Bigil Actress Indraja: ʻಬಿಗಿಲ್‌ʼ ಖ್ಯಾತಿ ನಟಿಯ ಗಂಡನಿಗೆ ಅತ್ತೆಯಿಂದ ಲಿಪ್‌ ಕಿಸ್‌! ಫ್ಯಾನ್‌ಗಳು ಕನ್‌ಫ್ಯೂಸ್‌!! - Vistara News

ಕಾಲಿವುಡ್

Bigil Actress Indraja: ʻಬಿಗಿಲ್‌ʼ ಖ್ಯಾತಿ ನಟಿಯ ಗಂಡನಿಗೆ ಅತ್ತೆಯಿಂದ ಲಿಪ್‌ ಕಿಸ್‌! ಫ್ಯಾನ್‌ಗಳು ಕನ್‌ಫ್ಯೂಸ್‌!!

Bigil Actress Indraja: ʻ ದಳಪತಿ ವಿಜಯ್‌ ಅವರ ʻಬಿಗಿಲ್‌ʼ ಸಿನಿಮಾ 2019ರ ಅಕ್ಟೋಬರ್‌ 25ರಂದು ಬಿಡುಗಡೆಯಾಯಿತು. ಮಹಿಳೆಯರ ಫುಟ್‌ಬಾಲ್‌ಗೆ ಕೋಚ್‌ ಆಗಿದ್ದರು ವಿಜಯ್‌. ಅದರಲ್ಲೂ ಪಾಂಡಿಯಮ್ಮನ ಪಾತ್ರ ಪ್ರಮುಖವಾಗಿತ್ತು. ಈ ಪಾತ್ರ ನಿಭಾಯಿಸಿದ್ದು,ಇಂದ್ರಜಾ ಶಂಕರ್‌. ಇದೀಗ ಇಂದ್ರಜಾ ಶಂಕರ್‌ ತಾಯಿ ಪ್ರಿಯಾಂಕ ಶಂಕರ್‌ ಅಳಿಯನ ತುಟಿಗೆ ಕಿಸ್‌ ಕೊಟ್ಟಿದ್ದಾರೆ. ಇಂದ್ರಜಾ ತುಟಿಗೆ ಮುತ್ತು ಕೊಟ್ಟಿರುವ ಬಗ್ಗೆಯೂ ವಿವಾದಕ್ಕೆ ಗುರಿಯಾಗಿದೆ.

VISTARANEWS.COM


on

Bigil Actress Indraja mother kiss to daughter Husband
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖ್ಯಾತ ನಟ ರೋಬೋ ಶಂಕರ್ (Robo Shankar) ಪುತ್ರಿ ಇಂದ್ರಜಾ ಶಂಕರ್‌ (Indraja Shankar) ಅವರು ನಿರ್ದೇಶಕ ಕಾರ್ತಿಕ್‌ ಅವರನ್ನು ಮದುವೆಯಾಗಿದ್ದಾರೆ. ದಳಪತಿ ವಿಜಯ್‌ ಅಭಿನಯದ ʻಬಿಗಿಲ್‌ʼ ಸಿನಿಮಾದಲ್ಲಿ ʻಪಾಂಡಿಯಮ್ಮನʼ ಪಾತ್ರ (Bigil Actress Indraja) ನಿರ್ವಹಿಸಿದ್ದರು ಇಂದ್ರಜಾ ಶಂಕರ್‌. ಈ ಸಿನಿಮಾದಲ್ಲಿ ಕೋಚ್‌ ಪಾತ್ರದಲ್ಲಿ ವಿಜಯ್‌ ಮಿಂಚಿದ್ದರು. ಸಿನಿಮಾದಲ್ಲಿ ಪಾಂಡಿಯಮ್ಮನಿಗೆ ವಿಜಯ್‌ ಅವರು ಕಿಚಾಯಿಸುವ ದೃಶ್ಯ ಪ್ರೇಕ್ಷಕರಿಗೆ ಮಜ ನೀಡಿತ್ತು. ಆದರೀಗ ಪಾಂಡಿಯಮ್ಮನ ವಿವಾಹದ ಸಂಭ್ರಮದ ವಿಡಿಯೊ ವೈರಲ್‌ ಆಗಿದ್ದು, ಅವರ ಅಮ್ಮ ಪ್ರಿಯಾಂಕ ಶಂಕರ್‌ ತಮ್ಮ ಅಳಿಯನ ತುಟಿಗೆ ಕಿಸ್‌ ಕೊಟ್ಟಿದ್ದಾರೆ. ಇದೀಗ ಈ ವಿಡಿಯೊ ಭಾರಿ ಚರ್ಚೆಗೆ ಗುರಿಯಾಗಿದೆ.

ಯಾರು ಈ ಇಂದ್ರಜಾ?

