ ರಾಜಕುಮಾರಿ ಸಾರಾ ಎಂಬುದಾಗಿ ಅವರು ಹೇಳಿರಲಿಲ್ಲ.
South Cinema
V Manohar: 23 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟ ವಿ.ಮನೋಹರ್
V manohar: ಜೂನ್ 9ರಂದು ಚಿತ್ರಮಂದಿರಗಳಲ್ಲಿ ದರ್ಬಾರ್ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.
ಬೆಂಗಳೂರು: 23 ವರ್ಷಗಳ ನಂತರ ವಿ.ಮನೋಹರ್ (V Manohar) ನಿರ್ದೇಶನಕ್ಕೆ ಇಳಿದಿದ್ದಾರೆ. ಜೂನ್ 9ರಂದು ಚಿತ್ರಮಂದಿರಗಳಲ್ಲಿ `ದರ್ಬಾರ್’ ಸಿನಿಮಾ ಬಿಡುಗಡೆಯಾಗಲಿದೆ. 80 ರಿಂದ 100 ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೀಗ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ.
ಈ ಕುರಿತಂತೆ ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, “ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್. ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ರಾಜಕೀಯ ವಿಡಂಬನೆಯ ಕಥೆಯನ್ನು “ದರ್ಬಾರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆʼʼ ಎಂದರು.
ʻʻದರ್ಬಾರ್’ ಸಿನಿಮಾ ಶುರುವಾದ ನಂತರ ಕೋವಿಡ್ ಹಚ್ಚಾಯಿತು, ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್ ಮುಗಿಸಿದ್ದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಈ ಚಿತ್ರದಲ್ಲಿ ಹಲವಾರು ಕಲಾ ಬಳಗ ಹಾಗೂ ರಂಗ ಕಲಾವಿದರ ತಂಡ ಇದೆʼʼಎಂದು ನಿರ್ಮಾಪಕ ಸತೀಶ್ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Manoj Bajpayee: ಹೊಸ ದಾಖಲೆ ಬರೆದ ಮನೋಜ್ ಬಾಜಪೇಯಿ ಸಿನಿಮಾ!
3.5 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮದ್ದೂರು ತಾಲೂಕಿನ ಮಾರದೇವನಹಳ್ಳಿ, ಚನ್ನಸಂದ್ರ, ಆತಗೂರು ತೈಲೂರು, ನಿಡಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಒಟಿಟಿ
Manoj Bajpayee: ಹೊಸ ದಾಖಲೆ ಬರೆದ ಮನೋಜ್ ಬಾಜಪೇಯಿ ಸಿನಿಮಾ!
ಹೊಸ ಸಿನಿಮಾ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ (Sirf Ek Bandaa Kaafi Hai) ಬಿಡುಗಡೆ ಆಗಿ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು: ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ನಿಂದ ಖ್ಯಾತಿ ಪಡೆದ ಮನೋಜ್ ಬಾಜಪೇಯಿ (Manoj Bajpayee) ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ. ಇದೀಗ ಮತ್ತೆ ನಟ ಸುದ್ದಿಯಲ್ಲಿದ್ದಾರೆ. ಹೊಸ ಸಿನಿಮಾ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ (Sirf Ek Bandaa Kaafi Hai) ಬಿಡುಗಡೆ ಆಗಿ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಟಿಟಿಯಲ್ಲಿ 200 ಮಿಲಿಯನ್ (20 ಕೋಟಿ) ನಿಮಿಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಾಣುವ ಮೂಲಕ ಈ ಸಿನಿಮಾ ದಾಖಲೆ ಬರೆದಿದೆ.
ಅಪೂರ್ವ್ ಸಿಂಗ್ ಕಾರ್ಕಿ ಅವರು ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿನೋದ್ ಭಾನುಶಾಲಿ ಅವರು ನಿರ್ಮಾಣ ಮಾಡಿದ್ದಾರೆ. ಅಂದ್ರಿಜಾ, ಸೂರ್ಯ ಮೋಹನ್, ನಿಖಿಲ್ ಪಾಂಡೆ, ಜೈಹಿಂದ್ ಕುಮಾರ್, ದುರ್ಗಾ ಶರ್ಮಾ ಮುಂತಾದವರು ಕೂಡ ಮನೋಜ್ ಬಾಜಪೇಯಿ ಜತೆ ನಟಿಸಿದ್ದಾರೆ.
