ಬೆಂಗಳೂರು, ಕರ್ನಾಟಕ: ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (hatrick hero shivaraj kumar) ಫ್ಯಾನ್ಸ್ ಖುಷ್ ಆಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಈ ಕಾಂಬೋ ಸ್ಕ್ರೀನ್ ಶೇರ್ ಮಾಡಿದ್ದು, ವಿಶ್ವದಾದ್ಯಂತ ಜೈಲರ್ (Jailer Movie) ಸಿನಿಮಾ ತೆರೆ ಕಂಡಿದೆ. ಕನ್ನಡ.. ಹಿಂದಿ.. ತಮಿಳು.. ತೆಲುಗು.. ಮಲಯಾಳಂ ಭಾಷೆಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿರುವ ಜೈಲರ್ ಮೊದಲ ದಿನವೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಸ್ಕ್ರೀನ್ ಆಗುತ್ತಿದೆ. ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೇನೆ ಶೋ ಶುರುವಾಗಲಿದೆ. ಕರ್ನಾಟಕದಲ್ಲಿ ಜೈಲರ್ 300 ಕ್ಕೂ ಹೆಚ್ಚು ಸ್ಕ್ರೀನ್ನಲ್ಲಿ ಪ್ರದರ್ಶನ ಕಾಣ್ತಿದ್ದು, ಮೊದಲ ದಿನವೇ 2500 ಸ್ಕ್ರೀನ್ನಲ್ಲಿ ಚಿತ್ರ ಪ್ರದರ್ಶನ ಆಗ್ತಿದೆ. ಸಿಂಗಲ್ ಥಿಯೇಟರ್ನಲ್ಲಿ 5 ರಿಂದ 6 ಶೋ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ 15 ರಿಂದ 20 ಶೋಗಳನ್ನ ಪ್ಲಾನ್ ಮಾಡಲಾಗಿದೆ.
ತಮಿಳುನಾಡಿನಲ್ಲಿ 6 ಗಂಟೆ ಶೋ ಇಲ್ಲ. ಎಂದಿನಂತೆ ಬೆಳಗ್ಗೆ 9 ಗಂಟೆಯ ಶೋ ಇರಲಿದೆ. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಜೈಲರ್ ನಲ್ಲಿ ಮಲೆಯಾಳಂನಿಂದ ಮೋಹನ್ ಲಾಲ್, ತೆಲುಗುದಿಂದ ಸುನಿಲ್, ಬಾಲಿವುಡ್ನಿಂದ ಜಾಕಿ ಶ್ರಾಫ್ ನಟಿಸಿದ್ದಾರೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜೈಲರ್ ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
ಅಡ್ವಾನ್ಸ್ ಬುಕ್ಕಿಂಗ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್‘ ಸಿನಿಮಾ (Jailer Movie) ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಜಯಣ್ಣ ಫಿಲ್ಮ್ಸ್ ಮೂಲಕ ಎವಿ ಮೀಡಿಯಾ ಕನ್ಸಲ್ಟೆನ್ಸಿ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಿದೆ.
4 ದಿನ ಮೊದಲೇ ಬೆಂಗಳೂರಿನಲ್ಲಿ ‘ಜೈಲರ್’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಈಗಾಗಲೇ 48 ತಮಿಳು ಹಾಗೂ 1 ಕನ್ನಡ ಶೋ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಶಿವಣ್ಣ ಚಿತ್ರದಲ್ಲಿ ನಟಿಸಿರುವುದರಿಂದ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಟ್ರೈಲರ್ ಆಗಸ್ಟ್ 2ರಂದು ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ರಜನಿಕಾಂತ್ ಎರಡು ಭಿನ್ನ ಅವತಾರಗಳನ್ನು ತೋರಿಸಲಾಗಿದೆ. ಆದರೆ ಟ್ರೈಲರ್ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಪತ್ತೆಯಾಗಿದ್ದಾರೆ.
ಚೆನ್ನೈನಲ್ಲಿ ಕಚೇರಿಗಳಿಗೆ ರಜೆ ಘೋಷಣೆ
ಹಬ್ಬಗಳಲ್ಲಿ, ಸರ್ಕಾರಿ ರಜಾ ದಿನಗಳಲ್ಲಿ ಕಚೇರಿಗಳಿಗೆ ರಜೆ ನೀಡುವುದು ಮಾಮೂಲಿ. ಇನ್ನು ಕೆಲವು ಸಂಸ್ಥೆಗಳು ತಮ್ಮ ಮಾಲೀಕರ ಜೀವನದ ವಿಶೇಷ ದಿನಗಳಂದು ಸಂಸ್ಥೆಯ ಸಿಬ್ಬಂದಿಗೆ ರಜೆಗಳನ್ನು ಘೋಷಿಸುತ್ತವೆ. ಆದರೆ ಇದೀಗ ವಿಶೇಷವೆನ್ನಿಸುವಂತೆ ಬೆಂಗಳೂರು ಮತ್ತು ಚೆನ್ನೈನ ಕೆಲವು ಕಂಪನಿಗಳು ಆಗಸ್ಟ್ 10ರಂದು ರಜೆ ಘೋಷಿಸಿವೆ! ಅದಕ್ಕೆ ಕಾರಣ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ ಜೈಲರ್(Jailer Movie) ಬಿಡುಗಡೆ!
ಈ ಸುದ್ದಿಯನ್ನೂ ಓದಿ: Jailer Movie: ತಮಿಳಿಗೆ 800ಕ್ಕೂ ಅಧಿಕ ಶೋ, ಕನ್ನಡಕ್ಕೆ ಕೇವಲ 4 ಶೋ! ʻಶಿವಣ್ಣʼ ನಾಯಕ ಆಗೋ ಲಕ್ಷಣವಿಲ್ಲ ಅಂದ್ರು ನೆಟ್ಟಿಗರು!
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ, ರಜನಿಕಾಂತ್ ನಟನೆಯ ಸಿನಿಮಾ ʼಜೈಲರ್ʼ ಇದೇ ಆಗಸ್ಟ್ 10ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನೋಡಲೆಂದು ರಜನಿಕಾಂತ್ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಕೆಲವು ಕಂಪನಿಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸಿವೆ. ” ಹೇಗೂ ಆ ದಿನದಂದು ಬಹುತೇಕ ಸಿಬ್ಬಂದಿ ಸುಮ್ಮನೆ ಕಾರಣ ಕೊಟ್ಟು ರಜೆ ಹಾಕುತ್ತಾರೆ. ಇದರಿಂದ ದೈನಂದಿನ ಕೆಲಸಕ್ಕೂ ತೊಂದರೆ. ಅದನ್ನು ತಪ್ಪಿಸಲೆಂದು ನಾವೇ ಸಿಬ್ಬಂದಿಗೆ ರಜೆ ಕೊಡುತ್ತಿದ್ದೇವೆ. ಜತೆಗೆ ಸಿಬ್ಬಂದಿಯೂ ಸಿನಿಮಾ ನೋಡಿ ಬಂದು ಉತ್ಸಾಹದಿಂದ ಕೆಲಸ ಮಾಡುತ್ತಾರೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ ಕಂಪನಿಗಳ ಮುಖ್ಯಸ್ಥರು.