ದಳಪತಿ ವಿಜಯ್‌ ಅವರ ʻಬಿಗಿಲ್‌ʼ ಸಿನಿಮಾ 2019ರ ಅಕ್ಟೋಬರ್‌ 25ರಂದು ಬಿಡುಗಡೆಯಾಯಿತು. ಮಹಿಳೆಯರ ಫುಟ್‌ಬಾಲ್‌ಗೆ ಕೋಚ್‌ ಆಗಿದ್ದರು ವಿಜಯ್‌. ಅದರಲ್ಲೂ ಪಾಂಡಿಯಮ್ಮನ ಪಾತ್ರ ಪ್ರಮುಖವಾಗಿತ್ತು. ಈ ಪಾತ್ರ ನಿಭಾಯಿಸಿದ್ದು ಇಂದ್ರಜಾ ಶಂಕರ್‌. ಇವರು ರೋಬೋ ಶಂಕರ್‌ ಅವರ ಮಗಳು. ಬಿಗಿಲ್‌ ಜತೆಗೆ ಅನೇಕ ಸಿನಮಾಗಳಲ್ಲಿಯೂ ನಟಿಸಿದ್ದರು ಇಂದ್ರಜಾ. ಇಂದ್ರಜಾ ಮಾರ್ಚ್‌ 24ರಂದು ನಿರ್ದೇಶಕ ಕಾರ್ತಿಕ್‌ ಜತೆ ಮದುವೆಯಾದರು. ಮದುವೆಗೆ ಅನೇಕ ಗಣ್ಯರು, ಸಲೆಬ್ರಿಟಿಗಳು ಭಾಗಿಯಾಗಿ ಶುಭಹಾರೈಸಿದ್ದಾರೆ. ಇನ್ನು ಅಳಿಯನಿಗೆ ಇಂದ್ರಜಾ ತಂದೆ ತಾಯಿ, 20 ಲಕ್ಷ ರೂ. ಮೌಲ್ಯದ ಕಾರು ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Tumkur News: ಕೇಂದ್ರ ಸರ್ಕಾರದಿಂದ ತಾರತಮ್ಯ ಧೋರಣೆ: ಪರಮೇಶ್ವರ್ ಆರೋಪ

ಅಳಿಯನಿಗೆ ಅತ್ತೆಯ ಲಿಪ್‌ ಕಿಸ್‌!

ಆದರೀಗ ಮದುವೆ ಸಂಭ್ರಮದ ವಿಡಿಯೊ ವೈರಲ್‌ ಆಗಿದ್ದು, ಅಳಿಯನಿಗೆ ಅತ್ತೆ ಲಿಪ್‌ ಕಿಸ್‌ ಕೊಟ್ಟಿದ್ದಾರೆ. ರೋಬೋ ಶಂಕರ್‌ ಪತ್ನಿ ಪ್ರಿಯಾಂಕ ಶಂಕರ್‌ ಅವರು ಅಳಿಯನ ತುಟಿಗೆ ಮುತ್ತು ಕೊಟ್ಟಿದ್ದಾರೆ. ಆರತಕ್ಷತೆಯ ಸಂದರ್ಭದ ವಿಡಿಯೊ ಇದಾಗಿದೆ. ಅಳಿಯನ ಜತೆ ಪ್ರಿಯಾಂಕ ಡ್ಯಾನ್ಸ್‌ ಮಾಡುತ್ತ ಅಳಿಯನ ತುಟಿಗೆ ಮುತ್ತು ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದಾರೆ. ವೈರಲ್‌ ಆಗುತ್ತಿದ್ದಂತೆ ಅಳಿಯ ಕಾರ್ತಿಕ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ ʻʻಅತ್ತೆ ನನಗೆ ಸಹೋದರಿಯ ಸಮಾನʼʼಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಂದೆ ರೋಬೋ ಶಂಕರ್‌ ಅವರಿಗೆ ಮಗಳು ಇಂದ್ರಜಾ ತುಟಿಗೆ ಮುತ್ತು ಕೊಟ್ಟಿರುವ ಬಗ್ಗೆಯೂ ವಿವಾದಕ್ಕೆ ಗುರಿಯಾಗಿದೆ.

ಕಾರ್ತಿಕ್‌ ಮತ್ತು ಇಂದ್ರಜಾ ಬಹಳ ದಿನಗಳಿಂದ ಪ್ರೀತಿಸಿ ಮದುವೆಯಾಗಿದ್ದಾರೆ. ಜೋಡಿಯ ಮಧ್ಯೆ 15 ವರ್ಷ ವಯಸ್ಸಿನ ಅಂತರವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಒಟಿಟಿ

Movie Release: ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು; ಟ್ರೈಲರ್‌ಗಳನ್ನು ಇಲ್ಲಿ ನೋಡಿ

Movie Release: ಹಾಸ್ಯದಿಂದ ಥ್ರಿಲ್ಲರ್‌ಗಳವರೆಗೆ, ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳು, ಸರಣಿಗಳು ಒಟಿಟಿಗೆ ಕಾಲಿಟ್ಟಿದ್ದು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Movie Release
Koo

ಈ ಬಾರಿ ವಿಭಿನ್ನ ಪ್ರಕಾರದ ಚಲನಚಿತ್ರಗಳು (Movie Release) ಒಟಿಟಿಯಲ್ಲಿ (OTT) ಬಿಡುಗಡೆಗೆ ಸಿದ್ಧವಾಗಿದೆ. ಹಾಸ್ಯದಿಂದ (Comedy) ಆಕ್ಷನ್ (Action), ಥ್ರಿಲ್ಲರ್‌ಗಳವರೆಗೆ ( Thriller), ರೋಮ್ಯಾಂಟಿಕ್‌ನಿಂದ ಅಪರಾಧ ಸರಣಿಗಳವರೆಗೆ ಹೀಗೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಚಿತ್ರಗಳನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಹೆಚ್ಚು ಇಷ್ಟಪಡುವ ಕೆಲವು ಹೊಸ ಚಲನಚಿತ್ರಗಳು ಮತ್ತು ಸರಣಿಗಳು ಈ ವಾರ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ.