ಏನಿದು ಕಥೆ
ದೇವ ಮಾನವ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಆಗುತ್ತದೆ. ಆಕೆಗೆ ನ್ಯಾಯ ಕೊಡಿಸಲು ಹೋರಾಡುವ ವಕೀಲನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ಬಾಜಪೇಯಿ ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಮನೋಜ್ ಬಾಜಪೇಯಿ, “ಒಂದೆರಡು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ನಂತರ ಚಿತ್ರತಂಡ, ಸುಪರ್ಣ್ ಎಸ್ ವರ್ಮ, ವಿನೋದ್ ಸೇರಿದಂತೆ ಹಲವಾರು ಜನರ ಕೊಡುಗೆ ಅದ್ಭುತವಾಗಿದೆ. ಭಾನುಶಾಲಿ, ನಿರ್ದೇಶಕ ಅಪೂರ್ವ್ ಸಿಂಗ್ ಕರ್ಕಿ ಮತ್ತು ನಟರಾದ ಸೂರ್ಯ ಮೋಹನ್ ಕುಲಶ್ರೇಷ್ಠ ಮತ್ತು ಅದ್ರಿಜಾ ಸಿನ್ಹಾ ಅವರಂತಹ ನಟರಿಂದ ಚಿತ್ರವು ಸಂಭ್ರಮಾಚರಣೆ ಮಾಡುತ್ತಿದೆ”ಎಂದರು.
ಇದನ್ನೂ ಓದಿ: Raghav Chadha : ಬಾಲಿವುಡ್‌ಗೂ ಎಂಟ್ರಿ ಕೊಡ್ತಾರಾ ಆಪ್ ಎಂಪಿ ರಾಘವ್ ಛಡ್ಡಾ? ಫೋಟೊ ವೈರಲ್
ನಿರ್ಮಾಪಕ ವಿನೋದ್ ಭಾನುಶಾಲಿ ಮಾತನಾಡಿ ʻʻಚಿತ್ರವು ಪಡೆದ ರೀತಿಯ ವೀಕ್ಷಣೆಗಳು, ವರ್ಷದ ದಾಖಲೆಗಳನ್ನು ಮುರಿಯಲಿದೆ. ಇಂದಿನ ಸಮಯದಲ್ಲಿ ನಮ್ಮ ಪ್ರೇಕ್ಷಕರು ಯಾವುದೇ ಭಾಷೆಯಲ್ಲಿದ್ದರೂ ಉತ್ತಮ ಕಥೆ ಇದ್ದರೆ ಆದ್ಯತೆ ನೀಡುತ್ತಾರೆʼʼಎಂದರು.
ಮನೋಜ್ ಬಾಜಪೇಯಿ ‘ಬ್ಯಾಂಡಿಟ್ ಕ್ವೀನ್’, ‘ಸತ್ಯ’, ‘ಪ್ರೇಮ ಕಥಾ’, ‘ದಿಲ್ ಪೇ ಮತ್ ಲೇ ಯಾರ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
ಬಾಲಿವುಡ್
Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್
ನಟಿ ಅಹಾನಾ ಕುಮ್ರಾ (Aahana Kumra) ಅವರು ದುಬೈನಲ್ಲಿ ಐಫಾ ಕಾರ್ಯಕ್ರಮದ ಗ್ರೀನ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ತೊಟ್ಟ ಉಡುಗೆಯಿಂದ ಇರಿಸುಮುರಿಸಾಗಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ದುಬೈ: ಬಾಲಿವುಡ್‌ನ ಹಲವು ಗಣ್ಯರು ಸದ್ಯ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ನಡೆಯುತ್ತಿರುವ ಐಫಾ 2023 (IIFA awards 2023) ಕಾರ್ಯಕ್ರಮದಲ್ಲಿದ್ದಾರೆ. ಅದರಂತೆ ನಟಿ ಅಹಾನಾ ಕುಮ್ರಾ (Aahana Kumra) ಕೂಡ ಇದೇ ಕಾರ್ಯಕ್ರಮದಲ್ಲಿದ್ದಾರೆ. ಈ ವೇಳೆ ನಟಿ ತೊಟ್ಟ ಉಡುಗೆ ಅವರಿಗೆ ಸರಿಯಾಗದೆ ಜಾರುತ್ತಿದ್ದು, ನಟಿ ಅದನ್ನು ಜಾರದಂತೆ ಹಲವು ಬಾರಿ ಹಿಡಿದುಕೊಂಡಿದ್ದು ಕಂಡುಬಂದಿದೆ.
