Site icon Vistara News

South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!

South Indian Cinema

ಬೆಂಗಳೂರು : ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಕುಟುಂಬದ ಕುರಿತು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. 2022ರಲ್ಲಿ ದಕ್ಷಿಣ ಭಾರತದ ಸೆಲೆಬ್ರಿಟಿಗಳು (South Indian Cinema) ಸಹ ತಮ್ಮ ಜೀವನದ ಸಂತೋಷದ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ. ಹಲವು ನಟಿಯರು ಈ ವರ್ಷ ತಾಯಿಯಾಗಿದ್ದಾರೆ. ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಸ್ವಾಗತಿಸಿದ್ದಾರೆ. ಇಲ್ಲಿದೆ ಮಾಹಿತಿ.

ಕಾಜಲ್ ಅಗರ್ವಾಲ್
ಅಕ್ಟೋಬರ್ 2020ರಲ್ಲಿ ಮದುವೆಯಾದ ನಟಿ ಕಾಜಲ್ ಅಗರ್ವಾಲ್ ಮತ್ತು ಪತಿ ಗೌತಮ್ ಕಿಚ್ಲು ಏಪ್ರಿಲ್ 2022ರಲ್ಲಿ ತಮ್ಮ ಮೊದಲ ಮಗುವನ್ನು ಬರ ಮಾಡಿಕೊಂಡರು. ಏಪ್ರಿಲ್ 19, 2022ರಂದು ಕಾಜಲ್ ಮಗನಿಗೆ ಜನ್ಮ ನೀಡಿದರು. ಸಂಬಂಧಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಶುಭ ಸುದ್ದಿಯನ್ನು ಹಂಚಿಕೊಂಡಿದ್ದರು.

ನಯನತಾರಾ
ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ತೋಳಿನಲ್ಲಿ ದಂಪತಿ ಮಕ್ಕಳನ್ನು ಹಿಡಿದು ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿತ್ತು.‌

ಚಿನ್ಮಯಿ
ಚಿನ್ಮಯಿ ಅವರು ಗಾಯಕಿ ಹಾಗೂ ಕಂಠ ದಾನ ಕಲಾವಿದೆ ಆಗಿದ್ದಾರೆ. ನಟ-ಚಲನಚಿತ್ರ ನಿರ್ಮಾಪಕ ರಾಹುಲ್ ರವೀಂದ್ರನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವಳಿ ಮಕ್ಕಳನ್ನು ಬರಮಾಡಿಕೊಂಡದ್ದನ್ನು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ದೃಪ್ತಾ ಮತ್ತು ಶರ್ವಾಸ್ ಎಂದು ಮಕ್ಕಳಿಗೆ ಹೆಸರಿಟ್ಟದ್ದರು. ಬಾಡಿಗೆ ತಾಯ್ತನದ ಮೂಲಕ ತಮ್ಮ ಮಕ್ಕಳನ್ನು ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು.

ಇದನ್ನೂ ಓದಿ | Pathan Controversy | ಪುತ್ರಿ ಜತೆ ಶಾರುಖ್‌ ಪಠಾಣ್‌ ಸಿನಿಮಾ ವೀಕ್ಷಿಸಲಿ, ನಟನಿಗೆ ಸವಾಲೆಸೆದ ಮಧ್ಯಪ್ರದೇಶ ಸ್ಪೀಕರ್‌

ಪ್ರಣೀತಾ ಸುಭಾಷ್‌
ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್‌ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಫೋಟೊಗಳನ್ನು ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿಕೊಂಡಿದ್ದರು. ನಟಿ ಪ್ರಣೀತಾ ಸುಭಾಷ್‌ 2021ರ ಮೇ ತಿಂಗಳಲ್ಲಿ ತಮ್ಮ ಬಹುಕಾಲದ ಸ್ನೇಹಿತ ನಿತಿನ್‌ ರಾಜು ಅವರೊಂದಿಗೆ ಸರಳವಾಗಿ ಮದುವೆಯಾಗಿದ್ದರು. ಕೋವಿಡ್‌ 19 ಹಿನ್ನೆಲೆಯಲ್ಲಿ ಇವರ ಆಪ್ತರು ಮಾತ್ರ ವಿವಾಹದಲ್ಲಿ ಪಾಲ್ಗೊಂಡಿದ್ದರು. ಕನ್ನಡದಲ್ಲಿ ʻಪೊರ್ಕಿʼ ಸಿನಿಮಾದಲ್ಲಿ ನಟಿಸಿದ್ದ ಅವರು ಬಳಿಕ ಬಹುಭಾಷಾ ಚಿತ್ರಗಳಲ್ಲೂ ತೊಡಗಿಸಿಕೊಂಡಿದ್ದರು. 2019ರಲ್ಲಿ ಕೊನೇ ಬಾರಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.

ಸೌಂದರ್ಯ ರಜನಿಕಾಂತ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ ಎರಡನೇ ಮಗಳು ಸೌಂದರ್ಯ ರಜನಿಕಾಂತ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಸೌಂದರ್ಯರಿಗೆ ಇದು ೨ನೇ ಮಗುವಾಗಿದ್ದು, ವೀರ್‌ ರಜನಿಕಾಂತ್‌ ವನಂಗಮುಡಿ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದ್ದರು. ಮೊದಲ ಮಗನಿಗೆ ವೇದ್‌ ಎಂದು ಹೆಸರಿಡಲಾಗಿದೆ. ಅಶ್ವಿನ್‌ ರಾಮ್‌ಕುಮಾರ್‌ ಜತೆ ಸೌಂದರ್ಯ 2010ರಲ್ಲಿ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತ್ತು. 2017ರಲ್ಲಿ ಸೌಂದರ್ಯ ಮತ್ತು ಅಶ್ವಿನ್‌ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್‌​ ವನಂಗಮುಡಿ ಜತೆ ಸೌಂದರ್ಯ ಎರಡನೇ ಮದುವೆ ಮಾಡಿಕೊಂಡರು.

ಇದನ್ನೂ ಓದಿ | Rishab Shetty | 400 ಕೋಟಿ ರೂ. ಗಳಿಕೆ ಕಂಡ ಕಾಂತಾರ ಸಿನಿಮಾಗೆ ರಿಷಬ್‌ ಪಡೆದುಕೊಂಡ ಸಂಭಾವನೆ ಎಷ್ಟು?

Exit mobile version