ಫಿಯಾಸ್ಕೋ

ಇಗೊರ್ ಗೋಟ್ಸ್‌ಮನ್ ಬರೆದು ನಿರ್ದೇಶಿಸಿರುವ ಫ್ರೆಂಚ್ ಹಾಸ್ಯ ಸರಣಿ ಫಿಯಾಸ್ಕೋ. ಇದರಲ್ಲಿ ನೈನಿ, ಫ್ರಾಂಕೋಯಿಸ್ ಸಿವಿಲ್, ಗೋಟ್ಸ್‌ಮನ್, ಜೆರಾಲ್ಡಿನ್ ನಕಾಚೆ, ಲೂಯಿಸ್ ಕೋಲ್ಡೆಫಿ, ಲೆಸ್ಲಿ ಮೆಡಿನಾ, ಪಾಸ್ಕಲ್ ಡೆಮೊಲನ್, ಜೂಲಿಯೆಟ್ ಗ್ಯಾಸ್ಕೆಟ್, ಡಿಜಿಮೊ, ಮೇರಿ-ಕ್ರಿಸ್ಟಿನ್ ಬರಾಲ್ಟ್ ಮತ್ತು ವಿನ್ಸೆಂಟ್ ಕ್ಯಾಸೆಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


2024ರ ಏಪ್ರಿಲ್ 8ರಂದು ಕ್ಯಾನೆಸರೀಸ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿರುವ ಫಿಯಾಸ್ಕೋ ಸರಣಿಯು ಅಜ್ಜಿಗೆ ಗೌರವ ಸಲ್ಲಿಸಲು ರಾಫೆಲ್ ವಾಲಾಂಡೆ ಅವರ ನಿರ್ದೇಶಿಸುವ ಚೊಚ್ಚಲ ಸಿನಿಮಾದ ಸುತ್ತ ಸುತ್ತುತ್ತದೆ. ತಂಡದ ಸದಸ್ಯರು ಚಲನಚಿತ್ರವನ್ನು ಹಾಳುಮಾಡಲು ಪ್ರಯತ್ನಿಸಿದಾಗ ಅದು ದುಃಸ್ವಪ್ನವಾಗುತ್ತದೆ. ನೆಟ್‌ಫ್ಲಿಕ್ಸ್ ಈ ಸರಣಿಯು ಏಪ್ರಿಲ್ 30ರಿಂದ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ: Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!


ಅಕಾಪುಲ್ಕೊ ಸೀಸನ್ 3

ಅಮೆರಿಕನ್ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಯ ಹಾಸ್ಯ ಸರಣಿ ಅಕಾಪುಲ್ಕೊದ ಮೂರನೇ ಸರಣಿ ಒಟಿಟಿ ಪ್ಲಾಟ್‌ಫಾರ್ಮ್ ಮೇಲೆ ಬರಲು ಸಜ್ಜಾಗಿದೆ. ಇದನ್ನು ಆಸ್ಟಿನ್ ವಿನ್ಸ್‌ಬರ್ಗ್, ಎಡ್ವರ್ಡೊ ಸಿಸ್ನೆರೋಸ್ ಮತ್ತು ಜೇಸನ್ ಶುಮನ್ ರಚಿಸಿದ್ದಾರೆ. ಈ ಸರಣಿಯು ಹೌ ಟು ಬಿ ಎ ಲ್ಯಾಟಿನ್ ಲವರ್ (2017) ನಿಂದ ಸ್ಫೂರ್ತಿ ಪಡೆದಿದೆ. ಇದರ ಮೊದಲ ಸೀಸನ್ 2021ರ ಅಕ್ಟೋಬರ್ 8ರಂದು ಬಿಡುಗಡೆಯಾಗಿತ್ತು. ಅನಂತರ ಎರಡನೇ ಸೀಸನ್ 2022ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಯಿತು. ಈಗ ಮೂರನೇ ಸೀಸನ್ ಬಿಡುಗಡೆಗೆ ಸಿದ್ಧವಾಗಿದೆ. Apple TV+ ನಲ್ಲಿ ಈ ಸರಣಿ ಮೇ 1ರಿಂದ ಪ್ರದರ್ಶನ ಕಾಣಲಿದೆ.


