ಬೆಂಗಳೂರು: ಖ್ಯಾತ ನಟ ರೋಬೋ ಶಂಕರ್ (Robo Shankar) ಪುತ್ರಿ ಇಂದ್ರಜಾ ಶಂಕರ್ (Indraja Shankar) ಅವರು ನಿರ್ದೇಶಕ ಕಾರ್ತಿಕ್ ಅವರನ್ನು ಮದುವೆಯಾಗಿದ್ದಾರೆ. ದಳಪತಿ ವಿಜಯ್ ಅಭಿನಯದ ʻಬಿಗಿಲ್ʼ ಸಿನಿಮಾದಲ್ಲಿ ʻಪಾಂಡಿಯಮ್ಮನʼ ಪಾತ್ರ (Bigil Actress Indraja) ನಿರ್ವಹಿಸಿದ್ದರು ಇಂದ್ರಜಾ ಶಂಕರ್. ಈ ಸಿನಿಮಾದಲ್ಲಿ ಕೋಚ್ ಪಾತ್ರದಲ್ಲಿ ವಿಜಯ್ ಮಿಂಚಿದ್ದರು. ಸಿನಿಮಾದಲ್ಲಿ ಪಾಂಡಿಯಮ್ಮನಿಗೆ ವಿಜಯ್ ಅವರು ಕಿಚಾಯಿಸುವ ದೃಶ್ಯ ಪ್ರೇಕ್ಷಕರಿಗೆ ಮಜ ನೀಡಿತ್ತು. ಆದರೀಗ ಪಾಂಡಿಯಮ್ಮನ ವಿವಾಹದ ಸಂಭ್ರಮದ ವಿಡಿಯೊ ವೈರಲ್ ಆಗಿದ್ದು, ಅವರ ಅಮ್ಮ ಪ್ರಿಯಾಂಕ ಶಂಕರ್ ತಮ್ಮ ಅಳಿಯನ ತುಟಿಗೆ ಕಿಸ್ ಕೊಟ್ಟಿದ್ದಾರೆ. ಇದೀಗ ಈ ವಿಡಿಯೊ ಭಾರಿ ಚರ್ಚೆಗೆ ಗುರಿಯಾಗಿದೆ.
ಯಾರು ಈ ಇಂದ್ರಜಾ?
ದಳಪತಿ ವಿಜಯ್ ಅವರ ʻಬಿಗಿಲ್ʼ ಸಿನಿಮಾ 2019ರ ಅಕ್ಟೋಬರ್ 25ರಂದು ಬಿಡುಗಡೆಯಾಯಿತು. ಮಹಿಳೆಯರ ಫುಟ್‌ಬಾಲ್‌ಗೆ ಕೋಚ್ ಆಗಿದ್ದರು ವಿಜಯ್. ಅದರಲ್ಲೂ ಪಾಂಡಿಯಮ್ಮನ ಪಾತ್ರ ಪ್ರಮುಖವಾಗಿತ್ತು. ಈ ಪಾತ್ರ ನಿಭಾಯಿಸಿದ್ದು ಇಂದ್ರಜಾ ಶಂಕರ್. ಇವರು ರೋಬೋ ಶಂಕರ್ ಅವರ ಮಗಳು. ಬಿಗಿಲ್ ಜತೆಗೆ ಅನೇಕ ಸಿನಮಾಗಳಲ್ಲಿಯೂ ನಟಿಸಿದ್ದರು ಇಂದ್ರಜಾ. ಇಂದ್ರಜಾ ಮಾರ್ಚ್ 24ರಂದು ನಿರ್ದೇಶಕ ಕಾರ್ತಿಕ್ ಜತೆ ಮದುವೆಯಾದರು. ಮದುವೆಗೆ ಅನೇಕ ಗಣ್ಯರು, ಸಲೆಬ್ರಿಟಿಗಳು ಭಾಗಿಯಾಗಿ ಶುಭಹಾರೈಸಿದ್ದಾರೆ. ಇನ್ನು ಅಳಿಯನಿಗೆ ಇಂದ್ರಜಾ ತಂದೆ ತಾಯಿ, 20 ಲಕ್ಷ ರೂ. ಮೌಲ್ಯದ ಕಾರು ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Tumkur News: ಕೇಂದ್ರ ಸರ್ಕಾರದಿಂದ ತಾರತಮ್ಯ ಧೋರಣೆ: ಪರಮೇಶ್ವರ್ ಆರೋಪ
ಅಳಿಯನಿಗೆ ಅತ್ತೆಯ ಲಿಪ್ ಕಿಸ್!
ಆದರೀಗ ಮದುವೆ ಸಂಭ್ರಮದ ವಿಡಿಯೊ ವೈರಲ್ ಆಗಿದ್ದು, ಅಳಿಯನಿಗೆ ಅತ್ತೆ ಲಿಪ್ ಕಿಸ್ ಕೊಟ್ಟಿದ್ದಾರೆ. ರೋಬೋ ಶಂಕರ್ ಪತ್ನಿ ಪ್ರಿಯಾಂಕ ಶಂಕರ್ ಅವರು ಅಳಿಯನ ತುಟಿಗೆ ಮುತ್ತು ಕೊಟ್ಟಿದ್ದಾರೆ. ಆರತಕ್ಷತೆಯ ಸಂದರ್ಭದ ವಿಡಿಯೊ ಇದಾಗಿದೆ. ಅಳಿಯನ ಜತೆ ಪ್ರಿಯಾಂಕ ಡ್ಯಾನ್ಸ್ ಮಾಡುತ್ತ ಅಳಿಯನ ತುಟಿಗೆ ಮುತ್ತು ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಾರೆ. ವೈರಲ್ ಆಗುತ್ತಿದ್ದಂತೆ ಅಳಿಯ ಕಾರ್ತಿಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻಅತ್ತೆ ನನಗೆ ಸಹೋದರಿಯ ಸಮಾನʼʼಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಂದೆ ರೋಬೋ ಶಂಕರ್ ಅವರಿಗೆ ಮಗಳು ಇಂದ್ರಜಾ ತುಟಿಗೆ ಮುತ್ತು ಕೊಟ್ಟಿರುವ ಬಗ್ಗೆಯೂ ವಿವಾದಕ್ಕೆ ಗುರಿಯಾಗಿದೆ.
ಕಾರ್ತಿಕ್ ಮತ್ತು ಇಂದ್ರಜಾ ಬಹಳ ದಿನಗಳಿಂದ ಪ್ರೀತಿಸಿ ಮದುವೆಯಾಗಿದ್ದಾರೆ. ಜೋಡಿಯ ಮಧ್ಯೆ 15 ವರ್ಷ ವಯಸ್ಸಿನ ಅಂತರವಿದೆ.