ಹೌದು. ಐಫಾ ಕಾರ್ಯಕ್ರಮದ ಗ್ರೀನ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಅಹಾನಾ ಭಾಗಿಯಾಗಿದ್ದರು. ಅದರಲ್ಲಿ ಅವರು ಆಫ್ ಶೋಲ್ಡರ್ ಇರುವ ಕಪ್ಪು ಬಣ್ಣದ ಗೌನ್ ಅನ್ನು ತೊಟ್ಟಿದ್ದರು. ಅವರು ಮಾಧ್ಯಮದವರೆದುರು ಕ್ಯಾಮರಾಗಳಿಗೆ ಫೋಸ್ ಕೊಡುವಾಗ ಹಲವು ಬಾರಿ ಡ್ರೆಸ್ ಜಾರಿದೆ. ಹಾಗಾಗಿ ನಟಿ ಅದನ್ನು ಎಳೆದುಕೊಂಡು ಸರಿ ಮಾಡಿಕೊಂಡು ಫೋಸ್ ಕೊಟ್ಟಿದ್ದಾರೆ. ಈ ದೃಶ್ಯಗಳಿರುವ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Aahana s Kumra | ಸ್ಟೈಲಿಶ್ ಪರ್ಪಲ್ ಡ್ರೆಸ್‌ನಲ್ಲಿ ಮಿಂಚಿದ ಅಹಾನಾ ಕುಮ್ರಾ
ಅಂದ ಹಾಗೆ ನಟಿ ಕಳೆದ ವಾರ ಕಾರ್ಯಕ್ರಮದವೊಂದರಲ್ಲಿ ಭಾಗಿಯಾಗಿದ್ದಾ ಅಭಿಮಾನಿಯೊಬ್ಬರಿಗೆ ಸಿಟ್ಟಿನಿಂದ ಬೈದಿದ್ದರು. ನಟಿ ಜತೆ ಫೋಟೋ ತೆಗೆಸಿಕೊಳ್ಳಲೆಂದು ಬಂದ ಅಭಿಮಾನಿಯೊಬ್ಬರು ಆಕೆಯ ಸೊಂಟಕ್ಕೆ ಕೈ ಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ನಟಿ, “ನನ್ನನ್ನು ಮುಟ್ಟಬೇಡಿ” ಎಂದು ಜೋರಾಗಿಯೇ ಹೇಳಿದ್ದರು. ಆ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಕೆ, “ನಾವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಓಪನ್ ಆಗಿ ಇರುತ್ತೇವೆ ಎನ್ನುವ ಕಾರಣಕ್ಕೆ ನಮ್ಮೊಂದಿಗೆ ಏನು ಬೇಕಾದರೂ ಮಾಡಬಹುದು ಎಂದು ಕೆಲವರು ಅಂದುಕೊಂಡುಬಿಡುತ್ತಾರೆ. ಆದರೆ ಎಲ್ಲದಕ್ಕೂ ಗಡಿ ಇದ್ದೇ ಇರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಸುರಕ್ಷತೆ ಬಹುಮುಖ್ಯ. ಅದಕ್ಕಾಗಿ ಬೌನ್ಸರ್‌ಗಳನ್ನು ನೇಮಿಸಬೇಕು” ಎಂದು ಹೇಳಿದ್ದರು.
-
ಕರ್ನಾಟಕ15 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ18 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ15 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ13 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ9 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ16 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್18 hours ago
IPL 2023: ಶತಕ ಬಾರಿಸಿ ಸೆಹವಾಗ್ ದಾಖಲೆ ಮುರಿದ ಶುಭಮನ್ ಗಿಲ್
-
ಕರ್ನಾಟಕ13 hours ago
Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