T・P ಬಾನ್

T・P BON ಎಂಬುದು ಬಾನ್ ಮೇಲೆ ಕೇಂದ್ರೀಕರಿಸುವ ನಾಮಸೂಚಕ ಮಂಗಾದ ಅನಿಮೆ ರೂಪಾಂತರ. ಬಾನ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು, ಟೈಮ್ ಪ್ಯಾಟ್ರೋಲ್ ಎಂದು ಕರೆಯಲ್ಪಡುವ ಟೈಮ್-ಟ್ರಾವೆಲಿಂಗ್ ಸ್ಕ್ವಾಡ್‌ನ ಸದಸ್ಯರಾಗಿದ್ದಾರೆ. ಪ್ರಪಂಚದಾದ್ಯಂತದ ವಿವಿಧ ಸಮಯ ಮತ್ತು ಸ್ಥಳಗಳ ಮೂಲಕ ಜನರನ್ನು ಪ್ರಮುಖ ಐತಿಹಾಸಿಕ ಕ್ಷಣಗಳಿಂದ ರಕ್ಷಿಸುವ ಮೂಲಕ ಇದು ನೋಡಲು ಆಹ್ಲಾದಕರವಾದ ಆದರೆ ಪ್ರಮುಖವಾದ ಮಿಷನ್ ಅನ್ನು ನಿರೂಪಿಸುತ್ತದೆ. ಬಾನ್ ಮತ್ತು ಅವನ ಸಂಗಡಿಗರು ಸಮಯ ಪ್ರಯಾಣದ ಜಟಿಲತೆಗಳನ್ನು ಪರಿಶೀಲಿಸಿದಾಗ ಅವರು ತಮ್ಮ ನಿರ್ಣಯವನ್ನು ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಇತಿಹಾಸದ ಬಗ್ಗೆ ಅವರ ಒಳನೋಟವನ್ನು ಆಳವಾಗಿಸುತ್ತಾರೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಸರಣಿ ಮೇ 2ರಿಂದ ತೆರೆ ಕಾಣಲಿದೆ.


ದಿ ಐಡಿಯಾ ಆಫ್ ಯು

2024ರ ಅಮೇರಿಕನ್ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ದಿ ಐಡಿಯಾ ಆಫ್ ಯು. ಇದನ್ನು ಮೈಕೆಲ್ ಶೋಲ್ಟರ್ ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ಜೆನ್ನಿಫರ್ ವೆಸ್ಟ್‌ಫೆಲ್ಡ್ ಜೊತೆ ಸಹ-ಬರೆದಿದ್ದಾರೆ ಮತ್ತು ಚಲನಚಿತ್ರವು ರಾಬಿನ್ನೆ ಲೀ ಅವರ ಅದೇ ಹೆಸರನ್ನು ಆಧರಿಸಿದೆ. ಇದು ಅನ್ನಿ ಹ್ಯಾಥ್‌ವೇ ಮತ್ತು ನಿಕೋಲಸ್ ಗ್ಯಾಲಿಟ್‌ಜಿನ್ ಒಬ್ಬ ತಾಯಿ ಮತ್ತು ಜನಪ್ರಿಯ ಬಾಯ್ ಬ್ಯಾಂಡ್‌ನ ಪ್ರಮುಖ ಗಾಯಕ ಮತ್ತು ಪ್ರಮುಖ ಗಾಯಕ ನಡುವಿನ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಪ್ರಧಾನ ವಿಡಿಯೋ ನಲ್ಲಿ ಮಾರ್ಚ್ 16ರಿಂದ ಚಿತ್ರ ತೆರೆ ಕಾಣುತ್ತಿದೆ.


ಶೈತಾನ್

ಶೈತಾನ್ 2024ರ ಭಾರತೀಯ ಹಿಂದಿ ಭಾಷೆಯ ಅಲೌಕಿಕ ಹಾರರ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ ದೇವಗನ್ ಫಿಲ್ಮ್ಸ್, ಪನೋರಮಾ ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಆರ್. ಮಾಧವನ್, ಜ್ಯೋತಿಕಾ, ಅಂಗದ್ ರಾಜ್ ಮತ್ತು ಜಾಂಕಿ ಬೋಡಿವಾಲಾ ನಟಿಸಿದ್ದಾರೆ. ತಮ್ಮ ಹಿರಿಯ ಮಗಳು ಮಾಟಮಂತ್ರದ ಮಾಟಕ್ಕೆ ಸಿಲುಕಿದಾಗ ಅವರ ಜೀವನವು ಅಸ್ತವ್ಯಸ್ತವಾಗಿರುವ ಕುಟುಂಬದ ಸುತ್ತ ಚಲನಚಿತ್ರವು ಸುತ್ತುತ್ತದೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಚಿತ್ರ ಮೇ 3ರಿಂದ ತೆರೆ ಕಾಣಲಿದೆ.


ಟಿಲ್ಲು 2

ಟಿಲ್ಲು ಸ್ಕ್ವೇರ್ ಭಾರತೀಯ ತೆಲುಗು ಭಾಷೆಯ ರೋಮ್ಯಾಂಟಿಕ್ ಕ್ರೈಮ್ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗ ವಂಶಿ ನಿರ್ಮಿಸಿದ್ದಾರೆ. 2022 ರ ಡಿ.ಜೆ. ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿದ್ದು, ಸಿದ್ದು ಜೊನ್ನಲಗಡ್ಡ ಅವರು ಹಿಂದಿನ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರೆ, ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಚ್ 26ರಿಂದ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.


