Site icon Vistara News

ಆಗಸ್ಟ್‌ 15ಕ್ಕೆ 3 ದಿನ ಮೊದಲು ಹಾರಲಿದೆ ʼಗಾಳಿಪಟ -2ʼ: ಗೋಲ್ಡನ್‌ ಸ್ಟಾರ್‌ ಯೋಗರಾಜ ಭಟ್‌ ಜೋಡಿ

ಬೆಂಗಳೂರು : ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕಾಂಬಿನೇಶನ್‌ನಲ್ಲಿ ಸಿದ್ಧವಾಗಿರುವ ಬಹು ನಿರೀಕ್ಷಿತ ʼಗಾಳಿಪಟ-2ʼ (Gaalipata -2) ಚಿತ್ರ ಆಗಸ್ಟ್‌ 12 ರಂದು ಬಿಡುಗಡೆಗೊಳ್ಳುತ್ತಿದೆ. ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ಹಿಂದೆ ಜೂನ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿತ್ತು.

ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ, ʼಗೆಟ್‌ ರೆಡಿ ಟು ಫ್ಲೇ ಆನ್‌ ಆಗಸ್ಟ್‌ 12. ಮಾರ್ಕ್‌ ದ ಡೇಟ್‌ ʼ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಯಾವಾಗಲೂ ತಮ್ಮ ಸಾಹಿತ್ಯದ ಮೂಲಕ ಹೆಚ್ಚು ಸದ್ದು ಮಾಡ್ತಾನೆ ಇರೋ ಯೋಗರಾಜ್‌ ಭಟ್‌ ಇತ್ತೀಚೆಗೆ ರಿಲೀಸ್‌ ಮಾಡಲಾಗಿದ್ದ ಎಕ್ಸಾಂ ಸಾಂಗ್‌ ಕೂಡ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಹಿಂದೆ ಗಾಳಿಪಟ 1 ಕೂಡ ಹಿಟ್‌ ಆಗಿತ್ತು. ಈಗ ಅದೇ ಜೋಡಿ ಮತ್ತೊಮ್ಮೆ ಗಾಳಿಪಟ 2 ಮಾಡ್ತಿರೋದು ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿದೆ. ಸೂರಜ್‌ ಪ್ರೊಡಕ್ಷನ್‌ ಅಡಿಯಲ್ಲಿ ಉಮಾ ಎಂ. ರಮೇಶ್‌ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಣವಿದ್ದು, ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಅನಂತ್‌ ನಾಗ್‌ ಚಿತ್ರದಲ್ಲಿ ಅಭಿನಯಿಸಿರುವುದು ಇನ್ನೂ ವಿಶೇಷ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ .

Exit mobile version