Site icon Vistara News

ಕೋಬ್ರಾ ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ? ಕೆಜಿಎಫ್‌ಗಿಂತ ಡಬಲ್‌!

ಚೆನ್ನೈ: ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಕೆಜಿಎಫ್‌. ನಟ ಯಶ್‌ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ಗೆ ಅದ್ಭುತ ಯಶಸ್ಸು ತಂದು ಕೊಟ್ಟ ಚಿತ್ರ ಇದು. ಜತೆಗೆ ನಾಯಕಿ ಶ್ರೀನಿಧಿ ಶೆಟ್ಟಿ ಅವರಿಗೆ ಚೊಚ್ಚಲ ಚಿತ್ರವಾದರೂ, ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟಿದೆ. ಹೀಗಾಗಿ ಅವರು ಭಾರತೀಯ ಚಿತ್ರರಂಗದಲ್ಲಿ ಸಖತ್‌ ಬ್ಯುಸಿ ನಟಿಯರಲ್ಲಿ ಶ್ರೀನಿಧಿ ಕೂಡ ಒಬ್ಬರು.

ಶ್ರೀನಿಧಿ ಪ್ರಸ್ತುತ ʻಕೋಬ್ರಾʼ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಜುಲೈ 11ರಂದು ಕೋಬ್ರಾ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ತಮಿಳು ಭಾಷೆಯಲ್ಲಿರುವ ಕೋಬ್ರಾ ಚಿತ್ರಕ್ಕಾಗಿ ಶ್ರೀನಿಧಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದ್ದರಿಂದ ಅವರು ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ

ಕೋಬ್ರಾ ಸಿನಿಮಾಗೆ ಶ್ರೀನಿಧಿ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು?

ಅಂದಹಾಗೆ ಶ್ರೀನಿಧಿ ಕೋಬ್ರಾ ಚಿತ್ರಕ್ಕಾಗಿ, ಕೆಜಿಎಫ್‌ಗಿಂತ್ ಎರಡು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ ಶ್ರೀನಿಧಿ ಶೆಟ್ಟಿ ಕೆಜಿಎಫ್ KGF-1 ಹಾಗೂ KGF-2ಗಾಗಿ 3 ಕೋಟಿ ಪಡೆದಿದ್ದರು. ಕೆಜಿಎಫ್ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಕೋಬ್ರಾ ಚಿತ್ರಕ್ಕಾಗಿ 6 ರಿಂದ 7 ಕೋಟಿಗಳ ಬೃಹತ್ ಮೊತ್ತವನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಅಜಯ್ ಜ್ಞಾನಮುತ್ತು ನಿರ್ದೇಶನದ ಕೋಬ್ರಾ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್‌ನ ಎಸ್‌ಎಸ್ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ.

ಕೋಬ್ರಾ ‌ಸಿನಿಮಾದಲ್ಲಿ, ನಾಯಕ ನಟರಾಗಿ ಚಿಯಾನ್ ವಿಕ್ರಮ್ ನಟಿಸಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಮಿಯಾ ಜಾರ್ಜ್ ಮತ್ತು ರೋಷನ್ ಮ್ಯಾಥ್ಯೂ ಮುಖ್ಯಪಾತ್ರಗಳಲ್ಲಿ ಕಾಣಿಸಲಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಹಾದಿಯಲ್ಲಿ ಕೆಜಿಎಫ್‌ ನಾಯಕಿ ಶ್ರೀನಿಧಿ ಶೆಟ್ಟಿ; ಸಂಭಾವನೆ ಮೊತ್ತದಲ್ಲಿ ಭರ್ಜರಿ ಏರಿಕೆ !

Exit mobile version