ಭೀಮಾ

ಆಕ್ಸನ್ ಚಿತ್ರವಾಗಿರುವ ಭೀಮಾದಲ್ಲಿ ಗೋಪಿಚಂದ್ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ, ಭವಾನಿ ಶಂಕರ್, ಮಾಳವಿಕಾ ಶರ್ಮ ಸೇರಿದಂತೆ ಹಲವು ಪ್ರಮುಖರು ಚಿತ್ರದಲ್ಲಿ ಕಂಡಿಸಿಕೊಂಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರವನ್ನು ಕೆ.ಕೆ. ರಾಧಾಮೋಹನ್ ನಿರ್ಮಿಸಿದ್ದಾರೆ. 28 ಕೋಟಿ ಬಜೆಟ್‌ನ ಈ ಚಿತ್ರ ಹಾಟ್ ಸ್ಟಾರ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿದೆ.


ಕುಂಗ್ ಫು ಪಂಡಾ 4

ಅಮೆರಿಕನ್ ಅನಿಮೇಷನ್ ಚಿತ್ರ ಕುಂಗ್ ಫು ಪಂಡಾ 4 ಅನ್ನು ಡ್ರೀಮ್ ವರ್ಕ್ ಅನಿಮೇಷನ್ ನಿರ್ದೇಶಿಸಿದೆ. ಜೇಮ್ಸ್ ಹಾಂಗ್, ಬ್ರಯಾನ್ ಕ್ರೇನ್ಸ್ಟೋನ್, ಡುಸ್ಟಿನ್ ಹಾಫ್ಮ್ಯಾನ್, ಜೇಮ್ಸ್ ಹೊಂಗ್ ಸೇರಿದಂತೆ ಹಲವು ಪಾತ್ರಗಳು ಹಿಂದಿನ ಸರಣಿಯಂತೆ ಈ ಬಾರಿಯ ಸರಣಿಯಲ್ಲೂ ಕಾಣಿಸಿಕೊಳ್ಳಲಿದೆ. ಇದು ಬುಕ್ ಮೈ ಶೋ ನಲ್ಲಿ ಮಾರ್ಚ್ 26 ರಿಂದ ತೆರೆ ಕಾಣಲಿದೆ.


ದಿ ಫಿಲಂ ಸ್ಟಾರ್

ಅಮೆಜಾನ್ ಪ್ರೈಮ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ವಿಜಯ್ ದೇವರಕೊಂಡ ಅಭಿನಯದ ಕೌಟುಂಬಿಕ ಪ್ರಧಾನ ಚಿತ್ರ ದಿ ಫಿಲಂ ಸ್ಟಾರ್. ಉತ್ತಮ ಜೀವನ ನಿರ್ವಹಣೆಗಾಗಿ ಮಾಡುವ ಸಾಹಸ ಚಿತ್ರದ ಮುಖ್ಯ ಕಥೆಯಾಗಿದೆ.


ಡೆಡ್ ಬಾಡಿ ಡಿಟೆಕ್ಟಿವ್

ನೆಟ್ ಫ್ಲಿಕ್ಸ್ ನಲ್ಲಿ ಮಾರ್ಚ್ 26ರಿಂದ ತೆರೆ ಕಾಣಲಿರುವ ಈ ಸರಣಿ ಸ್ಟೀವ್ ಯೊಕೆಯ್ ನಿರ್ದೇಶಿಸಿದ್ದಾರೆ. ಕ್ರೈಮ್ ನ ಕಾರಣಗಳನ್ನು ಹುಡುಕಿ ಕುತೂಹಲ ವಿಚಾರಗಳನ್ನು ವಿಶೇಷ ರೀತಿಯಲ್ಲಿ ತೆರೆದಿಡುವ ಸರಣಿ ಇದಾಗಿದೆ.

Continue Reading

ಕಾಲಿವುಡ್

Vettaiyan Movie: ರಜನಿಕಾಂತ್ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್; ಲೀಕ್‌ ಆಯ್ತು ಫೋಟೊ!

Vettaiyan Movie: ಅನಿರುದ್ಧ್ ರವಿಚಂದರ್ ಅವರು 2015 ರ ಚಿತ್ರ ʻಮಾರಿʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧನುಷ್ ನಾಯಕನಾಗಿ ನಟಿಸಿರುವ ಸಿನಿಮಾ ಇದು. ಅದಲ್ಲದೇ . ಅನಿರುದ್ಧ್ ರವಿಚಂದರ್ ಅವರ ಹಾಡುಗಳ ಪ್ರಚಾರದ ಲಿರಿಕಲ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಜನಿಕಾಂತ್ ಅವರ ಮುಂಬರುವ ಚಿತ್ರ ʻವೆಟ್ಟೈಯಾನ್‌ʼನಲ್ಲಿ ಕಂಡಿದ್ದಾರೆ ಅನಿರುದ್ಧ್‌.

VISTARANEWS.COM


on

Vettaiyan Movie Anirudh Ravichander to make a special appearance in Rajinikanth
Koo

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾ ʼವೆಟ್ಟೈಯಾನ್ʼ (Vettaiyan Movie) ಟೈಟಲ್ ಟೀಸರ್ ಮೂಲಕವೇ ಕುತೂಹಲ ಹೆಚ್ಚಿಸಿತ್ತು. ತಮಿಳು ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಎಸ್. ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ʻತಲೈವಾʼ ಹಾಗೂ ʻಬಿಗ್ ಬಿʼ ಸಂಗಮ. ಇದೀಗ ಅನಿರುದ್ಧ್ ರವಿಚಂದರ್ (Anirudh Ravichander) ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅನಿರುದ್ಧ್ ರವಿಚಂದರ್ ನಟನೆ ಮಾಡಿರುವ ಪೋಟೊವೊಂದು ಲೀಕ್‌ ಆಗಿದೆ. ಹೀಗಾಗಿ ಅನಿರುದ್ಧ್ ರವಿಚಂದರ್ ನಟಿಸಿರೋದು ಪಕ್ಕಾ ಎನ್ನುತ್ತಿದೆ ಮೂಲ.

ಅನಿರುದ್ಧ್ ರವಿಚಂದರ್ ಅವರು 2015ರ ಚಿತ್ರ ʻಮಾರಿʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧನುಷ್ ನಾಯಕನಾಗಿ ನಟಿಸಿರುವ ಸಿನಿಮಾ ಇದು. ಅದಲ್ಲದೇ . ಅನಿರುದ್ಧ್ ರವಿಚಂದರ್ ಅವರ ಹಾಡುಗಳ ಪ್ರಚಾರದ ಲಿರಿಕಲ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಜನಿಕಾಂತ್ ಅವರ ಮುಂಬರುವ ಚಿತ್ರ ʻವೆಟ್ಟೈಯಾನ್‌ʼನಲ್ಲಿ ಕಂಡಿದ್ದಾರೆ ಅನಿರುದ್ಧ್‌.

ಇದನ್ನೂ ಓದಿ: Vettaiyan Movie: ಬಾಕ್ಸಾಫೀಸ್ ಬೇಟೆಗೆ ತಲೈವಾ ರೆಡಿ; ರಜನಿಯ ‘ವೆಟ್ಟೈಯಾನ್’ ಬಿಡುಗಡೆಗೆ ಮುಹೂರ್ತ ಫಿಕ್ಸ್!

ರಜನಿ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ದುಷಾರ ವಿಜಯನ್, ರಿತಿಕಾ ಸಿಂಗ್ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ.

ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ʼವೆಟ್ಟೈಯಾನ್ʼ ಸಿನಿಮಾ ನಿರ್ಮಿಸುತ್ತಿದೆ.

Continue Reading

ಕಾಲಿವುಡ್

Varalaxmi Sarathkumar: ನನ್ನ ತಂದೆ ಎರಡು ಮದುವೆಯಾದರು, ಹಾಗೇ ನಾನೂ ಕೂಡ ಎಂದ ನಟ ಶರತ್‌ಕುಮಾರ್ ಪುತ್ರಿ!

Varalaxmi Sarathkumar: ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ತಾವು ಮದುವೆಯಾಗುತ್ತಿರುವ ಹುಡಗನ ಬಗ್ಗೆ ನೆಗೆಟಿವ್‌ ಕಮೆಂಟ್‌ ಮಾಡುವರ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

VISTARANEWS.COM


on

Varalaxmi Sarathkumar negative comments on fiance
Koo

ಬೆಂಗಳೂರು: ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ತಾವು ಮದುವೆಯಾಗುತ್ತಿರುವ ಹುಡಗನ ಬಗ್ಗೆ ನೆಗೆಟಿವ್‌ ಕಮೆಂಟ್‌ ಮಾಡುವರ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಿಖೋಲಯ್ ಸಚ್‌ದೇವ್ (Nicholai Sachdev) ಜತೆ ನಿಶ್ಚಿತಾರ್ಥವಾದ ಬಳಿಕ ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಟೀಕೆಗೆ ಗುರಿಯಾದರು. ಈ ಬಗ್ಗೆ ನಟಿ ಮಾತನಾಡಿ ʻʻನನ್ನ ತಂದೆ ಕೂಡ ಎರಡು ಬಾರಿ ಮದುವೆಯಾದರು. ಆದರೆ ಆಮೇಲೆ ಅವರು ಸಂತೋಷವಾಗಿಯೇ ಇದ್ದಾರೆ. ಎರಡು ಮದುವೆಯಾಗುವುದರಲ್ಲಿ ಏನೂ ತಪ್ಪಿಲ್ಲ. ಜನರು ನಿಖೋಲಯ್ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ನಿನಿಖೋಲಯ್ ನನ್ನ ದೃಷ್ಟಿಯಲ್ಲಿ ಸುಂದರವಾಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್‌ ಕಮೆಂಟ್ ಮಾಡುವ ಜನರ ಬಗ್ಗೆ ನಾನು ಹೆದರುವುದಿಲ್ಲ. ನಾನು ಅವರಿಗೆಲ್ಲ ಏಕೆ ಉತ್ತರಿಸಬೇಕು?. ನಿಖೋಲಯ್ ಅವರ ಪೋಷಕರು ಆರ್ಟ್ ಗ್ಯಾಲರಿಯನ್ನು ನಡೆಸುತ್ತಾರೆ. ನಿಖೋಲಯ್ ಮಾಜಿ ಪತ್ನಿಯೊಂದಿಗೆ ನಾನು ಚೆನ್ನಾಗಿಯೇ ಇದ್ದೇನೆ. ಅವರದ್ದು ಅದ್ಭುತ ವ್ಯಕ್ತಿತ್ವ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Varalaxmi Sarathkumar:‌ ನಟ ಶರತ್‌ಕುಮಾರ್ ಪುತ್ರಿಯನ್ನು ಭೇಟಿಯಾದ ಕಿಚ್ಚ ಸುದೀಪ್!

ನಟಿ ಮಾತು ಮುಂದುವರಿಸಿ ʻʻನಿಖೋಲಯ್ ನನ್ನನ್ನು ಯಾವಾಗಲೂ ಖುಷಿಯಲ್ಲಿ ಇರಿಸುತ್ತಾರೆ. ನನ್ನ ವೃತ್ತಿಜೀವನವನ್ನು ಬೆಂಬಲಿಸುತ್ತಾರೆ. ನನ್ನನ್ನು ತುಂಬಾ ಪ್ರೀತಿಸುತ್ತಾರೆ, ಮುದ್ದು ಮಾಡುತ್ತಾರೆ ಮತ್ತು ನನ್ನನ್ನು ರಕ್ಷಿಸುತ್ತಾರೆ. 14 ವರ್ಷಗಳ ಹಿಂದೆ ಒಬ್ಬರೂ ಭೇಟಿಯಾದೆವು. ಆದರೆ ನಾವು ಆಗ ಡೇಟಿಂಗ್ ಮಾಡಿರಲಿಲ್ಲ. ನಾವು ಸ್ನೇಹಿತರಂತೆ ಇದ್ದೇವುʼʼಎಂದು ಹೇಳಿಕೊಂಡಿದ್ದಾರೆ.

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ನಟ ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದರು.

ನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ಕಾಲಿವುಡ್

Shruti Haasan: ಎರಡನೇ ಬಾಯ್‌ಫ್ರೆಂಡ್‌ ನಿಂದಲೂ ಕಮಲ್‌ ಹಾಸನ್‌ ಪುತ್ರಿ ಬ್ರೇಕಪ್?

Shruti Haasan: ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

VISTARANEWS.COM


on

Shruti Haasan and boyfriend santanu hazarika break up
Koo

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಮಲ್‌ ಹಾಸನ್‌ (Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್‌ (Shruti Haasan) ಪ್ರಿಯತಮ ಶಂತನು ಹಜಾರಿಕಾ (santanu hazarika) ಜತೆ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿ ಇರುವುದು ಗೊತ್ತೇ ಇದೆ. ಇದೀಗ ಜೋಡಿ ಬ್ರೇಕಪ್‌ ಮಾಡಿಕೊಂಡಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಪೂರಕ ಎಂಬಂತೆ ನಟಿ ಪ್ರಿಯತಮ ಶಂತನು ಹಜಾರಿಕಾ ಅವರ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಇನ್‌ಸ್ಟಾ ಅನ್‌ಫಾಲೋ ಮಾಡಿದ್ದಾರೆ.

ಮೂಲಗಳ ಪ್ರಕಾರ ನಟಿ ಸ್ವಲ್ಪ ಸಮಯದವರೆಗೆ ಇನ್ಸ್ಟಾಗ್ರಾಮ್ ಖಾತೆಯನ್ನು ಡಿ ಆಕ್ಟಿವೇಟ್‌ ಮಾಡಿದ್ದರು. ಬಳಿಕ ಇನ್‌ಸ್ಟಾದಲ್ಲಿ ಶಂತನು ಹಜಾರಿಕಾ ಜತೆ ಇದ್ದ ಫೋಟೊಗಳನ್ನು ಡಿಲಿಟ್‌ ಮಾಡಿದ್ದಾರೆ. ಜತೆಗೆ ಅನ್‌ಫಾಲೋ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಒಟ್ಟಿಗೆ ಇಲ್ಲ ಎಂದು ವರದಿಯಾಗಿದೆ. ಈ ಮುಂಚೆ ಒಂದೇ ಮನೆಯಲ್ಲಿ ಇಬ್ಬರೂ ಇದ್ದಿದ್ದರು. ನಟಿ ತನ್ನ ವೈಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬ್ರೇಕಪ್‌ ಬಗ್ಗೆ ನಟಿ ಶೀರ್ಘದಲ್ಲೇ ಅಧಿಕೃತವಾಗಿ ಹೇಳಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದನ್ನೂ ಓದಿ: Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ.

ನನ್ನ ಬಾಯ್‌ಫ್ರೆಂಡ್‌ನ ಹೂಸು ಕೂಡ ನಂಗಿಷ್ಟ ಎಂದಿದ್ದ ಕಮಲ್‌ ಹಾಸನ್‌ ಪುತ್ರಿ

ನಟಿ ಶ್ರುತಿ ಹಾಸನ್ ಆಗಾಗ ಅವಾಂತರಗಳನ್ನು ಮಾಡುತ್ತಲೇ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಲೇ ಇರುತ್ತಾರೆ. ಶ್ರುತಿ ಹಾಸನ್‌ ನಗುವಿನೊಂದಿಗೆ ಶಾಂತನು ಹಜಾರಿಕಾನ ಕಣ್ಣು ಅಷ್ಟೇ ಅಲ್ಲ, ಮತ್ತು ಆತ ಬಿಡುವ ಹೂಸು ಕೂಡ ನನಗೆ ತುಂಬಾ ಇಷ್ಟ ಎಂದಿದ್ದರು.

ಶ್ರುತಿ ಹಾಸನ್ ಫುಲ್ ಬ್ಯುಸಿ ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ನಟಿ ಪ್ರಭಾಸ್ ಅವರ ಸಲಾರ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಲಾರ್‌ ಸಿನಿಮಾದಲ್ಲಿ ಶ್ರುತಿ ಹಾಸನ್ ‘ಆದ್ಯ’ ಪಾತ್ರ ಮಾಡಿದ್ದರು. ಶ್ರುತಿ ಇತ್ತೀಚೆಗೆ ತೆಲುಗು ಚಿತ್ರ ‘ವಾಲ್ತೇರ್‌ ವೀರಯ್ಯ’ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ವೀರಸಿಂಹ ರೆಡ್ಡಿ ಮತ್ತು ವಾಲ್ತೇರ್‌ ವೀರಯ್ಯ ಜನವರಿ ತಿಂಗಳಲ್ಲಿ ಒಟ್ಟಿಗೆ ತೆರೆಗೆ ಬಂತು.

ಕಮಲ್ ಹಾಸನ್ (Kamal Haasan) ನಟನೆಯ ‘ವಿಕ್ರಮ್’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ಕಮಲ್‌ ಹಾಸನ್‌ ಪುತ್ರಿ ಶ್ರುತಿ ಹಾಸನ್‌ ಅವರಿಗೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಲೋಕೇಶ್‌ ಕನಕರಾಜ್‌. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ (RKFI) ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading
Advertisement
Shata Chandika Yaga
ಚಿಕ್ಕಬಳ್ಳಾಪುರ1 hour ago

ಚಿಕ್ಕಬಳ್ಳಾಪುರದ ವಾಯುದೇವ, ರಾಮಕೃಷ್ಣ ದೇವರ ಸನ್ನಿಧಾನದಲ್ಲಿ ಶತ ಚಂಡಿಕಾ ಯಾಗ ಸಂಪನ್ನ

Prajwal Revanna Case
ಕರ್ನಾಟಕ1 hour ago

Prajwal Revanna Case: ಸಂಸದ ಪ್ರಜ್ವಲ್ ರೇವಣ್ಣ ಗೆಸ್ಟ್ ಹೌಸ್‌ನಲ್ಲಿಲ್ಲ ಸಿಸಿ ಕ್ಯಾಮೆರಾ?; ಹಲವು ಅನುಮಾನ

Danesh Palyani
ವಿದೇಶ2 hours ago

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Bangalore University
ಕರ್ನಾಟಕ2 hours ago

Bangalore University: ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Prajwal Revanna
ಕರ್ನಾಟಕ2 hours ago

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

CSK vs PBKS
ಕ್ರೀಡೆ2 hours ago

CSK vs PBKS: ಚೆನ್ನೈಗೆ ತವರಿನಲ್ಲೇ ಆಘಾತವಿಕ್ಕಿ ಪ್ಲೇ ಆಫ್​ ಆಸೆ ಜೀವಂತವಿರಿಸಿದ ಪಂಜಾಬ್​

Neha Murder Case
ಕರ್ನಾಟಕ3 hours ago

Neha Murder Case: ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ: ಅಮಿತ್‌ ಶಾಗೆ ನೇಹಾ ತಂದೆ ಮನವಿ

Love Jihad
ದೇಶ3 hours ago

Love Jihad: ಹಿಂದು ಎಂಬಂತೆ ಬಿಂಬಿಸಿ, ಯುವತಿಯನ್ನು ನಂಬಿಸಿ, ಕೊನೆಗೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

Union Minister Pralhad Joshi election campaign in kalaghatagi
ಧಾರವಾಡ3 hours ago

Lok Sabha Election 2024: ಕಾಂಗ್ರೆಸ್ಸಿನ 1 ಲಕ್ಷ ರು. ಬೋಗಸ್ ಗ್ಯಾರಂಟಿ: ಪ್ರಲ್ಹಾದ್‌ ಜೋಶಿ

Ikbal hussain
ಕರ್ನಾಟಕ4 hours ago

Iqbal Hussain: ಯುವತಿ ಜತೆ ಶಾಸಕ ಇಕ್ಬಾಲ್ ಹುಸೇನ್ ವಿಡಿಯೊ ಕಾಲ್ ವೈರಲ್; ಎಫ್‌ಐಆರ್‌ ದಾಖಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